೧೮೨
ಆ ಸಮಯದೊಳ್ ಸುಟ್ಟ ತೋರಿ -
ಮ|| ಸ ||ವನಿತಾರತ್ನಂ ದಲಾ ಕೋಮಲೆ ಜನಕಜೆ ರಾಮಂ ದಲಾ ಬರ್ಸ ನೀಹಾ |
ರ ನರೇಂದ್ರ ಪ್ರಾಂಶು ಸಿಂಹೋದರ ಕದನ ಮದೋದ್ರೇಕ ರೌದ್ರ ಗ್ರಹೋಚ್ಛಾ|
ಟನ ಮುದ್ರಾ ಮಾಂತ್ರಿಕ ಲಕ್ಷ್ಮಣನೆ ದಲೆನುತುಂ ಬೇಗಮೆಯಂದುಪೌರಾ೦। |
ಗನೆಯರ್ ಕಣ್ಣಾರ್ವಿನಂ ನೋಡಿದರಲರ್ಗಣೆಯಂ ತಾಗೆ ನೇತ್ರತ್ರಿಭಾಗ೦||೮೩||
ಅಂತು ಪೌರಜನದ ಮನದೊಡನೆ ಪುರಮನರಮನೆಯುಮಂ ಪೊಕ್ಕು ಮಣಿ
ಮಯಮಂಟಪದೊಳಿಕ್ಕಿದ ಮಣಿಮಯಾಸನವನಲಂಕರಿಸಿ ರಾಮಲಕ್ಷ್ಮಣರಿರ್ಪುದು
ಮಭಿಜನ ಸನಾಭಿ ಜನ ಸಹಿತನಾನ ತನನರ್ವ್ಯ ಮಣಿಭಾಜನದೊಳರ್ಥ್ಯ ಪಾದ್ಯಮ೦
ಕೊಟ್ಟು ಸಿಂಹೋದರನುಮನೊಡನೆಯರಸುಮಕ್ಕಳುಮಂ ವಿಚಿತ್ರ ವಸ್ತ್ರಾಭರಣಂ
ಗಳಿಂದವರ್ಚಿಸಿ ಮಜ್ಜನ ಭೋಜನಾದಿ ಸತ್ಕಾರಮನಂದಿನ ದಿನದೊಳ್ ಮೆರೆದು
ಮಜುದೆವಸಂ ಶುಭಮುಹೂರ್ತದೊಳ್-
ಕಂ|| ತನ್ನ ತನುಜೆಯರನೆ
ರ್ಕನ್ನೆಯರ ವಜ್ರ ಕರ್ಣನು೦ದರನಿತ್ತರ್ ||
ಚೆನ್ನೆಯರನವನಿಪಾಲ
ರುನ್ನೂರ್ವರನಲ್ಲಿ ಮದುವೆನಿಂದನುಪೇಂದ್ರ || ೮೪ ||
ಅಂತು ದಶ ಪುರದೊಳ್ ಸಿ೦ಹೋದರನನುಜ್ಞೆಣಿಗೆ ಬೀಳ್ಕೊಳಿಸಿ
ಕೆಲವು ದಿವಸಮೀರ್ಪಿನಂ-
ಉ || ನೀರಸವಾಗೆ ಬಳ್ಳಿ ಗಿಡು ಪೆರ್ಮರಗಳ್ ಕರಯಂತ್ರ ನಾಳದಿಂ |
ಭೂ ರಸಮಲ್ಲಮಂ ತೆಗೆಯೆ ಭಾನು ದವಾನಲ ಧೂಮ ಧೂಸರಂ ||
ಕಾರಿರುಳಂತೆ ಕಂತೆ ದೆಸೆ ಬಂದುದು ಬೇಸಗೆಗಾಲಮಸ್ತ ಕಾ |
ಸಾರಕ ಸಾರವಸ್ತಮಿತ ಮಾರುತನುದ್ಧತ ಚೀರಿಕಾ ರುತಂ
|| ೮೫ ||
ಕಂ || ಕರೆದುವು ಸೀರುಡುಗಳ್ ಸೆ
ರ್ಮರಂಗಳೆಲೆಯಿಕ್ಕಿ ಕಲೆ ಬಿಟ್ಟು ವು ತೋಜನೆಗಳ್ ||
ಪರಿಗೆಟ್ಟುವು ಬೆಳ್ವಯಿಲ್
ಸರಳಿಸಿದುವು ಮರುಮರೀಚಿಕಾ ವಾಹಂಗಳ್|| ೮೬ ||
ಸಾರಂ ಕಿಡೆ ಪಾರ್ಥಿವ ಪರಿ
ವಾರಂ ದೆಸೆಗೆಟ್ಟು ಪೋಪವೋಲ್ ಪೊದುವು ನಿ ||