ವಿಷಯಕ್ಕೆ ಹೋಗು

ಪುಟ:ಸತ್ಯವತೀ ಚರಿತ್ರೆ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

\# • # k * * * * * * + * * * * * * * ... , ಇಸಿ % Fx = = ನಾಲ್ಕನೆಯ ಪ್ರಕರಣ ೧೭ ಬಾಗಿಲು ಯಾವಾಗಲೂ ಮುಚ್ಚಿರುವುದು. ಆಗಾಗ ಯಶೋದಮ್ಮನು ಕಣ್ಮರೆ ಯದೆ ಕದಗಳನ್ನೆಲ್ಲಾ ಹೆಚ್ಚು ತಿದ್ದಳು, ಅದರಿಂದ ಹೆರಿಗೆಮನೆ ಮಧ್ಯಾಹ್ನದಲ್ಲಿಯ ಕತ್ತಲೆಯಾಗಿದ್ದಿತು. ಇದಲ್ಲದೆ ಬೆಳ್ಳುಳ್ಳಿಯ ನಾತವೂ ಕುಂಪಟಿಯ ಹೊಗೆಯ ಸೇರಿ ಗಾಳೆಯನ್ನೆ ಲ್ಲಾ ಕೆಡಿಸಿದ್ದುವು. ಇದರಿಂದ ಒಳಗೆ ಹೋದ ಜನಗಳು ಕೊಂಚ ಹೊತ್ತಾದರೂ ನಿಲ್ಲುವುದಕ್ಕೆ ಆಗುತ್ತಿರಲಿಲ್ಲ. ಆ ಮನೆಯ ಬಾಗಿಲಲ್ಲಿ ಒಂದು ಹಳೆ ಯೆಕ್ಕಡವೂ ಒಂದು ಲೋಳಿಸರದ ಗಿಡವೂ ಒಂದು ನಾಯಿತುಲಸಿ ಗಿಡವೂ ಬೇವಿನ ಸೊನ್ನೂ ನೇತಾಡುವಂತೆ ಕಟ್ಟಿದ್ದುವು. ಆ ಮನೆಯ ದುರ್ಗಂಧವು ದಾರಿ ಹಿಡಿದು ಕೊಂಡು ಹೋಗುವ ಜನರಿಗೆ ಎಷ್ಟೋ ಅಸಹ್ಯವಾಗಿರುವಾಗ ಯಾವಾಗಲೂ ಮನೆ ಯಲ್ಲಿಯೇ ಇರುವವರಸೌಖ್ಯವು ಅಷ್ಟಿಷ್ಟೆಂದು ಹೇಳಲಾಗುವುದೇ ? ಬಾಣಂತಿ ಯು ದಾಹದಿಂದ ನಾಲಗೆ ಒಣಗಿಹೋಗುತ್ತದೆಂದು ಕೂಗಿಕೊಂಡರೂ ಹಸಿವಿನಿಂದ ಪ್ರಾಣಹೋಗುತ್ತದೆಂದು ಅತ್ತಾಗ ನಾಲ್ಕನೆಯ ದಿನದವರೆಗೆ ಅದರ ಹೆಸರನ್ನೇ ಎತ್ತ ಕೂಡದೆಂದು ಯಶೋದಮ್ಮ ನು ಕೋಪಿಸಿಕೊಳ್ಳುತ್ತಿದ್ದಳು. ಮೂರನೆಯದಿನ ಸುಂದರಮ್ಮನಿಗೆ ಕಣ್ಣುಗುಡ್ಡೆ ಸಿಕ್ಕಿ ಕೊಂಡಿತು. ಹೊಟ್ಟೆಯಲ್ಲಿ ಒಂದುತರವಾದ ಸಂಕಟವಾಗತೊಡಗಿತು. ಮತ್ತೂ ಕೆಲವು ದುರ್ಲಕ್ಷಣಗಳು ಕಂಡುಬಂದುವು. ಆದರೂ ಅವಳು ಅದನ್ನು ಹೇಳಿದರೆ ಇನ್ನೂ ಹೆಚ್ಚಾಗಿ ಲಂಘನಮಾಡಿಸುವರೆಂಬ ಭಯದಿಂದ ಯಾರಿಗೂ ಹೇಳಲಿಲ್ಲ, ಸತ್ಯವತಿಗೆ ಮಾತ್ರ ರಹಸ್ಯವಾಗಿ ಹೇಳಿದಳು. ಸತ್ಯವತಿಯು ಅದರ ಕಾರಣವನ್ನು ತಿಳಿದು, ಯಶೋದಮ್ಮ ನು ಊಟಕ್ಕೆ ಹೆ ದಾಗ ಯಾರಿಗೂ ತಿಳಿಯದಂತೆ ತನ್ನ ಕಿರುಮನೆಯಿಂದ ಬಂದು, ದೊಡ್ಡಿಯ ಕದವನ್ನು ತೆರೆದು, ಕುಂಪಟಿಯನ್ನು ಹೊರಗಿಟ್ಟು, ಹೆರಿಗೆಮನೆಗೆ ಗಾಳಿ ಬರುವಂತೆ ಮಾಡಿ ಗುಟ್ಟಾಗಿ ಕುಡಿಯುವುದಕ್ಕೆ ತಣ್ಣೀರನ್ನು ತಂದು ಕೊಟ್ಟಳು, ಅದರಿಂದ ಬಾಣಂ ತಿಯ ದೇಹವು ಸ್ವಲ್ಪಸ್ವಸ್ಥವಾಯಿತು. ಅನ್ನೋದಕಗಳನ್ನು ಕೊಡದಿದ್ದರೂ ಬೇಕಾದಷ್ಟು ಹಿಂಗು, ಶುಂಠಿ, ಮೆಳಸು, ಲವಂಗ ಮುಂತಾದುವುಗಳನ್ನು ತಿನ್ನಿ ಸು ತಿದ್ದರು, ನಾಲ್ಕನೆಯ ದಿನ ಪಥ್ಯಕ್ಕೆ ಹಾಕಿದ ಮೇಲೆ ನಾರಾಯಣಮೂರ್ತಿ ರಾಜಮಹೇಂದ್ರಕ್ಕೆ ಹೊರಟುಹೋದನು. ಅನ್ನ ಹಾಕಿದಮೇಲೆ ಬಾಣಂತಿ ತನ್ನ ದೇಹಸ್ಥಿತಿಯನ್ನು ಯಶೋದಮ್ಮನಿಗೆ ತಿಳಿಸಿದಳು. ಆಕೆ ಭಯಪಟ್ಟು ಆ ಗ್ರಾಮದಲ್ಲಿ ಚಿಕಿತ್ಸೆ ಮಾಡುವ ಪೂಜಾರಿ ಶರಭಯ್ಯನೆಂಬ ವೈದ್ಯನನ್ನು ಕರೆತಂದಳು. ಅವನು ಹೆರಿಗೆಮನೆಗೆ ಹೋಗಿ ಬಾಣಂತಿಯ ಕಯ್ಯನ್ನು ಮುಟ್ಟಿ ನೋಡುವುದಕ್ಕೆ ಸಮ್ಮತಿಸದೆ, ಸೂಲುಗಿತ್ತಿಯ ಮಲಕವಾಗಿಯೇ ಕಟ್ಟೋಡಿಸಿ ತನಗೆ ಯಾವ