ಕುಡಿದು ಮುಗಿಸಿ ಮತ್ತೆ ಹಾಡಿದನು. ಇವನು ಹಾಡುತ್ತಿರುವಾಗ ಹಿ೦ದ
ಣಿ೦ದ ಯಾರೋ ಇವನ ಬಳಿಗೆ ಬಂದು ಇವನನ್ನನುಸರಿಸಿ ಹಾಡಿದರು.
ನಂದಕುಮಾರನಿಗೆ ಬಹು ಸಂತೋಷವಾಯಿತು. ತೊದಳ್ನುಡಿಯಿಂದಮಾತ
ನಾಡುತ್ತೆ ಅಪರಿಚಿತವ್ಯಕ್ತಿಯನ್ನು ಕುರಿತು ನೀನು ಯಾರೆಂದು ಕೇಳಿದನು.
ಅಪರಿಚಿತವ್ಯಕ್ತಿಯು ಮಾತನಾಡಲಿಲ್ಲ. ನಂದಕುಮಾರನು " ನೀನು
ಸ್ತ್ರೀಯೋ ಪುರುಷನೋ " ಎಂದು ಕೇಳಿದನು.
ಅಪರಿಚಿತವ್ಯಕ್ತಿ :- ಧ್ವನಿಯಿಂದ ತಿಳಿದುಕೊಳ್ಳಲಾರದೆ ಹೋದೆಯಾ ?
ನಂದಕುಮಾರ :- ಧ್ವನಿಯು ಪುರುಷನದೆಂದು ತೋರುವುದು.
ಅಪರಿಚಿತವ್ಯಕ್ತಿ :- ಹಾಗಾದರೆ ನೀನು ಕಿವುಡನೇಸರಿ.
ನಂದಕುಮಾರ :- ಓಹೋ ಈಗ ತಿಳಿಯಿತು. ನನಗೆ ಮದ್ಯದ ವೇಗ
ದಿಂದ ನೀನು ಪುರುಷನೆ೦ಬ ಭಾವನೆಯುಂಟಾಗಿದ್ದಿತು. ನೀನು ಸ್ತ್ರೀಯೇ
ಅಹುದು. ನೀನು ಯಾವ ಕುಲದವಳು ?
ಅಪರಿಚಿತ ನಾನೊಬ್ಬ ವಾರಾಂಗನೆ.
ನಂದಕುಮಾರನಿಗೆ ವರ್ಣನಾತೀತವಾದ ಸಂತೋಷವಾಯಿತು.
ಅವನು ಸೌಧದಲ್ಲಿ ಕುಳಿತು ಸುರೆಯನ್ನು ಸೇವಿಸುತ್ತಿದ್ದಾಗ ವೇಶ್ಯೆಯನ್ನು
ಕರೆತರಬೇಕೆಂದು ಭೃತ್ಯನಿಗೆ ಹೇಳಿದ್ದನು. ಈಗ ವೇಶ್ಯೆಯು ತಾನಾಗಿಯೇ
ಬ೦ದಿರುವಳು. ಇನ್ನು ನಂದಕುಮಾರನ ಸಂತೋಷಕ್ಕೆ ಮಿತಿಯುಂಟೇ ?
ಅಪರಿಚಿತವ್ಯಕ್ತಿಯನ್ನು ಮತ್ತೆ ಹಾಡೆಂದು ಕೇಳಿದನು. ಗಾನವು ಪ್ರಾರಂಭ
ವಾಯಿತು. ನಂದಕುಮಾರನಿಗೆ ಮತ್ತೆ ಸುರೆಯನ್ನರ್ಚಿಸಬೇಕೆಂದು ಆಸೆ
ಯಾಯಿತು. ಪಾಠಕಮಹಾಶಯರೇ ! ನಾವು ವಿಚಾರಿಸಿದುದರಲ್ಲಿ ಸುರೆಯೂ
ಸೂಳೆಯೂ ಅಕ್ಕತಂಗಿಯರೆಂದು ತಿಳಿಯಿತು. ಅಕ್ಕನಾದ ಸುರೆಯು ತನ್ನನ್ನು
ಸೇವಿಸುವವರಿಗೆ ಅಂತರಂಗದಲ್ಲಿ ಸಕಲ ಸುಖಾನುಭವವನ್ನೂ ಉಂಟುಮಾಡಿ
ವೈರಾಗ್ಯವನ್ನುಪದೇಶಿಸುವಳು. ಸೂಳೆಯು ವಾಙ್ಮಾತ್ರದಿಂದಲೇ ಸ್ವರ್ಗಸೌ
ಖ್ಯವನ್ನಿತ್ತು ವೈರಾಗ್ಯವನ್ನುಪದೇಶಿಸುವಳು. ಸಾಧಾರಣವಾಗಿ ಈ ಅಕ್ಕ
ತಂಗಿಯರಿಬ್ಬರೂ ಒಬ್ಬರನ್ನೊಬ್ಬರು ಅಗಲಿರುವದಿಲ್ಲ. ಸುಖದುಃಖಗಳಿಗಾ
ಕರವಾಗಿರುವ ಈ ಫೃಥ್ವಿಯಲ್ಲಿ ಈ ಅಕ್ಕತಂಗಿಯರಿಬ್ಬರ ಅನುಗ್ರಹಕ್ಕೂ
ಪಾತ್ರರಾದವರು ಯಾರಾದರೂ ಇದ್ದರೆ ಅಂಥವರನ್ನು ನಾವು ವಿನಯದಿಂದ