ಶೋಕವನ್ನೂ ಮುಳಿಸನ್ನೂ ತೊರೆದು ತನ್ನನ್ನೂ ತನ್ನ ವಿದ್ಯೆಗಳೆಲ್ಲವನ್ನೂ ಹನು ಮಂತನಿಗೆ ಕೊಡುವೆನೆಂದು ತಿಳಿಸಲು ಹನುಮನು ಅವಳನ್ನು ಮದುವೆಯಾದನು. ಅವಳ ಸಹಾಯದಿಂದ ಆತನು ಲಂಕೆಯನ್ನು ಸುಲಭವಾಗಿ ಹೊಕ್ಕು ಅವಳು ಹೇಳಿದಂತೆ ವಿಭೀಷಣನನ್ನು ಕಂಡು, ರಾವಣನಿಗೆ ಬುದ್ದಿ ಹೇಳಿ ಸೀತಾದೇವಿಯನ್ನು ರಾಮನಿಗೆ ಒಪ್ಪಿಸುವಂತೆ ಮಾಡಿ ರಾವಣನ ದುರ್ಯಶಸ್ಸನ್ನು ಕಳೆಯುವುದು ವಿಭೀ ಷಣನ ಕರ್ತವ್ಯವೆಂದು ತಿಳಿಸಿದನು. ಅದಕ್ಕೆ ವಿಭೀಷಣನು ತಾನು ಉದಾಸೀನ ನಾಗಿಲ್ಲವೆಂದೂ ಪರಸ್ತ್ರೀ ಪ್ರೇಮವು ಕೇಡನ್ನುಂಟುಮಾಡುವುದೆಂದು ತನ್ನ ಅಣ್ಣ ನಿಗೆ ಆಗಲೇ ತಿಳಿಸಿರುವೆನೆಂದೂ ಆತನು ತನ್ನ ಮಾತನ್ನು ಲಕ್ಷ ಮಾಡದೆ ಇರುವನೆಂದೂ ಸೀತಾದೇವಿಯು ಹನ್ನೊಂದು ದಿನಗಳಿಂದಲೂ ನಿರಶನ ವ್ರತವನ್ನು ಆಚರಿಸುತ್ತಿರುವಳೆಂದೂ ಆದರೂ ರಾವಣನಿಗೆ ವೈರಾಗ್ಯ ಹುಟ್ಟಲಿಲ್ಲವೆಂದೂ ಹೇಳಿದನು. ಇದನ್ನು ಕೇಳಿ ಆಂಜನೇಯನು ಅಲ್ಲಿಂದ ಹೊರಟು ಅದೃಶ್ಯನಾಗಿ ಸೀತಾದೇವಿಯಿದ್ದ ವನವನ್ನು ಹೊಕ್ಕು ಮಂಡೋದರಿ ಮೊದಲಾದ ಹಲವರು ಖಚರ ಸ್ತ್ರೀಯರು ಬಳಸಿ ಕಾ೦ತಿಗೆಟ್ಟಿದ್ದ ಸೀತೆಯನ್ನು ಕಂಡು, ಮತ್ತಾರೂ ಕಾಣದಂತೆ ಆಕೆಯ ಬಳಿಗೆ ಬಂದು ರಾಮನ ಮುದ್ರೆಯುಂಗುರವನ್ನು ಆಕೆಗೆ ಕೊಟ್ಟು ಭಕ್ತಿಯಿಂದ ನಮಸ್ಕಾರ ಮಾಡಿದನು. ಸೀತೆಯು ಇದನ್ನು ನೋಡಿ ಸರಮಾನಂದ ಹೊಂದಲು, ಸುತ್ತಲಿದ್ದ ಮಂಡೋದರಿ ಮೊದಲಾದವರು ಆಕೆಯು ರಾವಣನನ್ನು ಮೆಚ್ಚಿದಳೆಂದು ಹೇಳಿಕೊಂಡರು. ಇದನ್ನು ಕೇಳಿ ಸೀತಾದೇವಿಯು ಸಿಟ್ಟುಗೊಂಡು ಅವರಂಥ ಕುಲಸ್ತ್ರೀಯರು ಅ೦ತಹ ಮಾತುಗಳನ್ನಾಡಬಾರದೆಂದೂ ರಾಮಚ೦ದ್ರನಟ್ಟಿದ ದೂತನು ಬಂದುದರಿಂದ ತನಗೆ ಸಂತೋಷವುಂಟಾಯಿ ತೆಂದೂ ತಿಳಿಸಿದಳು. ಅದಕ್ಕೆ ಮುಂಡೋದರಿಯು ಲಂಕೆಯನ್ನು ಹೊಗಲು ಯಾರಿಗೂ ಅಸಾಧ್ಯವಾದುದೆಂದೂ ಸೀತೆಗೆ ಸುದ್ದಿಯನ್ನು ಹೇಳಿದುದು ಕರ್ಣ ಪಿಶಾಚವಿರಬಹುದೆಂದೂ ಮಾತನಾಡುತ್ತಿರುವಲ್ಲಿ, ಹನುಮಂತನು ತನ್ನ ನಿಜ ಸ್ವರೂಪವನ್ನು ತೋರಲು ಖಚರ ಸ್ತ್ರೀಯರೆಲ್ಲರೂ ಭಯಪಟ್ಟು ಸೀತೆಯ ಮರೆ ಯನ್ನು ಹೊಕ್ಕರು. ಆಗ ವಾಯುಪುತ್ರನು ತನ್ನ ವೃತ್ತಾಂತವೆಲ್ಲವನ್ನೂ ವಿಶದ ವಾಗಿ ತಿಳಿಸಿ, ರಾಮನು ಸೀತಾದೇವಿಯ ಅಗಲಿಕೆಗೆ ಬಹಳ ವ್ಯಥೆಪಡುತ್ತಿರುವ ನೆಂದು ಬಿನ್ನವಿಸಿ, ತನ್ನಲ್ಲಿ ಸೀತೆಗೆ ನಂಬಿಕೆ ಹುಟ್ಟುವುದಕ್ಕಾಗಿ ಅವರ ವನವಾಸ ದಲ್ಲಿ ನಡೆದ ಅನೇಕ ವಿಷಯಗಳನ್ನು ಗುರುತಿಗಾಗಿ ಹೇಳಿ ಸೀತಾಪಹರಣವಾದ ಮೇಲೆ ನಡೆದ ವೃತ್ತಾಂತವನ್ನೆಲ್ಲ ಅರಿಕೆಮಾಡಿದನು. ಅದನ್ನು ಕೇಳಿ ಜಾನಕಿಯು ಬಹಳವಾಗಿ ಸಂತೋಷಪಟ್ಟು ಹನುಮಂತನ ಪರಾಕ್ರಮವನ್ನು ಹೊಗಳಿದಳು. ಇದಕ್ಕೆ ಮಂಡೋದರಿಯು ಆಂಜನೇಯನಿಗೆ ಸಮಾನರಾದವರು ಹಿಂದಿನವ ರಲ್ಲಿಯೂ ಈಗಿನವರಲ್ಲಿಯೂ ಯಾವ ಲೋಕದಲ್ಲಿಯೂ ಯಾರೂ ಇಲ್ಲವೆಂದು ಹೇಳಿ ಅವನ ಪರಾಕ್ರಮವನ್ನು ಉಗ್ಗಡಿಸಿ, ರಾವಣನಿಗೆ ಅವನಲ್ಲಿರುವ ಪ್ರೀತಿ