ಪುಟ:ಸತ್ಯವತೀ ಚರಿತ್ರೆ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಸತ್ಯ ವಚರಿತ್ರೆ ಔಷಧಪ್ರಯೋಗವೂ ತಿಳಿಯದಿದ್ದರೂ ಸೂತಿಕಾಭರಣ, ವಾತಧ್ವಂಸಿ, ವಾತ ರಾಕ್ಷಸ ಮುಂತಾದ ಹೆಸರುಗಳನ್ನು ಹೇಳಿ ಏನೋ ಹೊಟ್ಟೆಗೆ ಕೊಟ್ಟನು, ಅವನು ಕೊಟ್ಟ ಔಷಧಕ್ಕಿಂತ ಸತ್ಯವತಿ ಮಾಡುತ್ತಾ ಬಂದ ಉಪಚಾರವೇ ದೇಹಕ್ಕೆ ಆರೋಗ್ಯವನ್ನುಂಟು ಮಾಡಿತು, ಮಧ್ಯಾಹ್ನ ಯಶೋದಮ್ಮನು ಭೋಜನಕ್ಕೆ ಹೋಗಿ ಸಂಜೆಯಲ್ಲಿ ಹೆರಿಗೆ ಮನೆಗೆ ಬರುತ್ತಿದ್ದಳು, ಸತ್ಯವತಿ ಗುಟ್ಟಾಗಿ ದೊಡ್ಡಿಯ ಕದವನ್ನು ತೆರೆದಿದ್ದು, ಯಶೋದಮ್ಮನು ಬರುವಾಗ್ಗೆ ಏನೂ ತಿಳಿಯದವಳಂತೆ ಕದವನ್ನು ಹೊಚ್ಚಿ ಕೊಂಡು ಎಂದಿನಂತೆಯೇ ಇರುತ್ತಿದ್ದಳು, ಅರುವತ್ತು ಗಳಿ ಗೆಯ ಕದಹೊಚಿದ್ದ ಮರುದಿನಗಳೊಳಗಾಗಿಯೇ ದುರ್ಗಂಧದಿಂದ ಆ ಹೆರಿಗೆ ಮನೆಯಲ್ಲಿ ತೊಪ್ಪೆಯ ಹುಳುಗಳಂತಿರುವ ರಕ್ಕೆ ಹುಳುಗಳು ಹುಟ್ಟಿದುವು. ಯಾರೋ ಕದ ತೆರೆದರು. ಅದರಿಂದ ಪಿಶಾಚಿಗಳೇ ಈ ರೂಪವಾಗಿ ಒಂದಿವೆ-ಎಂದು ನೋಡಿ ದವರು ಕೊಲ್ಲುತ್ತಾ ಬಂದರು. ಐದನೆಯದಿನ ಶಿಶು ಹಾಲು ಕುಡಿಯುವುದನ್ನು ಬಿಟ್ಟು ಬಿಟ್ಟಿತು. ಆದುದರಿಂದ ಯಶೋದಮ್ಮ ನು ಹೊಲೆಯರಮ್ಮನ ಗುಡಿಯ ಹತ್ತಿರ ಇದ್ದ ಹೊಲತಿಯ ಬಳಿಗೆ ಶಕುನವನ್ನು ಕೇಳಬೇಕೆಂದು ಹೋದಳು. ವೆಂಕ ಟಾಚಲಪತಿಯು ಕುಶಲದಿಂದ ಮಗುವಿಗೆ ಹೀಗಾಗಿದೆ ಎಂದು ಅವಳು ಹೇಳಿದಳು. ಆಮೇಲೆ ಮನೆಯವರು ವೆಂಕಟಾಚಲಪತಿಗೆ ಒಂದು ರೂಪಾಯಿ ಮೀಸಲು ಕಟ್ಟಿ ಮಗುವಿಗೆ ತಿರುಪತಿ ಬೆಟ್ಟದಮೇಲೆ ಚೌಲವಾಡುತ್ತೇವೆಂದು ಕಯ್ಯುಗಿದು ಹರಸಿಕೊಂಡರು. ಆರನೆಯದಿನದ ರಾತ್ರಿ ಶಿಶು ತೀರಿಹೋಯಿತು. ಮಗುವಿಗೆ ಸಂದಾಯಿತು, ಅದರಿಂದ ಸತ್ತು ಹೋಯಿತು ಎಂದು ಎಲ್ಲರೂ ನಿಶೆ ಸಿದರು. ಹತ್ತು ದಿನಗಳಲ್ಲಿ ಕದತೆರೆದು ಇದ್ದುದರಿಂದ ಪಿಶಾಚಿ ಒಳಗೆ ನುಗ್ಗಿ ಮಗುವನ್ನು ಮುರಿದುಕೊಂಡು ಹೋಯಿತು ಎಂದು ತಾಯಿಮಾತ್ರ ಮನಸ್ಸಿನಲ್ಲಿ ವ್ಯಸನಪಟ್ಟಳು. ಆದರೆ ಈ ಸಂಗತಿ ಯಶೋದಮ್ಮನಿಗೆ ತಿಳಿದರೆ ಸತ್ಯವತಿಯನ್ನು ಹೊಡೆದು ಬಯ್ದಳು ಎಂಬ ಭಯದಿಂದ ಸುಂದರಮ್ಮನು ಬಹು ಕಾಲದವರೆಗೆ ಯಾರೊಡ ನೆಯ ಹೇಳಲಿಲ್ಲ, ಬಾಣಂತಿ ಹನ್ನೊಂದನೆಯದಿನ ಶುದ್ದ ಸ್ಮಾ ನಮಾಡಿ ಸುಖ ವಾಗಿದ್ದಳು. --