ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೮

ರಾಮಚಂದ್ರಚರಿತಪುರಾಣಂ

ಕಳೆದು ನಿರಾಕುಲಂ ಬಿಡಿಸುಗುಂ ಸೆರೆಯಂ ಪೆತೇನೊ ಕಾಣ್ಣಿರಾ |
ಬಳಯುತನಂ ಪುರೋಪವನ ಷಂಡ ಸಮೂಾಸ ಸರೋಜ ಷಂಡದೊಳ್||೧೧೦||

ಎಂದಿಸುವುದುಮುಂದಿ೦ದಿತ್ತಲೀ ಸರೋವರಕ್ಕೆ ಕಾಸಂ ಸೇಅಲ್ಲಿಯೆ ಬೀಡಾ
ಗಿರ್ದೆವೆನ್ನ ಪುಣೋದಯದಿಂ ನೀವು ಮಿಲ್ಲಿಗೆ ಬಿಜಯಂಗೆಯ್ದಿರೆಂದು ಶೋಕಗದ್ದದ
ಕಂಠ ಕಣ್ಣ ನೀರು ಸುರಿಯೆ, ಸೀತೆ ಸಂತೈಸೆ ಲಕ್ಷ್ಮಣಂ ಜಾನಕಿಗೆ ಕೈಗಳಂ
ಮುಗಿದು-

ಕಂ || ಈಕೆಯ ತಾಯ್ತು ಪಶಮಿಸುಗೆ
ಶೋಕಂ ರಾಘವನ ಕಣೆಗೆ ಮಣಿಗುಂ ರಣದೊಳ್ ||
ಲೋಕತ್ರಯಮನೆ ಶಬರ
ಪತಾಕಿನಿ ಪೆಜತೆಗೆಯದೆಡಆ ಬಿಲ್ಲೆಗೆದಪುದೇ|| ೧೧೧ ||

ಅನೆವರಿಖಾ ತನೂದರಿ
ಮುನ್ನಿನ ತೆ ಆದಿಂದಮಿರ್ಕೆ ಬೇಡರ ಪಡೆಯಂ ||
ಬೆನ್ನಟ್ಟಿ ಬಿಡಿಸಿ ಸೆಜತೆಯಂ
ಕನ್ನೆಯನಾಂ ಮದುವೆನಿಲ್ವೆನೆಂದನುಪೇಂದ್ರಂ||೧೧೨||

ಎಂದು ನುಡಿದವರನೊಡಂಬಡಿಸಿ ಬಲಂಬೆರಸು ನಟ್ಟಿರುಳೆಟ್ಟು ಪೋಗಿ ಮೇಖಲಾ
ತರಂಗಿಣಿಯನುತ್ತರಿಸಿ ತರದಿನೆಡೆಯೆಡೆಯ ನಾಡುಗಳಂ ಕಳೆದು ಪೋಗೆವೋಗೆ-

ಕಂ || ಸರಳ ಲತಾ ಲಾಸ್ಯ ನಟಂ
ಹರಿಣಿ ರೋಮಂಥ ಬಂಧುರಂ ಲವಲೀ ಮ ||
ರ್ಮರ ಮುಖರಂ ಕರಿ ಕರ ಶ್ರೀ
ಕರ ಶೀತಳಮೆಸಗಿದತ್ತರಣ್ಯ ಸಮಿಾರಂ||೧೧೩||

ತಾಂಗಿದುದು ಗಾಳಿಯಂ ದೆಸೆ
ಯಂ ಗವಸಣಿಸಿದುದು ಮೇಗೆ 'ಮೊಗೆದಾಗಸಮಂ ||
ನುಂಗಿದುದೆನೆ ಕಲಿಸಿ ಕ
ಅಂಗಿದ ಬಲ್ಲಡವಿ ಕಣೆ ಪಡೆದುದಗುರ್ವ೦||೧೧೪ ||

ಅಂತಗುರ್ವುವೆತ್ತ ವಿಪಿನಮಂ ಪುಗುವಸಮಯದೊಳ್-


1. ನಗದ. ಕ. ಖ.ಗ.ಘ.