೧೮೫
ಅಂತು ಸೀತಾಸಮೇತಂ ರಾಮಲಕ್ಷ್ಮಣರ್ ದಕ್ಷಿಣಾಭಿಮುಖರಾಗಿ ಬಲ್ಲಡವಿಯ
ಬಟ್ಟೆ ವಿಡಿದು ನಡೆವೆಡೆಯೊಳ್-
ಕಂ || ರಾಘವನೆನ್ನಂ ತೃಣದಿಂ
ಲಾಘವಮೆನೆ ಬಗೆದನೆಂಬ ಮನದುಮ್ಮಳದಿಂ ||
ದಾಘಮನೋಳಕೊ೦ಡ೦ತೆ ನಿ
ದಾಘದ ಮುಂಬಗಲೆ ತಳೆದುದಿಳೆ ಕಡು ಗಾಯ್ತಂ || ೧೦೦ ||
ಇನಕುಲ ಸಾಮ್ರಾಜ್ಯ ಶ್ರೀ
ತನಗಲ್ಲದೆ ತಾಳಲರಿದದಂ ರಾಮಂ ತ ||
ನನುಜಂಗೊಪ್ಪಿಸಿ ಬಂದೊಡೆ
ಚಂಡಭಾನು ಬಿಸುಪ ತಳೆದ೦ || ೧೦೧ ||
ಮ || ಇಳೆಯಂ ತಾಳಿದ ಸತ್ವದಿಂದಮನಗಂ ಬಿಲ್ಲಾಳ ಳೆಂಬೇವದಿಂ |
ಬಳ ನಾರಾಯಣರಂ ನಿಸರ್ಗ ಚಪಲಂ ದಾವಾಗ್ನಿ ಧೂಮ ಧ್ವಜಂ ||
ಝಳಮಂ ಮೇಲೆ ಕಡಂಗಿ ಪೊಯ್ತು ಮಿಟಿಕೆಯೇನಾನುಮಂ ಕೀಜ ಚಾ |
ವಳಿಪಂತಾದುದು ಜೀರ್ಣ ಸರ್ಣ ಪರುಷ ಪ್ರಧ್ಯಾನದಿಂ ಮಾರುತಂ || ೧೦೨||
ಚ || ಕಡುವಿಸಿಲುರ್ಚೆ ಕೋಮಲ ಲತಾ ತನು ಬಂಬಲಬಾಡೆ ನಾಡೆ ನೀ |
ರಡಸಿ ಬಬಿಲ್ಲು ಬರ್ಪ ಪದದೊಳ್ ಜನಕಾತ್ಮಜೆ ಮುನ್ನ ಬಿಟ್ಟು ಬ೦ ||
ದೊಡೆ ಬಿಡದುರ್ವರಾ ರಮಣಿ ಬೆನ್ನನೆ ಬಂದಪಳೆಂಬ ಶಂಕೆಯಂ |
ಪಡೆದು ರಥೋದ್ವಹಂಗೆ ಪಡೆದ ಗಮನಶ್ರಮ ಖಿನ್ನೆ ಖೇದಮಂ || ೧೦೩||
ಅಂತೆಂತಾನುಮೆಯ್ದೆ ನಂದುಜ್ಜಯಿನಿಯ ಪಡುವಣ ಪೆರ್ವುವಂ ಕುದು
ಕುರವಕಮೆಂಬ ಪೊಳಲ ನಿಕಟ ವಟ ವಿಟಮಿಚ್ಛಾಯೆಯೊಳ್ ಸೀತೆ ಸೇದೆವಟ್ಟಿ,
ರ್ಪುದುಂ, ಜಲಾನ್ವೇಷಣ ನಿಮಿತ್ತಂ ಲಕ್ಷಣಂ ಬರುತ್ತುಮಿರೆ-
ಮ || ಬನಮೊಂದಿರ್ದುದು ಮುಂದೆ ಕಂತು ವನ ದುರ್ಗಾಕಾರದಿಂದಲ್ಲಿ ತ |
ದ್ವನಲಕ್ಷ್ಮಿ ಮುಖದಂತೆ ನೀರಜ ವನಂ ಚೆಲ್ವಾಯ್ ದಂ ಕಾದು ಯೌ ||
ವನದೃಪ್ತರ್ ಕೆಲರಿರ್ದರಲ್ಲಿಗೆ ದಳನೀಲಾತಸೀ ಚ೦ಕನ |
ತನು ತೋಯಾಹರಣಾರ್ಥಿ ಬಂದನಭಯಂ ಸೌಮಿತ್ರಿ ಶಂಜಯಂ ||೧೦೪||
ಆಗಳಲ್ಲಿ-
1. ಜಾವಳಿ. ಗ.