ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೨೭೭ ಶಾ || ಈ ನಿನ್ನಾಕೃತಿ ನಿನ್ನ ದುಂದುಭಿ ಗಭೀರ ಧ್ಯಾನಮಿಾ ನಿನ್ನ ನೇ | ತಾನಂದೋದಯ ಭದ್ರಲಕ್ಷಣ ಗಣ೦ ಪೇಟ್ಟಿ ಪುನೀತಂ ಧರಿ || ಶ್ರೀನಾಥಂ ಪೆನಲ್ಲನೆಂಬಿನಿತನೀ ಭೀಮಾಟವೀ ದುರ್ಗಮ | ಸ್ಥಾನ೦ಬೊಕ್ಕು ತೊಲ್ವುದಂ ಬೆಸಸಿದಂ ಲೋಕೈಕ ರಕ್ಷಾಮಣೀ || ೮೪ || ಎಂಬುದುಮಾತನಯೋಧ್ಯಾ ಪತಿಯೆಂ ಸಗರನೆಂಬೆನೆಂದು ತನ್ನ ಬಂದ ತೇಜನ ನಟಿಯೆ ತಿಳಿಸೆ ಸಹಸ್ರಲೋಚನಂ ವಿಸ್ಮಯ ಸ್ತಿಮಿತ ಲೋಚನನಾಗಿ 1) ೮೫ || ಕಂ || ಪಗೆ ತೀರ್ವುದು ಬಗೆ ತೀರ್ವುದು ಸಗರನನಾಶ್ರಯಿಸಿಮೆಂದು ಸಿತ್ಯ ಬೆಸಸಿದನ || ಚ್ಚಿಗಮಾಯ್ತು ನಿಮಗನೊಂದು ಬೈಗುಬ್ಬ ರಮಾಗೆ ಖಚರ ತನಯಂ ನುಡಿದಂ ಆ ನುಡಿಯನವಧಾರಿಸಿ--- ಶಾ || ಖೇದಂ ಮಾಣೆ ಶುಭೋದಯಂ ಸಮನಿಕುಂ ಸಂಸಾರಿಗಳಿ೦ತಿದೇ ! ನಾದಂ ಚೋದ್ಯಮ ನಚ್ಚಿ ನಿಮ್ಮ ಜನಕಂ ಪೇಟ್ಟಿ೦ತುಟಂ ಮಾತ್ರೆನಾ || ಹ್ಲಾದಂಬರಿಮೆಂದು ಸಂವರಿಸಿ ಮುನ್ನಂ ತನ್ನನೊಟ್ಟೆಸಿ ಬಂ | ದಾ ದುಷ್ಟಾಶ್ವದ ಪಜ್ಜೆಗೊಂಡು ನಡೆದಂ ಪಿ೦ತಿಕ್ಕಿ ಕಾಂತಾರಮಂ || ೮೬ || ಅಂತು ಬರುತಿರ್ಸಿನಂಕಂ|| ಕರೆವಂತಾದುದು ಹಸ್ಯ ಶೃ ರಥ ಪದಾತಿಗಳ ಕಳಕಳ೦ ಧರೆ ನಿಂದಾ || ಧರಣೀಶನಿರ್ದ ದೆಸೆಯಂ ನಿರೀಕ್ಷಿಪಂತಾದುದೊಗೆದ ಧೂಳೀಜಾಲ೦ || ೮೭ || ಅಂತು ನಿಜ ಚತುರ್ಬಲಂ ಬ೦ದು ಕೂಡಲೊಡಂ ವಿಜಯವಾರಣ ಮಣಿ ಶಾರಿಕೆಯೊಳ್ ಸಹಸ್ರಲೋಚನನುಮುತ್ಸಲನೇತ್ರೆಯುವುಭಯ ಪಾರ್ಶ್ವನನಳಂ ಕರಿಸಿರೆಚ || ಪುರ ವನಿತಾಜನಂ ಕುಡುವ ಪೂವಿನ ಮಾಲೆಯುಮಂ ಪುರಾಂಗನಾ | ತರಳ ಕಟಾಕ್ಷ ಮಾಲೆಯುಮನಾಂತು ದುಕೂಲ ಪಟೀ ಪತಾಕೆಯಿಂ !! ಮರಕತ ರತ್ನ ತೋರಣದಿನೊಪ್ಪುವುದಂ ಪುಗುತಂದನುತೃವಾ | ಕರಮನಯೋಧ್ಯೆಯಂ ದಿವಿಜ ನಾಯಕನಂತೆ ಧರಾಧಿನಾಯಕ | ೮೮ | 1. ಸಲೆ೦ದು. ಚ. 2. ಸಾರಣಿ. ಚ.