ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

VQo ರಾಮಚಂದ್ರಚರಿತಪುರಾಣಂ ಲಜೇಯಬಲ ಜಂಬುವಾಲಿ ಗದೆಗೊಂಡು ಮೇಲ್ವಾಯ್ದುದುಂ | ಭುಜಾಸಿಯೊಳೆ 'ಕೊಂದನಂದವನುಮಂ ಮರುನ್ನಂದನಂ || ೧೨೫ || ಅಂತು ಜಂಬುವಾಲಿಯಂ ಕೊಂದು ಮುಂದೆ ಧವಳ ಛತ್ರ ಚಾಮರ ಪಾಳಿ ಧ್ವಜ ಶಂಖ ಕಾಹಳ ಪ್ರಮುಖ ರಾಜ್ಯ ಚಿಹ್ನಂಗಳ್ವರಸು ಹಸ್ತಶ್ವ ರಥ ಪದಾತಿ ಬಲದಿಂ ವಿದ್ಯಾಧರಾಧಿರಾಜರಿ೦ ಪರಿವೃತನಾಗಿರ್ದ ದಶಮುಖನಂ ವಲಿಮುಖ ಧ್ವಜಂ ಕಂಡು ಕಂ || ದೊರೆವೆತ್ತ ಸಮರಾಗಳ್ ದೊರೆಕೊಂಡತ್ತೆಂದು ತನ್ನ ರಥಮಂ ಲಂಕೇ || ಶ್ವರನಿರ್ದೊಡ್ಡಣದತ್ತಲ್ ಪರಿಯಿಸಿದನಿದೇಂ 'ಪ್ರತಾಪಿಯೋ ಪವನಸುತಂ || ೧೨೬ || ಅ೦ತು ಸರಿಯಿಸೆ ರಕ್ಕಸವಡೆ ತಕ್ಕುಗೆಟ್ಟು ತಲ್ಲಳಿಸುವಂತೆಟ್ಟಿಸಿ ಕಾದು ತು೦ ಬರ್ಪ ವಲಿಮುಖ ಧ್ವಜನಂ ದಶಮುಖಂ ಕಂಡು ಕಡುಮುಳಿದು ಕಾದಲ್ ಬಗೆಯ ಮಯ ತನೂಜರಪ್ಪ ಮಹೋದರ ವಜ್ಯೋದರರ್ ದಶಾಸ್ಯನ ಸೈಂದನ ಕಡ೦ಬ೦ದು ಕಾಳೆಗಮಂ ಕೈಕೊಂಡು ಮಹೋದರನ೦ಗದನೊಳಂ ವಜೋದರಂ ಹನುಮಂತನೊಳಂ ಸಾಮಾನ್ಯಾಸ್ತ್ರದೊಳಂ ದಿವ್ಯಾಸ್ತ್ರದೊಳಂ ಪಿರಿದುಪೊತ್ತು ಕಾದೆ ಕಂ || ಅಂಗದನ ಕಣೆ ಮಹೋದರ ನ೦ಗದ ಲೋಹಿತಮಸೀ೦ಟಿ ಪಿಂಗೆ ದಶ ಪ್ರಾ | ಣಂಗಳುಮೇಂ ಪಡೆದನೊ ದಿವಿ ಜಾಂಗನೆಯರ ಸೀವರ ಸೃನಾಲಿಂಗನಮಂ || ೧೨೭ 11, ಅಂತು ಮಹೋದರನಂ ಯಮೋದರಮನಂಗದಂ ಪಗಿಸೆ ತಾನುಮತಿ ಕುಪಿತನಾಗಿ ಮ||ಪ್ರತಿರುವಾಯೊಳ್ ತೊಟ್ಟು ದಿವ್ಯಾಸ್ತಮನಿಸೆ ಹನುಮಂ ಸಾಯಕಂ ನಾಂಟೆ ವಜೇ | ದರ ವಕ್ರೋಭಾಗಮಂ ಬೆಂಗಲಗುಬಳೆಯ ಕರ್ನತ್ಯರಿರ್ಮೆಯೊಳಂ ಪಾ। ಝರೆ ಜೀವಂಬಿಟ್ಟು ಬಾಯಂ ನಯನ ಯುಗಳಮಂ ಬಿಟ್ಟು ಕರ್ವೆಟ್ಟು ಬೀಟ್ಟಿಂ | ತಿರೆ ಬಿಚ್ಚಿಂ ಭೂಮಿಯೊಳ್ ರಾವಣಭುಜ ವಿಜಯಶ್ರೀಯುಮಲ್ಲಾಡು | ನನ್ನ೦ | ೧೨೮ | - 1. ಪೊಯ್ದು ಕೊ೦ದನವನಂ, ಚ, 2, ಪ್ರಚಂಡನೋ ಹಸುವcತಂ, ಗ.