೩೧6 ರಾಮಚಂದ್ರಚರಿತ ಪುರಾಣಂ ಕಾದುವುದು ಕಂಡು ದಂಡಾಕ್ರನುಂ ಶಿಖಂಡವ್ಯಾಲಿಯುಂ ಶಿಖಂಡಿಯುಂ ಶಿಖಿಯುಂ ಕೇಸರಿಯುಂ ಕನಕನುಂ ಮೃಗಚಿಹ್ನನುಮೆಂಬಿಂದ್ರನಳಿಯಂದಿರ್ ಮೊದಲಾಗೆ ಸಲ ಬರ್ ಕುಮಾರರ್ ಮೂದಲಿಸಿ ಮುಸು ಮುತ್ತುವುದುಂ ಕಂ|| ಶ್ರೀಮಾಲಿ ನೃಪಕುಮಾರ ಸ್ತೋಮದ ತಲೆ ಸುರಿದು ಪಾಚಿ ಬೀಬಿನೆಗಂ ಸಂ || ಗ್ರಾಮದೊಳೇಸಾಡಿದನಖಿ ಲಾಮರರಾಗಸದೊಳೊಡನೆ ತಲೆದೂಗುವಿನ || ೨೦೨ || ಅವರುವುದನಿಂದ್ರತನೂ ಭವನೀಕ್ಷಿಸಿ ಕಲುಷ ವಶಗತಂ ತಾಗಿ ರಣೇ || ತೃವದಿಂದೇಳಿಸಿ ಮೊನೆಯೊಳ್ ಜವನಂ ಶ್ರೀಮಾಲಿಯಂ ಜಯಂತಂ ಕೊಂದಂ || ೨೦೩ || ಅಂತು ಶ್ರೀಮಾಲಿಯಂ ಜಯಂತಂ ಕೊ೦ದು ವಿಜಯ ಪತಾಕೆಯನೆತ್ತಿ ಸುವುದುಮಿಂದ್ರಜಿತ್ಸುಮಾರನತಿ ಕುಪಿತನಾಗಿ ಬಂದು ಜಯಂತನೊಳ್ ಪೊಣರ್ವುದ ನಿ೦ದ್ರಂ ನೋಡಿ ಕಡುವೇಗದಿಂಮ || ಮುಳಿದೈರಾವಣ ಗಂಧಸಿಂಧು ರಮನಾಗಳ್ ನೂ೦ಕಿದಂ ವೋಮ ಮಂ || ಡಳದೊಳ್ ಬೆಳ್ಕೊಡೆ ಚಂದ್ರಮಂಡಳದ ಚೆಲ್ವಂ ಬೀಜ ದಿಕ್ಕಾಲ ಮ೦ || ಡಳಿ ಸುತ್ತ೦ಬರಿ ಪಾಳಿಕೇತನ ಶತಂಗಳ್ ಮುಂದೆ ಮ ೦ಸೆ ಮಂ ! ಗಳ ಭೇರೀರವನು ಪೊಣೆ ದೆಸೆಯಂ ತಳ್ತಯ್ಯ ಶಂಖಸ್ವನಂ | ೨೦೪ || ಅ೦ತಿ೦ದಗಿಯ ಮೊನೆಗೈರಾವಣಮನಣೆದು ನೂಂಕುವಿಂದ್ರನಂ ದನುಜೇ೦ದ್ರನ ಸಾರಥಿ ಸನ್ಮತಿ ಕಂಡಿಂತೆಂದಂಮ | ನಿನಗಿಂದ್ರಂ ದೊರೆ ಸಂಗರಕ್ಕೆ ದೊರೆ ನೀನಿಂದ್ರಂಗೆ ಮತ್ತೋರ್ವರಾ | ತನನೇನಾಂಕೆಗೊಳಲ್ ಸಮರ್ಥರೆ ಕುಮಾರಂ ಬಾಲಕಂ ಯುದ್ದ ಯೋ ! ಗ್ಯನೆ ಕೈಕೊಳ್ವುದು ದೇವರಿಂದಗಿಯಿತೆಂದಾಲೋಲ ಶುಂಡಾಲ ಕೇ | ತನನಂ ಚೋದಿಸಿದಂ ದಶಾಸ್ಯರಥಮಂ ಸೂತಂ ಮನೋವೇಗದಿಂ || ೨೦೫ || ಅಂತು ಮುಟ್ಟೆವಂದು ಮೂದಲಿಸಿ ತಾಗುವುದುಂ -- ಕಂ|| ಶರಸಂಧಾನದ ವೇಗಂ ಪರಿಕಿಸಲಂದೆನಿಸಿ ದಿವಿಜಪತಿಯು೦ ದಶಕ೦ ||
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೦೦
ಗೋಚರ