ಪುಟ:ಸತ್ಯವತೀ ಚರಿತ್ರೆ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಪ್ರಕರಣ FP/1, '\r\n\y 1

  • AMMANNA#\\Avvv//*/*

F\r\ \\v 1, ಐದನೆಯ ಪ್ರಕರಣ, ಚೈತ್ರ ಶುದ್ಧ ಸಪ್ತಮಿಯದಿನ ಯಶೋದಮ್ಮನ ಸವತಿಯ ಅಣ್ಣನ ಮೊಮ್ಮ ಗನಿಗೆ ಚೌಲ, ಅವರ ಮನೆಯವರು ಅದರ ಹಿಂದಣದಿನದ ರಾತ್ರಿಯೇ ಬಂದು ಯಶೋದಮ್ಮನ ಮನೆಯಲ್ಲಿ ಎಲ್ಲರನ್ನೂ ಊಟಕ್ಕೆ ಕರೆದಿದ್ದರು. ಆ ಸವತಿಯ ಅಣ್ಣನು ತನ್ನ ಎರಡನೆಯ ಹೆಂಡತಿಗೆ ಒಂದು ಗಂಡುಮಗು ಹುಟ್ಟಿದಮೇಲೆ ಲೋಕಾಂತರಕ್ಕೆ ಸೇರಿದನು. ಆತನ ಮಗನ ಹೆಸರು ಶ್ರೀರಾಮ; ಆತನ ಕುಮಾ ರನಿಗೇ ಈದಿನ ಚೌಲವಾಗಬೇಕಾದುದು ಬೆಳಕು ಹರಿದಮೇಲೆ ಸೊಸೆಯರನ್ನು ಸಂಗಡ ಕರೆದುಕೊಂಡು ಅಣ್ಣನಮನೆಗೆ ಹೋಗುವುದಕ್ಕಾಗಿ ಯಶೋದಮ್ಮನು ಹೊರಟು, ತಲೆಬಾಚಿಕೊಳ್ಳುತ್ತಿದ್ದ ಹಿರಿಯ ಸೊಸೆಯನ್ನು ನೋಡಿ-ಬೇಗ ಬಾ ಬೇಗ ಬಾ ; ಎಂದು ಆತುರಪಡಿಸಿ ಒಂದೇ ಉಸಿರಾಗಿ ನಾಲ್ಕು ಸಾರಿ ಕೂಗಿ ಕರೆದಳು. ಸುಂ-ನಾನೇನು ಒಳಗೆ ಆಡುತ್ತಿದ್ದೇನೆಯೇ ? ಏಕೆ ಹೀಗೆ ಅರಚಿಕೊಳ್ಳು ವಿರಿ ? ಪಟ್ಟಿಯ ಸೀರೆಯನ್ನು ಪೆಟ್ಟಿಗೆಯೊಳಗಿಟ್ಟು ಬೀಗಹಾಕಿಕೊಂಡು ನೀವು ಬೀದಿಯಲ್ಲಿ ನಿಂತು ಕೂಗಿದರೆ ಈ ಹಳೆಯ ಸೀರೆಯನ್ನು ಉಟ್ಟು ಕೊಂಡು ನಾನು ಹೇಗೆ ಬರಲಿ ? - ಯ-ಪುನಃ ಈಗ ನಾನು ಒಳಗೆ ಬರಲಾರೆ; ಪಟ್ಟೆ ಯಸೀರೆಯಿಲ್ಲದಿದ್ದರೆ ನಿನ್ನ ಅಂದವು ಕಡಮೆಯಾಗುವುದೋ ? ಆಹಳೆಯ ಸೀರೆಯನ್ನೇ ಉಟ್ಟು ಕೊಂ ಡು ಬಾ. - ಎಂ-ನಾನು ಒಳ್ಳೆಯ ಬಟ್ಟೆಯುಟ್ಟು ಕೊಂಡರೆ ನಿಮಗೆ ಸಹನೆಯಿಲ್ಲ. ನಂಟರ ಮನೆಗೆ ಊಟಕ್ಕೆ ಹೋಗುವಾಗಲೂ ಒಳ್ಳೆಯ ಸೀರೆಯನ್ನುಟ್ಟು ಕೊಂಡು ಹೋಗಬಾರದೇ ? ಈ ಮಣ್ಣಂಚಿನ ಸೀರೆಯಲ್ಲೇ ಹೋಗಬೇಕೇ ? ಯ-ಎಲೇ ! ನಿನ್ನ ಬಾಯಲ್ಲಿ ಹುಣ್ಣು ಹುಟ್ಟಿ ; ನೀನು ಬಟ್ಟೆಯುಟ್ಟು ಕೊಂಡರೆ ನನಗೆ ಸಹನೆಯಿಲ್ಲವೆ ? ಈಗ ನಾವು ನಿನಗೆ ಸೀರೆಯನ್ನು ಕೊಂಡು ಕೊಡುವುದಿಲ್ಲವೇ ? ನೀನು ಉಟ್ಟು ಕೊಂಡಿರುವ ಸೀರೆ ನಿಮ್ಮ ಪ್ರನು ಕಳುಹಿಸಿದ್ದೇ ? “ ನಾಯಿಯನ್ನು ತಂದು ಅಂದಳದಲ್ಲಿಟ್ಟರೆ ಕದಗಳನ್ನೆಲ್ಲಾ ಕತ್ತರಿಸಿ ಕಡಿ €ಯಿತು ” ಎಂದು ಗಾದೆಯುಂಟು. ಕುಲಹೀನೆಯರನ್ನು ಮನೆಗೆ ತಂದುಕೊಂಡರೆ ನಿಮ್ಮ ಬುದ್ಧಿಯನ್ನು ನೀವೆಂದಿಗೆ ಬಿದ್ದೀರಿ ?