ಪುಟ:ಸತ್ಯವತೀ ಚರಿತ್ರೆ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಸತ್ಯ ವಚರಿತ್ರೆ elu** ***y ffy * * * *a, ಬಹಳ, ಆದರಿಂದ ಎರಡನೆಯ ಹೊತ್ತು ಊಟವೇ ಇಲ್ಲ. ಕ್ರಮವಾಗಿ ವ್ರತ ಹಿಡಿದು ಉಪವಾಸಮಾಡುತ್ತಾ ಬಹು ನಿಯಮ ದಿಂದ ಮನೆಗೆಲಸಗಳನ್ನೆಲ್ಲಾ ಮಾಡುತ್ತಾಳೆ, ಶ್ರೀರಾಮನ ಮನೆಗೆ ಯಶೋದಮ್ಮನು ಸೊಸೆಯರೊಂದಿಗೆ ಹೋಗುವಾಗ್ಗೆ ಶ್ರೀರಾಮನ ಹೆಂಡತಿ ಬಾಗಿಲಲ್ಲೇ ನಿಂತಿದ್ದಳು. ಕಡುಬು ಮುಂತಾದ ಭಕ್ಷ್ಯಗಳನ್ನು ಮಾಡುವುದಕ್ಕಾಗಿ ಶ್ರೀರಾಮನ ತಾಯಿ ಮಡಿ ಯುಟ್ಟು ಕೊಂಡು ಅಡಿಗೆಮಾಡುತ್ತಾ ಯಶೋದಮ್ಮನನ್ನು ರಹಸ್ಯವಾಗಿ ಒಳಗೆ ಕರೆದು ಏನು ಮಾಡೋಣ ಎಂದು ಆಲೋಚಿಸಿದಳು, 6 ಅತ್ತಿಗೆ ! ನನ್ನ ಸೊಸೆ ಬಾಣಂತಿ, ಅವಳು ಹೆತ್ತು ಮರು ತಿಂಗಳಾಯಿತು. ಮಗು ಸತ್ತು ಹೋದುದ ರಿಂದ ಅಳುತ್ತಿರುವಳು. ಅವಳು ಏನೂ ಮಾಡಲಾರಳಷ್ಟೆ ? ಎರಡನೆಯ ಸೊಸೆ ಮಹಾರಾಣಿ, ಭಾಗ್ಯವಂತರ ಮಗಳು. ಆಕೆಗೆ ದೂರವಾಗಿಯೇ ಅಡ್ಡಬಿದ್ದು, ನಾವು ಸುಮ್ಮನಿರಬೇಕು, ಕೆಲಸಮಾಡೆಂದು ನಾವು ಅವಳ ಇದುರಿಗೆ ಬಾಯಿ ಬಿಡುವುದಕ್ಕಾದೀತೇ ? ನಾನು ಮುದುಕಿ, ನನಗೆ ಕಣ್ಣೆ ಕಾಣದು. ” ಎಂದು ಯಶೋದಮ್ಮನು ಕೆಲವು ನೆವಗಳನ್ನು ಹೇಳಿ ತಪ್ಪಿಸಿಕೊಂಡಳು. ಎಷ್ಟು ಮಟ್ಟಿಗೆ ಅಡಿಗೆಯಾಗಿದೆಯೋ ನೋಡೋಣವೆಂದು ಸತ್ಯವತಿ ಒಳಗೆ ಹೋಗಿ ಅಲ್ಲಿ ಯಾರೂ ಇಲ್ಲದಿರುವುದನ್ನು ಕಂಡು ತಾನೇ ಮಡಿಯುಟ್ಟು ಕೊಂಡು ಬಂದಳು. ಯಾರೂ ಅವ ಳಿಗೆ ಹೇಳಲಿಲ್ಲ, ಆದರೂ ಅವಳು ಆಕೆಯ ಸಂಗಡ ಸೇರಿ ಭಕ್ಷ್ಯಗಳನ್ನು ಮಾಡಿ ಬಡಿಸುವುದಕ್ಕೂ ಹೋದಳು. ಅವಳ ಎನಯವನ್ನು ಕಂಡು ಯಶೋದಮ್ಮನು ಹೊರತಾಗಿ ಉಳಿದವರೆಲ್ಲರೂ ಸಂತೋಷ ಪಟ್ಟರು. ಸ್ತ್ರೀಯರೆಲ್ಲರೂ ಈ ಸತ್ಯ ವತಿಯಂತೆಯೇ ತಾವು ಐಶ್ವರ್ಯವಂತರೆಂದು ಗರ್ವಪಡದೆ ಕೆಲಸಕಾರ್ಯಗಳನ್ನು ಮಾಡಿ ಇತರರಿಗೆ ತಮ್ಮ ಕೈಯಲ್ಲಾಗುವಮಟ್ಟಿಗೂ ಸಹಾಯಮಾಡಬೇಕು. ಮೈಬಗ್ಗಿ ಕೆಲಸಮಾಡು ವುದರಿಂದ ಗೌರವಕ್ಕೇನೂ ಕೊರತೆಯುಂಟಾಗಲಾರ ದು. ಹಾಗೆ ಕೆಲಸಮಾಡುವುದರಿಂದ ಗರ್ವವಿಲ್ಲ ವೆಂದೂ ಯೋಗ್ಯಳೆಂದೂ ಎಲ್ಲರ ಕೊಂಡಾಡುವರು, ಅದರಿಂದ ಮತ್ತಷ್ಟು ಗೌರವವೂ ಪ್ರತಿಷ್ಠೆಯ ಬರುವು ದಲ್ಲದೆ ದೇಹಾರೋಗ್ಯವೂ ಸೌಖ್ಯವೂ ಉಂಟಾಗುವುವು. ಆಗ ಸತ್ಯವತಿಮಾಡಿದ ಅಲ್ಪ ಸಹಾಯದಿಂದ ಆ ಮನೆಯವರು ಮಾತ್ರವೇ ಸಂತೋಷಪಡಲಿಲ್ಲ ಗ್ರಾಮದ ಸುತ್ತುಮುತ್ತಲಿನ ಜನಗಳೂ ಆಕೆಯ ಒಳ್ಳೆಯತನವನ್ನು ಕೇಳಿ ಪರಮಾನಂದಭರಿತ ರಾದರು, ಆಗ್ರಾಮದಲ್ಲಿ ಆಕೆಗೆ ಅಪರಿಮಿತವಾದ ಕೀರ್ತಿ ಬಂದಿತು, ಆ ದಿನ ಊಟವಾದಮೇಲೆ ಯಶೋದಮ್ಮ ನು ತನ್ನ ಸೊಸೆಯರೊಂದಿಗೆ ಹೊರಟು ಸಾಯಂ ಕಾಲ ಮನೆ ಸೇರಿದಳು. ಇಇ»