ಕಂ|| ಶ್ರೀಯಂ ವಿತರಣದೊಳ್ ವಾಕ್
ಶ್ರೀಯಂ ರಾಜನ್ಯವೃತ್ತಿಯೊಳ್,ವಿಮಲಯಶ||
ಶ್ಶ್ರೀಯಂ ಜಿನಪ್ರವಚನ
ಶ್ರೇಯದೊಳತಿಶಯಿಸಿ ನೆಗಳ್ದಿನಭಿನವಪಂಪಂ||೧||
ಆ ವಿಜಯನರನಾಥನೊಂದು ದಿವಸ ವೊಡ್ಡೋಲಗಂಗೊಟ್ಟಿರ್ಪುದುಂ---
ಮ|| ಸಕಲಕ್ಷತ್ರಕಿರೀಟತಾಡಿತ ಪದಾಂಭೋಜಾತನಾಸ್ಥಾನ ವೇ|
ದಿಕೆಗುತ್ತಾನಿತ ಚಿತ್ರವೇತ್ರಲತನೋರ್ವ೦ ಕಾರ್ಯವಿಜ್ಞಾಪನೋ||
ತ್ಸುಕಚಿತ್ತಂ ಧವಲೋತ್ತರೀಯವಸನಂ ಲಂಬೋದರಂ ಲಂಬಕೂ|
ರ್ಚಕಲಾಪಂ ಸಿತಕಂಚುಕಂ ತ್ವರಿತದಿಂ ಬಂದಂ ಪ್ರತೀಹಾರಕಂ||
ಅಂತು ಬಂದು ಮೊಗಸಾಲೆಯೊಳ್ಮೆಯ್ಯಿಕ್ಕಿ ಮೊಗಸುತ್ತಿನ ದುಗುಲದ ಬಿನ್ನ
ಪದ ಸೆರಗನಧರಪಲ್ಲವಕ್ಕೆ ತೆಗೆದು, ದೇವ! ನಾಗಪುರಮನಾಳ್ವಿಭವಾಹನನ ತನೂಭವ ನುದಯಸುಂದರಕುಮಾರನರಮನೆಯ ಬಾಗಿಲೊಳ್ಬಂದು ನಿಂದಿರ್ದಪನೆಂದು ಬಿನ್ನವಿಸೆ ಬರವೇಳೆಂಬುದುಂ---
ಮ||ಸ್ರ| ದಿವದೊಳ್ಬೆಳ್ದಿಂಗಳಂ ಬಿತ್ತರಿಸೆ ತರಳಮುಕ್ತಾವತಂಸಪ್ರಭಾ ಪ
ಲ್ಲವಮಾಕಾರಂ ಸ್ಮರಾಕಾರಮನಜನಿಸೆ ಪೊಕ್ಕಂ ನೃಪಾವಾಸಮಂ ವಾ||
ಸವಸೌ೦ದರ್ಯ೦ ಧರಾವಲ್ಲಭಸುಭಗ ಸಭಾಲೋಕನಾಕರ್ಷಣಂ ಮಾ|
ಡೆ ವಿಶಾಲೋರಸ್ಟ್ಲೀಲೀ ನಿಸ್ತುಲ ಚಕಚಕಿತ ಸ್ಫಾರಹಾರಂ ಕುಮಾರಂ||೩||
ಕ೦|| ಕತಿಪಯ ಪರಿಜನ ಪರಿವೃತ
ನತಿಲಲಿತಾಕೃತಿ ಸಿತಾತಪತ್ರದ ನೆಳಲೊಳ್||
ಸಿತ ಶತಪತ್ರಚ್ಛಾಯಾಂ
ಚಿತ ಬಾಲ ಮರಾಲ ಲೀಲೆಯಂ ಪಾಲಿಸಿದ೦
ಅಂತು ಬಂದು ನೃಪಸಭಾಸದನಮಂ ಪೊಕ್ಕು---