೫೫
ಕಂ|| ಪರಿಮಿತ ಪರಿಜನ ಪರಿವೃತ
ನರಸಂಬಗೆದರಸಿ ತೇರನೆಸಗಿದ ಗೆಲವಂ||
ತರವೇಳೆ ವೃದ್ದಕಂಚುಕಿ
ತರೆ ಬಂದಳ್ ಕೈಕೆ ಬಳಸಿಬರೆ ಸಹಚರಿಯರ್||೬೩||
ತರಳಕಟಾಕ್ಷಂ ಮೋಹನ
ಶರಮೆನೆ ಮೇಖಲೆಯ ಪರಿಹಾರ್ಯದ ಮಣಿನೂ||
ಪುರದ ಮಧುರಸ್ವನಂ ಮು
ಪ್ಪುರಿಗೂಡಿದ ಮದನಪಾಶಮೆನೆ ನಡೆತಂದಳ್||೬೪||
ಅ೦ತುಬಂದು--
ಕಂ।। ೧ತನಿಸೋ೦ಕು ಸೋ೦ಕಿ ಸಿಂಹಾ
ಸನದೊಳ್ ತನ್ನೊಡನೆ ಕೈಕೆ ಕುಳ್ಳಿರೆ ಪುಳಕಂ||
ತನಗೆ ತಲೆದೋರೆ ದಶರಥ
ಜನಪತಿ ಕೈವಂದ ಕಲ್ಪತರುವಂ ಪೋಲ್ತಂ||೬೫||
ಅನಂತರಮಾಕೆಯ ಮುಖಾರವಿಂದಮನಾನಂದ ವಿಸ್ಫಾರಿತ ವಿಲೋಚನನಾಗಿ
ನೋಡಿ--
ಕಂ|| ಈಕೆ ರಥಮೆಸಗೆ ವೈರಿ ಪ
ತಾಕಿನಿಯಂ ಗೆಲ್ದೆನೀಕೆ ಗೆಯ್ದುಪಕೃತಿಗಾ||
ನೀಕೆಯ ಬೇಡಿದುದಂ ನಿ
ರ್ವ್ಯಾಕುಳಮೀಯದೊಡೆ ಮೆಚ್ಚು ಪೊಳ್ಳಾಗಿರದೇ||೬೬||
ಎಂದು ಪರಿಜನದ ಮೊಗಮಂ ನೋಡಿ ಕೈಕೆಯಂ ನಿನ್ನ ಮೆಚ್ಚಿದುದಂ ಬೇಡಿ ಕೊಳ್ಳೆ೦ಬುದುಂ--
ಕಂ|| ಏನಂ ಬೇಡುವೆನೆಂದ
ಬ್ಯಾನನೆ ಬಗೆ ಬೆದರೆ ಬಗೆಗೆ ಬಂದೊಡಮೆಯನೊ||
ಲ್ದಾ ನೆರೆದಾಗಳೆ ಕುಡಿಮೆಂ
ದ್ಯಾನೃಪತಿಗೆ ಕೈಕೆ ಬೈಕೆಗೊಟ್ಟಳ್ ಮೆಚ್ಚಂ||೬೭||
ತನು, ಗ; ತನುಸೋಂಕು ಸೋಂಕೆ, ಘ; ತನುಸೋ೦ಕೆ. ಚ.