ಪುಟ:ರಾಮಚಂದ್ರ ಚರಿತ ಪುರಾಣಂ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

48

ಪ೦ಪರಾಮಾಯಣದ ಕಥೆ

ಯನ್ನೂ ಅವನು ಮಾಡಿರುವ ಉಪಕಾರವನ್ನೂ ಅವನಲ್ಲಿರುವ ದೇಹಸಂಬಂಧ ವನ್ನೂ ಲಕ್ಷ್ಯ ಮಾಡದೆ ಆ೦ಜನೇಯನು ಅಸೇವರಾದ ಭೂಚರರಲ್ಲಿ ಈ ರೀತಿ ಯಾಗಿ ಸೇವಾವೃತ್ತಿಗೆ ನಿಂತಿರುವುದು ಅನ್ಯಾಯವೆಂದು ಹೇಳಿದಳು. ಅದಕ್ಕೆ ಹನುಮಂತನು ಕಪಿಧ್ವಜಕುಲಕ್ಕೆ ರಾಘವನು ಮಾಡಿದ ಉಪಕಾರಕ್ಕಾಗಿ ಪ್ರತ್ಯುಪ ಕಾರವನ್ನು ಮಾಡಬೇಕೆಂಬ ಉದ್ದೇಶದಿಂದ ಬಂದೆನೆಂದೂ ರಾವಣನು ಪರಸ್ತ್ರೀಗೆ ಆಸೆಪಟ್ಟು ಲೋಕ ನಿಂದೆಯನ್ನೂ ಲಕ್ಷ್ಯಮಾಡದೆ ಈ ತೆರನಾಗಿ ನಡೆದಿರುವುದು ಕುಲ ನಾಶಕರವೆಂದೂ ಹೇಳಲು ಮಂಡೋದರಿಯು ಲಯಕಾಲದ ಚಂಡಿಕೆಯಂತೆ ಕೋಪಾವಿಷ್ಟಳಾಗಿ ರಾವಣನ ಬಳಿಗೆ ಹೋದಳು.
ಇತ್ತ, ಸೀತಾದೇವಿಯು ಪಂಚ ಪರಮೇಷ್ಟಿಗಳನ್ನು ಸ್ತುತಿಸಿ ಭಕ್ತಿಯಿಂದ ರಾಮನ ಪಾದಗಳನ್ನು ನೆನೆದು ಯತಿವರರಿಗೆ ಮನಸ್ಸಿನಲ್ಲಿ ಆಹಾರದಾನವನ್ನಿತ್ತು ಪಾರಣೆಯನ್ನು ಮಾಡಿದಳು. ಆ೦ಜನೇಯನು ಸೀತಾದೇವಿಯನ್ನು ರಾಮನಲ್ಲಿಗೆ ಕರೆದುಕೊಂಡು ಹೋಗುವೆನೆಂದು ಬಿನ್ನವಿಸಲು ಆಕೆಯು ರಾಮನಪ್ಪಣೆಯಿಲ್ಲದೆ ಹೊರಡುವುದು ಉಚಿತವಲ್ಲವೆಂದೂ ಹನುಮಂತನು ಕೂಡಲೆ ಹೊರಟು ಹೋಗಿ ತನ್ನ ವೃತ್ತಾಂತವನ್ನು ರಾಮಚಂದ್ರನಿಗೆ ತಿಳಿಸಬೇಕೆಂದೂ ಹೇಳಿ ಅವನಿಗೆ ತನ್ನ ಚೂಡಾರತ್ನವನ್ನು ಕೊಟ್ಟಳು. ಆಗ ಆ೦ಜನೇಯನು ತಾನು ಅಲ್ಲಿಗೆ ಬಂದರೂ ಹೋದದ್ದೂ ಯಾರಿಗೂ ತಿಳಿಯದೆ ಹೋದಲ್ಲಿ ತನ್ನ ಪರಾಕ್ರಮಕ್ಕೆ ಕೀಳನ್ನುಂಟು ಮಾಡುವುದೆಂದು ತಿಳಿದು, ಅಲ್ಲಿಯ ಖಳರನ್ನು ಕೊಂದು ಉದ್ಯಾನವನ್ನು ಕಿತ್ತು ಪುರವನ್ನು ಸುಟ್ಟು ರಾವಣನಿಗೆ ತಾನು ಬಂದಿರುವುದನ್ನು ಈ ರೀತಿಯಾಗಿ ತಿಳಿ ಯಿಸುವೆನೆಂದು ಆಲೋಚನೆಮಾಡಿದನು.
ಅತ್ತ, ಮಂಡೋದರಿಯು ಹನುಮಂತನ ವಿಷಯವನ್ನು ರಾವಣನಿಗೆ ತಿಳಿಸಲು ಅವನು ರೋಷಾವೇಶವುಳ್ಳವನಾಗಿ ಕದನ ಸಮರ್ಥರಾದ ರಾಕ್ಷಸರನ್ನು ಕರೆದು ಹನುಮಂತನನ್ನು ಕೊಂದು ಬನ್ನಿರೆಂದು ನಿಯಮಿಸಿದನು. ಅವರು ತಂಡೋಪತಂಡವಾಗಿ ವನಕ್ಕೆ ಬಂದು ಆ೦ಜನೇಯನ ಮೇಲೆ ಬೀಳಲು, ಆತನು ಅಲ್ಲಿಯ ಮರಗಳನ್ನು ಕಿತ್ತು ಅವುಗಳಿಂದ ಎಲ್ಲರನ್ನೂ ಕೊಂದನು. ಈ ವಾರ್ತೆ ಯನ್ನು ಒಬ್ಬ ನಿಶಾಚರನು ರಾವಣನಿಗೆ ತಿಳಿಸಲು ಅವನು ಕಿಡಿಕಿಡಿಗೊಂಡು ಸಿಂಹಾಸನದಿಂದೆದ್ದು ತಾನೇ ಯುದ್ಧಕ್ಕೆ ಹೊರಡಬೇಕೆಂದಿರುವಲ್ಲಿ ಮಗನಾದ ಇಂದಗಿಯು ಬಂದು ಏಕಾಕಿಯಮೇಲೆ ಯುದ್ಧ ಮಾಡಲು ಲೋಕಾಧಿಪತಿಯಾದ ರಾವಣನು ಹೊರಡುವುದು ಲೋಕಾಪವಾದಕ್ಕೆ ಗುರಿಮಾಡುವುದೆಂದು ತಿಳಿಸಿ, ತಾನು ಹೋಗಿ ಹನುಮಂತನನ್ನು ಸೆರೆ ಹಿಡಿದು ತಂದೊಪ್ಪಿಸುವೆನೆಂದು ಹೇಳಿ ಅಪ್ಪಣೆ ಪಡೆದು ಹೊರಟನು. ಇದನ್ನು ತಿಳಿದು ಹನುಮಂತನು ತಾನು ಹೊರಗೆ ನಿಲ್ಲಿಸಿ ಬಂದಿದ್ದ ಸೈನ್ಯವನ್ನು ಬರಿಸಿ ವಿಜಯರಥಾರೂಢನಾಗಿ ಲಂಕಾಪುರವೆಲ್ಲವೂ