ರಾಮಲಕ್ಷ್ಮಣರು ತಮ್ಮ ಪ್ರಯಾಣಮಾರ್ಗದಲ್ಲಿ ಮದುವೆಯಾಗಿದ್ದ ಅನೇಕ ಮಂದಿ ಅರಸಿಯರನ್ನು ಕರೆಯಿಸಿ ಲಂಕೆಯಲ್ಲಿ ಕೆಲವು ಕಾಲ ಸುಖದಿಂದಿದ್ದರು.
ಇತ್ತ, ಅಪರಾಜಿತೆಯು ರಾಮನನ್ನು ನೆನೆದು ಅತಿ ಶೋಕದಿಂದಿರುವಲ್ಲಿ ನಾರದನು ಆಕಾಶಮಾರ್ಗದಿಂದಿಳಿದು ಅರಮನೆಗೆ ಬರಲು ಅಪರಾಜಿತೆಯು ಆತನನ್ನೆದುರುಗೊಂಡು ನಮಸ್ಕರಿಸಿ ಮರ್ಯಾದೆ ಮಾಡಿದಳು. ನಾರದನು ಅಪರಾಜಿತೆಯ ಶೋಕ ಕಾರಣವನ್ನು ತಿಳಿದು ರಾಮಲಕ್ಷ್ಮಣರ ಕ್ಷೇಮವಾರ್ತೆಯನ್ನು ಆ ದಿನವೇ ತರುವೆನೆಂದು ಹೇಳಿ ಆಕಾಶಕ್ಕೆ ನೆಗೆದು ಲಂಕೆಯನ್ನು ಹೊಕ್ಕು ಬಲ ನಾರಾಯಣರ ಸಭೆಯನ್ನು ಪ್ರವೇಶಿಸಲು ರಾಮಸ್ವಾಮಿಯು ಮುನಿಯ ನ್ನೆದುರುಗೊಂಡು ಮಣಿಪೀಠದಲ್ಲಿ ಕುಳ್ಳಿರಿಸಿ ಅರ್ಭ್ಯ ಪಾದಗಳನ್ನು ಕೊಟ್ಟನು. ಕುಶಲ ಪ್ರಶ್ನೆಗಳಾದ ತರುವಾಯ ನಾರದನು. ಅಪರಾಜಿತಾದೇವಿ ಸುಮಿತ್ರಾದೇವಿಯರನ್ನು ಕಂಡಿದ್ದೆನೆಂದೂ ಅವರು ರಾಮಲಕ್ಷ್ಮಣರನ್ನು ಬೇಗನೆ ಕಾಣದಿದ್ದರೆ ಶರೀರತ್ಯಾಗ ಮಾಡುವರೆಂದೂ ತಿಳಿಸಿದನು. ಅದನ್ನು ಕೇಳಿ ರಾಮಲಕ್ಷ್ಮಣರು ವ್ಯಥೆಪಟ್ಟು ತಾವು ಕೃಪಾಶೂನ್ಯರೆಂದು ತಮ್ಮನ್ನು ತಾವೇ ನಿ೦ದಿಸಿಕೊಂಡು ವಿಭೀಷಣನನ್ನು ಕರೆಯಿಸಿ ತಮ್ಮ ಅವಧಿಯ ವರ್ಷಗಳು ತೀರಿದುವೆಂದೂ ತಾವು ಅಯೋಧ್ಯೆಗೆ ಹೋಗದಿದ್ದರೆ ತಮ್ಮ ತಾಯಂದಿರೂ ಬಾಂಧವರೂ ಖೇದಗೊಳ್ಳುವರೆಂದೂ ಹೇಳಿ ಲಂಕೆಯಲ್ಲಿಯ ಅಸಂಖ್ಯಾತವಾದ ಜಿನಭವನಗಳಲ್ಲೆಲ್ಲ ವಿಶೇಷೋತ್ಸವವನ್ನು ಮಾಡಿಸಿ ಸೀತೆಯೊಡನೆ ಪುಷ್ಪಕ ವಿಮಾನವನ್ನೇರಿ ಖಚರ ಪರಿವೃಢ ಪರಿವೃತರಾಗಿ ಪ್ರಯಾಣ ಹೊರಟು ಸಮುದ್ರವನ್ನು ದಾಟಿ ದಂಡಕಾರಣ್ಯಕ್ಕೆ ಬಂದು ಅಲ್ಲಿ ತಾವಿದ್ದ ಸ್ಥಳಗಳನ್ನು ಸೀತಾದೇವಿಗೆ ತೋರಿಸಿ ಅಯೋಧ್ಯೆಯ ಬಳಿಗೆ ಬರಲು ಭರತ ಶತ್ರುಘ್ನರು ಆನೆಗಳನ್ನೇರಿ ರಾಮನನ್ನೆದುರುಗೊಳ್ಳುವುದಕ್ಕಾಗಿ ಊರಹೊರಕ್ಕೆ ಬಂದರು. ಆಗ ರಾಮಸ್ವಾಮಿಯ ವಿಮಾನದಿಂದಿಳಿದು ತನಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಭರತ ಶತ್ರುಘ್ನರನ್ನು ತೆಗೆದಪ್ಪಿಕೊಂಡು ಹರಸಿದನು. ತರುವಾಯ ಅವರು ಸೀತಾದೇವಿಗೂ ಲಕ್ಷ್ಮಣನಿಗೂ ಅನುಕ್ರಮವಾಗಿ ನಮಸ್ಕರಿಸಿ ಆಶೀರ್ವಾದವನ್ನು ಪಡೆದು ಕುಶಲವಾ೯ಗಳಿ೦ದ ಸ೦ತೋಷಚಿತ್ತರಾದರು. ಬಳಿಕ ರಾಮಲಕ್ಷ್ಮಣರು ಎಲ್ಲರೊಡನೆಯೂ ಕೂಡಿ ತೋರಣ ಪತಾಕಾದಿಗಳಿಂದಲಂಕೃತವಾದ ಅಯೋದ್ಯೆಯನ್ನು ಪ್ರವೇಶಿಸಿ ಅವರೂ ಸೀತಾದೇವಿಯೂ, ಅಪರಾಜಿತೆ ಸುಮಿತ್ರೆ ಕೈಕೆ ಸುಪ್ರಭೆಯರನ್ನು ಕಂಡು ಎರಗಿ ನಮಸ್ಕರಿಸಿ ಅವರ ಆಶೀ ರ್ವಾದವನ್ನು ಪಡೆದರು.
ಹೀಗೆ ಸುಖಾತಿಶಯದಿಂದ ಕೆಲವು ದಿನಗಳು ಕಳೆದ ಮೇಲೆ ಶುಭ ಮುಹೂರ್ತದಲ್ಲಿ ರಾಮಸ್ವಾಮಿಯು ರಾಕ್ಷಸ ದ್ವೀಪಸಹಿತವಾಗಿ ಲ೦ಕೆಯನ್ನು ವಿಭೀಷಣನಿಗೂ ದೇವಾನೀಕ ಪುರವನ್ನು ರತ್ನಜಟಗೂ ಕಿಷ್ಕಂಧನಗರವನ್ನು ಸುಗ್ರೀವನಿಗೂ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೮೦
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
64
ಪ೦ಪರಾಮಾಯಣದ ಕಥೆ