ಪುಟ:ಸಂತಾಪಕ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ೦ತಾಪಕ.

೨೯



ಕುಡಿದು ಮುಗಿಸಿ ಮತ್ತೆ ಹಾಡಿದನು. ಇವನು ಹಾಡುತ್ತಿರುವಾಗ ಹಿ೦ದ
ಣಿ೦ದ ಯಾರೋ ಇವನ ಬಳಿಗೆ ಬಂದು ಇವನನ್ನನುಸರಿಸಿ ಹಾಡಿದರು.
ನಂದಕುಮಾರನಿಗೆ ಬಹು ಸಂತೋಷವಾಯಿತು. ತೊದಳ್ನುಡಿಯಿಂದಮಾತ
ನಾಡುತ್ತೆ ಅಪರಿಚಿತವ್ಯಕ್ತಿಯನ್ನು ಕುರಿತು ನೀನು ಯಾರೆಂದು ಕೇಳಿದನು.
ಅಪರಿಚಿತವ್ಯಕ್ತಿಯು ಮಾತನಾಡಲಿಲ್ಲ. ನಂದಕುಮಾರನು " ನೀನು
ಸ್ತ್ರೀಯೋ ಪುರುಷನೋ " ಎಂದು ಕೇಳಿದನು.
ಅಪರಿಚಿತವ್ಯಕ್ತಿ :- ಧ್ವನಿಯಿಂದ ತಿಳಿದುಕೊಳ್ಳಲಾರದೆ ಹೋದೆಯಾ ?
ನಂದಕುಮಾರ :- ಧ್ವನಿಯು ಪುರುಷನದೆಂದು ತೋರುವುದು.
ಅಪರಿಚಿತವ್ಯಕ್ತಿ :- ಹಾಗಾದರೆ ನೀನು ಕಿವುಡನೇಸರಿ.
ನಂದಕುಮಾರ :- ಓಹೋ ಈಗ ತಿಳಿಯಿತು. ನನಗೆ ಮದ್ಯದ ವೇಗ
ದಿಂದ ನೀನು ಪುರುಷನೆ೦ಬ ಭಾವನೆಯುಂಟಾಗಿದ್ದಿತು. ನೀನು ಸ್ತ್ರೀಯೇ
ಅಹುದು. ನೀನು ಯಾವ ಕುಲದವಳು ?
ಅಪರಿಚಿತ ನಾನೊಬ್ಬ ವಾರಾಂಗನೆ.
ನಂದಕುಮಾರನಿಗೆ ವರ್ಣನಾತೀತವಾದ ಸಂತೋಷವಾಯಿತು.
ಅವನು ಸೌಧದಲ್ಲಿ ಕುಳಿತು ಸುರೆಯನ್ನು ಸೇವಿಸುತ್ತಿದ್ದಾಗ ವೇಶ್ಯೆಯನ್ನು
ಕರೆತರಬೇಕೆಂದು ಭೃತ್ಯನಿಗೆ ಹೇಳಿದ್ದನು. ಈಗ ವೇಶ್ಯೆಯು ತಾನಾಗಿಯೇ
ಬ೦ದಿರುವಳು. ಇನ್ನು ನಂದಕುಮಾರನ ಸಂತೋಷಕ್ಕೆ ಮಿತಿಯುಂಟೇ ?
ಅಪರಿಚಿತವ್ಯಕ್ತಿಯನ್ನು ಮತ್ತೆ ಹಾಡೆಂದು ಕೇಳಿದನು. ಗಾನವು ಪ್ರಾರಂಭ
ವಾಯಿತು. ನಂದಕುಮಾರನಿಗೆ ಮತ್ತೆ ಸುರೆಯನ್ನರ್ಚಿಸಬೇಕೆಂದು ಆಸೆ
ಯಾಯಿತು. ಪಾಠಕಮಹಾಶಯರೇ ! ನಾವು ವಿಚಾರಿಸಿದುದರಲ್ಲಿ ಸುರೆಯೂ
ಸೂಳೆಯೂ ಅಕ್ಕತಂಗಿಯರೆಂದು ತಿಳಿಯಿತು. ಅಕ್ಕನಾದ ಸುರೆಯು ತನ್ನನ್ನು
ಸೇವಿಸುವವರಿಗೆ ಅಂತರಂಗದಲ್ಲಿ ಸಕಲ ಸುಖಾನುಭವವನ್ನೂ ಉಂಟುಮಾಡಿ
ವೈರಾಗ್ಯವನ್ನುಪದೇಶಿಸುವಳು. ಸೂಳೆಯು ವಾಙ್ಮಾತ್ರದಿಂದಲೇ ಸ್ವರ್ಗಸೌ
ಖ್ಯವನ್ನಿತ್ತು ವೈರಾಗ್ಯವನ್ನುಪದೇಶಿಸುವಳು. ಸಾಧಾರಣವಾಗಿ ಈ ಅಕ್ಕ
ತಂಗಿಯರಿಬ್ಬರೂ ಒಬ್ಬರನ್ನೊಬ್ಬರು ಅಗಲಿರುವದಿಲ್ಲ. ಸುಖದುಃಖಗಳಿಗಾ
ಕರವಾಗಿರುವ ಈ ಫೃಥ್ವಿಯಲ್ಲಿ ಈ ಅಕ್ಕತಂಗಿಯರಿಬ್ಬರ ಅನುಗ್ರಹಕ್ಕೂ
ಪಾತ್ರರಾದವರು ಯಾರಾದರೂ ಇದ್ದರೆ ಅಂಥವರನ್ನು ನಾವು ವಿನಯದಿಂದ