ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೩

ಸಪ್ತಮಾಶ್ವಾಸಂ

ಸ್ವಾರ ಸರೊಜಾಕರದಿ
ಸಾರಸ ಕಲಹಂಸ ಚಕ್ರವಾಕ ಕುಟು೦ಬ೦ ||೮೭ ||

ಕಂ || ಪರಿವಾರಮೆನಿಪ ಬಹು ಜಲ
ಚರ ಮರಣದಿನಾದ ಖೇದದಿಂದೆರ್ದೆಯೊಡೆದ೦ ||
ತಿರೆ ಕೂಡೆ ಬೀಡೆವರಿದುವು
ನಿರಂತರೋತ್ತಪನ ತಾಪದಿಂ ಪೆರ್ಗೆಜೆಗಳ್ ||೮೮ ||

ಉರಿವರಿವ ಬಿಸಿಲ್ ಸುಡೆ ಸೀ
ಕರಿವೋದುವಿನೆನಿಸಿ ತುಂಬಿಯುಂ ಕೋಗಿಲೆಯು೦ ||
ಮರಗಳೆಲೆವತೆಗಳೊಳ್ ಮೆ
ರೆದುವು ಪಡುನೇಸಪ್ಪಿನಂ ಬೇಸಗೆಯೊಳ್|| ೮೯ ||


ಮ||ಶ್ರ || ಪಿಡಿದಿರ್ದೆ೦ ನಿಯಿಂದೀಕೆಯುಮೆನಗೆ ಕರಂ ಕೂ ರ್ಪಳೆಂಬೀ ವಿವೇಕಂ |
ಕಿಡೆ ಜನ್ಮಾವಾಸಮಂ ಪೀಡಿಸಿ ನಳಿನಿಗೆ ನಿಷ್ಕಾರಣ೦ ಕಾಯು ನೋವಂ ||
ಪಡೆದಂ ಚಂಡ ಪ್ರಭಂ ವಾರುಣಿಯನನುದಿನಂ ಸೇವಿಸುತ್ತಿರ್ದರಾಗ |
ಕೆಡೆಗೊಟ್ಟುನ್ಮಾರ್ಗದೊಳ್ ವರ್ತಿಸುವ ಕುವಲಯ ದ್ರೋಹನೇಗೆಯು
ತೋಅಂ || ೯೦ ||

ಸೃದ್ಧಿ || ವಿಕಾರಮಿನಿಸಿಿನಲ್ ಮೆರೆದು ಬಾಹ್ಯ ಸಾಮಗ್ರಿಯಿಂ |
ದಕಾರ್ಯಪರನಾಗಿಯು೦ ಪರಮ ಯೋಗಿಯಿರ್ಪ೦ದದಿ೦ ||
ದಕ೦ಪಿತ ಶರೀರನಿರ್ದುದು ಜಲಾಶಯೋಪಾಂತದೊಳ್ |
ಬಕಂ ದರ ನಿಮೂಾಲಿತಾಂಬಕನಶೇಷ ದೋಷಾಶಯಂ || ೯೦ ||

ಚ || ಭುವನ ಜನ ಪ್ರಸನ್ನ ಕಮಲಾಕರ ನಿನ್ನ ಪರಾರ್ಥ ಜೀವನಂ |
ತವುತರೆ ತೀವ್ರ ಕಾಲ ವಶದಿಂದಮೆ ನೀರಸವಾಯ್ತು ನೀರಜಂ ||
ಕುವಲಯಮಪುಕೆಯ್ದು ದು ವಿಷಾದಮನಂಚೆಗೆ ಖೇದವಾಯ್ತು ಪೋ |
ದುವು ಪೊಣರ್ವಕ್ಕಿಗಳ್ ವಿಕಳವಾದುವು ಮಿಾನ ಕುಟೀರ ಕೋಟಿಗಳ್ ||

ಚ || ಮೃಗ ಕುಲಮಾಸೆಗೆಯ್ದು ಮೃಗ ತೃಷ್ಠಿಕೆಯಂ ಜಲಮೆಂದು ತೃಸ್ಥೆಯಿಂ |
ಪಗಲಿಲವನ್ನೆಗಂ ಪರಿದು ಗಂಟಲುರಬರಮಾತಿ ಬೆಂದೊವಲ್ ||
ತೆಗಳಿಗೆ ಬೀತಿ ಬಾಯ್ದೆ ಕರಿಸಂ ಬರೆ ನಾಲಗೆಗಿಟ್ಟು ನಟ್ಟ ದಿ |
ಟ್ರಗಳೊಡನಳ್ಳೆ ಪೊಯ್ಕೆ ನಡೆಗೆಟ್ಟುವು ತೃಷ್ಣಯಿನಾರೊ ಬೇಯದರ್|| ೯೩ ||