ಆರನೆಯ ಪ್ರಕರಣ ೨೫
- 1/4 */ YV12 1/\ \ #1 •\\* \ / 8, - 1 # •# /\\
11 \ * * * # 4 # " - Y \ tureddye- Avenwwwheedhavew ಆರನೆಯ ಪ್ರಕರಣ. ಆದಿನ ರಾತ್ರಿ ಮನೆಗೆ ಬಂದಮೇಲೆ ಸುಂದರಮ್ಮನುಮಲಗುವ ಮನೆಗೆ ಹೋಗಿ, ಗಂಡನೊಂದಿಗೆ ತನಗೂ ತನ್ನ ಅತ್ತೆಗೂ, ನಡೆದ ಕಲಹವನ್ನು ಹೇಳಿ ತಾನು ಕೆರೆಯಲ್ಲಾದರೂ ಭಾವಿಯಲ್ಲಾದರೂ ಬಿದ್ದು ಸಾಯುವೆನೆಂದು ಅಳತೊಡಗಿದಳು. ವೆಂಕಟೇಶನು ಹೆಂಡತಿಯ ಮಾತನ್ನು ನಂಬಿ ನಾವು ಬೇರೆ ಇರೋಣ ಎಂದು ಅವ ಇನ್ನು ಸಂತೈಸಿ ಮರುದಿನದಿಂದ ತಾಯಿಯೊಡನೆ ಸರಿಯಾಗಿ ಮಾತಾಡದೆ ಸಿಡು ಸಿಡುಗುಟ್ಟ ತೊಡಗಿದನು. ಒಂದುದಿನ ಹೆಂಡತಿಯ ತಾಯಿ ಯ ಪುನಃ ಜಗಳವಾ ಡುತ್ತಿರುವಾಗ ಹೆಂಡತಿಯ ಪರವಾಗಿ ಕೆಲವು ಕೆಟ್ಟ ಮಾತುಗಳನ್ನು ಆಡಿದನು, ಅದ ರಿಂದ ಯಶೋದಮ್ಮನು ಕೋಪಿಸಿಕೊಂಡು ಯಾರೆಷ್ಟು ವಿಧವಾಗಿ ಬೇಡಿಕೊಂಡರೂ ಅನ್ನವನ್ನು ತಿನ್ನದೆ ಎದ್ದು ಹೋಗಿ ನೆರೆಮನೆಯಲ್ಲಿ ಕುಳಿತಳು. ಆಗ ಸಾವಿ ತ್ರಿಯ ಸತ್ಯವತಿಯ ಹೋಗಿ ಯಶೋದಮ್ಮ ನನ್ನು ಎಷ್ಟು ಬಗೆಯಾಗಿ ಪ್ರಾರ್ಥಿ ಸಿದರೂ ಅವಳು ಬೇರೆ ಊಟಕ್ಕೆ ಬರಲಿಲ್ಲ, ಸ್ವಲ್ಪ ಹೊತ್ತಿನಮೇಲೆ ಅತಿ ಪ್ರಯಾಸ ದಿಂದ ಅವಳನ್ನು ಸಮಾಧಾನಪಡಿಸಿ ದೀವಿಗೆ ಕಚ್ಚುವ ಹೊತ್ತಿನಲ್ಲಿ ಬಲಾತ್ಕಾರದಿಂದ ಮನೆಗೆ ಕರೆತಂದು ಎಲೆಯ ಮುಂದೆ ಕುಳ್ಳಿರಿಸಿದರು, ಆದರೆ ಆದಿನ ಆಕೆ ಸರಿಯಾಗಿ ಊಟಮಾಡದೆ ಬಾಯಲ್ಲಿ ಎರಡು ತುತ್ತನ್ನು ಇಟ್ಟು ಕೊಂಡು ಎಲೆಬಿಟ್ಟು ಎದ್ದು ಹೋದಳು. ಆದಿನ ಮೊದಲುಗೊಂಡು ಹಿರಿಸೊಸೆಯಾದ ಸುಂದರಮ್ಮನಿಗೂ ಯಶೋದಮ್ಮನಿಗೂ ಮಾತೇ ಇಲ್ಲ, ಆದರೂ ಅವರು ಪದೇಪದೇ ಬೆಕ್ಕನ್ನೂ ಇಲಿಯನ್ನೂ ನೆವಮಾಡಿಕೊಂಡು ಒಬ್ಬರನೊಬ್ಬರು ಬಯ್ದಾಡುತ್ತಾ ಇದ್ದರು. ಒಂದಾನೊಂದುದಿನ ಅವರಿಬ್ಬರೂ ನಿಷ್ಕಾರಣವಾಗಿ ಯಾವುದೋ ಒಂದು ನೆವದಿಂದ ಹೊಡೆದಾಡಿ ಬಾಯಿಂದ ಬರಲಾಗದ ಕೆಟ್ಟ ಮಾತುಗಳನ್ನು ಆಡಿದರು. ಬರಬಾರ ದುದು ಬಂದು ನಿನ್ನ ಗಂಡನನ್ನೂ ಮಕ್ಕಳನ್ನೂ ಹೊತ್ತು ಕೊಂಡು ಹೋಗಿ ಎಂದು ಯಶೋದಮ್ಮನು ಬಯ್ದಳು. ನಿನ್ನ ಗಂಡನೂ ನಿನ್ನ ಮಕ್ಕಳೂ ಸಾಯಬಾರದೇ ? ಎಂದು ಸುಂದರಮ್ಮನು ಶಪಿಸಿದಳು. ಗಂಡಸರು ಮನೆಗೆ ಬರುವಾಗ್ಗೆ ಕುಯ್ಯೋ ಮೊರೋ ಎಂದು ಅಳುತ್ತಾ ಇಬ್ಬರೂ ಆಮನೆಯನ್ನು ಮಹಾತ್ಮಶಾನದಂತೆ ಮಾಡಿ ದ್ದರು. ಗಂಡನು ಮೊದಲು ತಾಯಿಯ ಪಕ್ಷವನ್ನು ವಹಿಸಿದ್ದಾಗ ಸುಂದರಮ್ಮನು ಅತ್ತೆ ಬಯ್ದರೆ ಪ್ರತಿಯಾಗಿ ಒಯ್ದು ಪ್ರತ್ಯಕ್ಷವಾಗಿ ತನ್ನ ಅತ್ತೆಯನ್ನು ಇದಿರಿಸುವು