ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೮
ರಾಮಚಂದ್ರಚರಿತಪುರಾಣಂ

      ಕಂ|| ಓಲಗಿಸಿ ವಸ್ತು ವಾಹನ
            ಮಾಲೆಯನುತ್ತಂಸ ಮಣಿ ಮರೀಚಿಗಳಿ೦ ಭೂ||
            ಪಾಲನ ಚರಣಸರೋಜ
            ಕ್ಕೋಲಗಿಸಿದನುದಯಸುಂದರಂ ತಣ್ಗಿಸಿಲಂ||೫||

      ಅಂತು ವಿನತನಾದನಂತರಂ ಸುರೇನ್ಪ್ರಮನ್ಯು ವಜ್ರಬಾಹು ಪುರಂದರರೊಳ೦ ವಿನಯವೃತ್ತಿಯಂ ಮೆಳೆದು ಸಮುಚಿತಾಸನದೊಳ್ ಕುಳ್ಳಿರ್ದು ಮುಕುಲಿತಾಂಜಲಿ
ಪುಟನಾಗಿ---

ಮ|| ಸಕಲಕ್ಷತ್ರಪವಿತ್ರ ನಿನ್ನ ಚರಣಾಂಭೋಜಾತ ಸೇವಾಸಮು|
     ತ್ಸುಕನಸ್ಮತ್ಪಿತೃವೆನ್ನ ತಂಗೆಯನನಂಗಶ್ರೀನಟೀ ನಾಟ್ಯವೇ||
     ದಿಕೆಯಂ ತನ್ನ ಮಗಳ್ ಗುಣೋದೆಯನನಂಗೋನಾದೆಯಂ ವಜ್ರಬಾ|
     ಹು ಕುಮಾರ೦ಗಿಭವಾಹನಂ ಮದುವೆಮಾಳ್ಪುತ್ಸಾಹದಿ೦ದಟ್ಟಿದಂ||೬||

     ಎಂದು ಬಿನ್ನವಿಸೆ ವಿಜಯರಥ ಮಹೀನಾಥನುದಯಸುಂದರನ ಮುಖಾರವಿಂ
ದಮಂ ನೋಡಿ---

ಉ|| ಕನ್ಯಕೆ ವಜ್ರಬಾಹುಗನುರೂಪೆ ಗಡಂ ಕುಡುವಂ ಗಡಂ ಜಗ|
     ನ್ಮಾನ್ಯನೆನಿಪ್ಪುದಾತ್ತನಿಭವಾಹನವಲ್ಲಭನಿಂತಿದನ್ಯ ಸಾ||
     ಮಾನ್ಯಮೆ ನಮ್ಮ ಕೊಳ್ಕೊಡೆಗೆ ತಕ್ಕೆಡೆಯಂ ಸಮಕಟ್ಟಿ ಕೊಟ್ಟನೇಂ
     ಧನ್ಯನೊ ಧಾತ್ರನೆಂದು ನುಡಿದಂ ಪ್ರಿಯಮಂ ವಿಜಯಾಂಗನಾಪ್ರಿಯಂ||೭||

     ಕಂ|| ಅಧಿರಾಜಂ ವದನಾಂಬುಜ
           ಮಧುವೆನಿಸಿದ ಮಧುರ ವಚನದಿಂ ತಣಿಸೆ ಮನೋ||
           ಮಧುಕರಮನುದಯಸುಂದರ
           ನಧಿಕೋತ್ಸವ ರಸತರಂಗಿತಾಶಯನಾದಂ|

     ಅ೦ತಾತನಂ ಸಂತೋಷ೦ಬಡಿಸಿ ವಿಜಯರಥಂ ವಿವ >೦ಗಳೋಪ ಕರಣ ಪುರಸ್ಸರಮಾಶೀರ್ನಿನದಮೊದವೆ ಶುಭದಿನ ಮುಹೂರ್ತದೊ

     ಕಂ|| ಓರನ್ನರೆನಿಪ ರಾಜಕು
           ಮಾರಕರೊಡನೇರಿ, ವಜ್ರಬಾಹುಕುಮಾರಂ|
           ವಾರಣಮನೇರಿದಂ ದಿ
           ಗ್ವಾರಣಮಂ ದಿಕ್ಕುಮಾರರೇರುವ ತೆರದಿ೦||



1: ನೆಂದನ್ಯನೊ ದಾತ್ರನೆಂದು. ಕ ಖ ಚ, `ನೆಂದುನ್ನ ತಚಿತ್ತನೊಪ್ಪೆ