೨೭ ರಾಮಚಂದ್ರ ಚರಿತಪುರಾಣಂ ಮ | ಮೃಗರಾಜಂಗಗಿದೋಡುವಾನೆಗಡುಸಂ ಮತ್ತದ್ವಿಪಂಗೆತ್ತು ಕಾ | ರ್ಮುಗಿಲೊಳ್ ಪೋರ್ವ ಗಜಂಗಳಂ ಶರಭನಂ ಬೆಂಕೊಳ್ಳ ಭೇರುಂಡವ | ಕ್ಕಿಗಳಂ ನೋಡಿದ ನೋಟದಾಸಯುಗವನ್ನು ಕಂಡನಾಸನ್ನದೊಳ್ | ಸಗರಂ ಕನ್ನೆಯುಮಂ ತದಗ್ರ ಜನುಮಂ ನೇತ್ರಾವತೀ ತೀರದೊಳ್ || ೭೮ || ಚಂ| ನವ ಶಶಿಲೇಖೆಯುಂ ನವ ದಿನೇಶನುಮಿಲ್ಲಿಗೆ ರಾಹುಗಳ್ಳಿ ಬಂ | ದುವೊ ದಿಟವೆಂದು ಸಂದೆಗದಿನಿರ್ವರುಮಂ ನಡೆನೋ ಭೂಭುಜ || ಪ್ರವರನ ಚಿತ್ತಮಂ ಸೆಜತೆಗೆ ತ೦ದುವು ಸೋಲಿಸ ತಮ್ಮ ಲೀಲೆಯಿಂ | ಕುವಲಯ ಮಾಲೆಯಂ ನಗುವ ಬಾಲೆಯ ಲೋಲ ವಿಲೋಚನಾಂಶುಗಳ | ಅಲೆಯದೆಲರ್ ದಿನೇಶ ಕಿರಣ೦ ಪುಗದೆಂಬಿನೆಗಂ ಕಜಂಗಿ ಕ 1 ಆಲಿಸುವ ಕಾನನಾಂತರದೊಳಂಗಜ ಜಂಗಮ ದೀಪಮಾಲೆವೋಲ್ || ಜಲಜಲಿಸುತ್ತು ಮಿರ್ಸ ಖಚರೇಶ್ವರ ಕನೈಯನಾಗಳೆಷ್ಟೋ ದಂ || ತೊಲಗದೆ ದಿಟ್ಟ ನಟ್ಟುನಿಲೆ ಕಣೋಳಪಿಂದಮರ್ದಪ್ಪಿಕೊಳ್ಳಲ್ | ೮೦ || ಕಿಡಿಸಿದನೇಕೆ ತಾವರೆಯನೀ ಮೊಗವಂ ಪಡೆದೇಕೆ ನೆಯ್ಲಿ ಲಂ | ಕಿಡಿಸಿದನೀ ತೆ ಆಂಬೊಳೆವ ಕಣ್ಮರಂ ಪಡೆದೇಕೆ ತುಂಬಿಯಂ || ಕಿಡಿಸಿದ ವಿನೀಲ ಕುಟಿಲಾಲಕಮಂ ಪಡೆದೇಕೆ ಪದ್ಮಜಂ | ಕಿಡಿಸಿದನೀಕೆಯಂ ಪಡೆದು ಜ೦ಗವು ಶಾ ವಿಲಾಸಮಂ || ೮೧ | 11 ೮೨ || ಎಂದು ನೀಡುಂ ಭಾವಿಸಿ ನೋಡುತ್ತುಮಿರೆ... ಕಂ || ಎಳಲತೆಯನುಟಿದು ತಾವರೆ ಗೆಳಸುವ ಮರಿದುಂಬಿಯಂದದಿಂದೆಲಗಿದುದಾ || ಚಳನಯನೆಯ ತನುಲತೆಯಿಂ ತಳರ್ದರಸನ ಕಣ್ ಕುಮಾರಮುಖ ಸರಸಿಜದೊಳ್ ಅಂತು ನೋಡಿಉ || ಬಾಲೆ ಶಿರೀಷ ಮಾಲೆಯವೊಲಿಕೆ ಕರಂ ಸುಕುಮಾರೆ ನೀ ಕರಂ | ಬಾಲನೆ ಕಾನನಂ ಮನುಜ ಖೇಚರ ಗೋಚರಮಲ್ಕು ಋಕ್ಷ ಶಾ || ರ್ದೂಲ ಮದೇಭ ಸಿಂಹ ಶರಭಾಕುಲಮಿಲ್ಲಿಗೆವರ್ಪ ದುಷ್ಯತೋ | ಸ್ಮಿಲನಮಾವಕಾರಣದಿನಾದುದದಂ ತಿಳಿಪೆಂದನಾ ನೃಪಂ || ೮೩ || ಅಂತು ಬೆಸಗೊಳ್ವುದುಂ ಸಹಸ್ರಲೋಚನಂ ನಿಜವೃತ್ತಾಂತಮಂ ತಿಳಿಸಿ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೬೬
ಗೋಚರ