ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೪

ರಾಮಚಂದ್ರಚರಿತಪುರಾಣಂ

ಚ || ದಿನಕರ ತೀವ್ರ ತಾಪಮುರಿಯೆಣ್ಣೆ ವೊಲಟ್ಟೆ ಶರೀರ ತಾಪದಿಂ |
ವನರುಹ ಪಂಡಮಂ ತುರಿಪದಿಂದೋಳವೊಕ್ಕು ಕಡಂಗಿ ಕಿಟ್ಟಿ ದಂ ||
ಮುನಿಸಿನಳುರ್ಕೆಯಂ ಪಗೆಯ ನಂಟರೊಳಂ ಕಡುಕೆಯ್ದು ತೋರ್ಪಮೋಲ್ |
ವನಗಜಮೊಟ್ಟ ಕೊಂಡುದು ಮೃಣಾಳಿಕೆಯಂ ನಿಜಮೂರ್ಧ ಪಿಂಡದೊಳ್ ||

ಕಂ || ತಸನಾತಪದಿಂ ಚೇಷ್ಟಾ
'ಕ್ಷಪಣೆಯನೊಳಕೊಂಡು ಕೋಳ್ಳಿಗಂ ಬೆಳ್ಳಿಗಮಾ ||
ತ್ಮ ಪುರೋಭಾಗದೊಳಿರ್ದೊಡ
ಮುಪಶಮಿಸಿದುದೊಳಗುಮಾತನ ಯೋಗಂ|| ೯೫ ||

ಉದ ಬಿಂದುಗೆತ್ತು ಗಿರಿ ಸಾ ನು ದೇಶದೊಳ್ ಕಾಯ್ಕ ಬಿದಿರ ಪೊಸಮುತ್ತಂ ನುಂ ||
ಗಿದ ಸೋಗೆವಿಂಡಣಂ ಮಜು
ಗಿದುವುಂಡಿಗೆ ಬೇಯೆ ಕೆಂಡಮಂ ನುಂಗಿದವೋಲ್|| ೯೬ ||

ಮ || ರವಿಕಾಂತೋಪಲ ವಗ್ನಿಯಿಂದಡವಿಗಳ ಭಸ್ಮಾವಶೇಷಂಗಳಾ |
ದುವರಲ್ಲೋದುವು ಬೆಟ್ಟುಗಳ್ ನದನದೀ ದ್ರೋಣೀ ಜಲಂ ಕಾಸಿದೆ ||
ಣ್ಣೆ ವೊಲುರ್ವೆಲ್ಕು ವು ಮೂಷೆಯಿಟ್ಟ ತೆಆದಿ೦ ಗ್ರಾವಸ್ಥಲಂ ಲೋಹವಾ |
ದುವು ರೇಣುಸ್ಥಲಿ ಕಾಜುವಿ ದ್ದು ವು ನಿದಾಘ ದ್ರಾಫಿಮೋದ್ರೇಕದೊಳ್ || ೯೭ ||

ಬಹುತಾಪಕ್ಕೆ ಬಿಗುರ್ತು ವಿಷ್ಣು ಪಡೆವಂ ಮತ್ಯಾವತಾರಕ್ಕಿನಂ |
ತುಹಿನಾ೦ದ್ರಮನೊತ್ತು ಗೊಂಡು ನಡೆವಂ ದೇವರ್ಕಳಾಗೇಯಮೆಂ ||
ದು ಹವಿರ್ಭಾಗಮನೊಲ್ಲದಿಂದುಕಲೆಯಂ ಕೊಲ್ವರ್ ಮೃಡಂ ಪಾರ್ವತೀ |
ಸ್ಪಷೆಯಂ ಬಿಟ್ಟು ಮರುತ್ತರಂಗಿಣಿಯ'ನಂದಾಲಿಂಗನಂ ಮಾಡುವಂ || ೯೮ ||

ಅಂತತಿ ಪ್ರಬಲವಾದ ನಿದಾಘ ಸಮಯದೊಳ್-
ಕಂ | ದಿನಮಂ ಕೆಲವಂ ದಶರಥ
ತನುಜರ್ ದಶಪುರದೊಳಿರ್ದು ಪೋಗಲೊಡಂ ನೋಂ ||
ದನದರ್ಕೆ ವಜ್ರ ಕರ್ಣ೦
ವಿನೀತರುತ್ತ ಮರಗಿಯಂ ಸೈರಿಪರೇ || ೯೯||


1. ಕೃಪಣತೆಯೊಳ. ಚ. 2. ನೋಲ್ಲಾ . ಕ. ಖ. ಘ.