ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೬

ರಾಮಚಂದ್ರಚರಿತಪುರಾಣಂ

ಚಂ|| ವಿಜಯರಥಂ ಧರಿತ್ರಿಗೆ ಮನೋರಥ ಸಿದ್ದಿಯನಿತ್ತು ವಕ್ತ್ರಪಂ|
       1ಕಜ ವರರಾಜಹಂಸವಧು ವಾಗ್ವಧು ರಂಜಿಸೆ ತನ್ನ ಕೀರ್ತಿ ದಿ||
       ಗ್ಗಜ ರದನಕ್ಕೆ ಕೀರ್ತಿಮುಖಮಾಗೆ ಜಗಜ್ಜನಕಂಠಭೂಷಣಂ|
       ನಿಜಗುಣನಾಮವಾಗಿರೆ ವಿರಾಜಿಸಿದಂ ಕವಿತಾಮನೋಹರಂ||

         ಇದು ಪರಮಜಿನಸಮಯ ಕುಮುದಿನೀ ಶರಚ್ಚಂದ್ರ
           ಬಾಲಚಂದ್ರ ಮುನೀಂದ್ರ ಚರಣ ನಖ ಕಿರಣ
             ಚಂದ್ರಿಕಾ ಚಕೋರ ಭಾರತೀ ಕರ್ಣಪೂರ
               ಶ್ರೀಮದಭಿನವಪಂಪ ವಿರಚಿತಮಪ್ಪ
                ರಾಮಚಂದ್ರಚರಿತಪುರಾಣದೊಳ್
                  ಪೀಠಿಕಾ ಪ್ರಕರಣಂ
                   ಪ್ರಥಮಾಶ್ವಾಸಂ.