ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪ೦ಪರಾಮಾಯಣದ ಕಥೆ
49

ತಲ್ಲಳಿಸುವಂತೆ ಕಾದಿ ಹೆಸರಾದ ನಾಯಕರನೇಕರನ್ನು ಕೊಲ್ಲಲು ಇಂದಗಿಯು ಮುಳಿದು ಹನುಮಂತನ ಮೇಲೆ ಬಿದ್ದನು. ಆಗ ಹನುಮಂತನು ತನಗೆ ರಾಘ ವನು ತನ್ನ ಪರಾಕ್ರಮವನ್ನು ತೋರಿಸುವ ಅಪ್ಪಣೆಯನ್ನು ಕೊಡಲಿಲ್ಲವೆಂದೂ ಆದುದರಿಂದ ತಾನು ಇಂದಗಿಗೆ ಸಿಕ್ಕಿ ರಾವಣನ ಬಳಿಗೆ ಹೋಗಿ ಲಂಕಾದಹನ ಮಾಡುವೆನೆಂದೂ ಆಲೋಚಿಸಿ ತನ್ನ ಸೈನ್ಯವನ್ನು ಬೀಡಿಗೆ ಕಳುಹಿಸಿ ತಾನು ಯುದ್ದಕ್ಕೆ ಭಯ ಪಟ್ಟವನಂತೆ ಸೆರೆಸಿಕ್ಕಿದನು. ಅವನನ್ನು ಇಂದಗಿಯು ರಾವಣನ ಬಳಿಗೆ ತೆಗೆದುಕೊಂಡು ಹೋಗಿ ಅವನ ವೃತ್ತಾಂತವೆಲ್ಲವನ್ನೂ ತಿಳಿಸಿ ಅವನಿಗೆ ತಕ್ಕ ಶಿಕ್ಷೆಯನ್ನು ಮಾಡಬೇಕೆಂದು ಬಿನ್ನವಿಸಲು ರಾವಣನು ಬಹಳ ಕೋಪದಿಂದ, “ಎಲೈ ಹನುಮಂತನೇ ! ನೀನು ನಿನ್ನ ವಂಶದ ಉನ್ನತಿಯನ್ನೂ ಪದ್ದತಿಯನ್ನೂ, ನಾನು ನಿನ್ನನ್ನು ಇಂದಗಿಗೆ ಸಮಾನವಾಗಿ ಭಾವಿಸಿ ಮಾಡಿರುವ ಮನ್ನಣೆಯನ್ನೂ ಲಕ್ಷ್ಯಮಾಡದೆ ಲಜ್ಜೆಯನ್ನು ತೊರೆದು ಮನುಷ್ಯ ಮಾತ್ರದವನಿಗೆ ಚರನಾಗಿ ಬರು ವುದು ನ್ಯಾಯವೇ ? ಹಗೆಗಳೊಡನೆ ಕೂಡಿದ ದುರಾತ್ಮನಾದ ನಿನ್ನನ್ನು ದಂಡಿ ಸಲೇ ಬೇಕು” ಎನ್ನಲು, ಸುತ್ತಲಿದ್ದ ಕೆಲವರು, ಆ೦ಜನೇಯನನ್ನು ಸ್ವಾಮಿ ದ್ರೋಹಿಯೆಂದು ಮೂದಲಿಸಿದರು. ಇದಕ್ಕೆ ಮಾರುತಿಯು ಮುಳಿದು, “ ಅಯ್ಯಾ! ಪರಸ್ತ್ರೀಯನ್ನು ಹಿಡಿತಂದು ತೋಯದವಾಹನನ ವಂಶಕ್ಕೆ ಕೆಟ್ಟ ಹೆಸರನ್ನು ತಂದ ರಾವಣನ ಅನ್ಯಾಯವನ್ನು ಆಲೋಚಿಸದೆ ದೋಷಕ್ಕೆಡೆಗೊಟ್ಟ ನೀವು ಪಾಪಿಗಳಲ್ಲವೇ ? ನಿಮಗೂ ರಾವಣನಿಗೂ ವಿಧಿಯು ಸೌಮಿತ್ರಿಯ ಕೈಯಿ೦ದ ರಣರಂಗದಲ್ಲಿ ಸಾವನ್ನು ಬರೆದಿರುವಾಗ ಅದನ್ನು ತೊಡೆಯುವುದು ಯಾರಿಂದಾಗುವುದು ? ” ಎಂದು ಸಲ ತೆರನಾಗಿ ಮೂದಲಿಸಲು ದಶಮುಖನು ಬಹಳ ಸಿಟ್ಟಾಗಿ, ಅವನ ಹರಟೆಗೆ ಎಡೆಗುಡದೆ ಅವನನ್ನು ರಾಮದೂತನೆಂದು ಡಂಗುರ ಹೊಡೆಯಿಸಿ ಅವ ಮಾನ ಪಡಿಸಿ ಅಟ್ಟಿ ಬಿಡಿರೆಂದು ತನ್ನವರಿಗೆ ಹೇಳಿದನು. ಅದನ್ನು ಕೇಳಿ ಹನು ಮಂತನು ಕಣ್ಣಿನಿಂದ ಕಿಡಿಗಳನ್ನು ಸುರಿಸುತ್ತ ಕೋಪದಿಂದ ಉರಿದುಬಿದ್ದು ಅಲ್ಲಿದ್ದ ಕೆಲವರನ್ನು ತುಳಿದು, ಕೆಲವರನ್ನು ಹೊಡೆದು, ಕೆಲವರನ್ನು ಎಲುಬು ಮುರಿದು, ಮತ್ತೆ ಕೆಲವರನ್ನು ಕಾಲುಹಿಡಿದೆತ್ತಿ ಅಪ್ಪಳಿಸಿ ಕೊಂದು, ಸಿ೦ಹ ಲಂಘನದಿಂದ ಆಕಾಶಕ್ಕೆ ನೆಗೆದು ತನ್ನ ದಹನ ವಿದ್ಯೆಯಿ೦ದ ಲ೦ಕಾಪಟ್ಟಣದಲ್ಲಿಯ ಎಲ್ಲ ಮನೆಗಳನ್ನೂ ರಾವಣನ ಅರಮನೆಯನ್ನೂ ಸುಟ್ಟನು. ತರುವಾಯ ಆತನು ತನ್ನ ಸೇನೆಯೊಡಗೂಡಿ ಹೊರಟು ಕಿಷ್ಕಂಧಪುರವನ್ನು ಸೇರಿ ರಾಮಚಂದ್ರನ ಬಳಿಗೆ ಬರುತ್ತಿರುವಲ್ಲಿ ಅವನ ಮುಖ ಚಿಹ್ನೆಗಳಿಂದ ಕಾರ್ಯಸಿದ್ಧಿಯಾಯಿತೆಂದು ಎಲ್ಲರೂ ತಿಳಿದರು. ಹನುಮಂತನು ರಾಮಚಂದ್ರನಿಗೆ ಪೊಡಮಟ್ಟು ಚೂಡಾ ರತ್ನವನ್ನು ಕೊಡಲು ರಾಮನ ಕಣ್ಣುಗಳಿಂದ ಆನಂದ ಬಾಷ್ಪಗಳು ಸುರಿದುವು; ಸೀತೆಯ ವೃತ್ತಾಂತವನ್ನು ಕೇಳಬೇಕೆಂಬ ಕುತೂಹಲವು ಹಿಡಿಯದಂತಾಯಿತು. ಆ೦ಜನೇಯನು ಸೀತಾರಾಮರಿಗೆ ತಿಳಿದಿದ್ದ ಕೆಲವು ಗುರುತುಗಳನ್ನು ಸೀತೆಯಿಂದ
7