ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ ಕಾಲು ಕೈಗಳ ಕಡಿದು ಕಾಯವ | ಸೀಟಿ ದಿಗು ಬಲಿಗೊಡುವ ವೀರರು | ಬಾಳುದೊಡ್ಡಿಯ ಕೊಟ್ಟು ನೆತ್ತಿಯೊಳಲಗ ಕೀಲಿಸುವ || ಶೂಲದಲಿ ಬೀಳುವರ ಬಸಿಹನು || ಸೀು ರಕುತನ ತೋಡಿ ಚೆಲ್ಲುವ | ಕಾಳರಾಕ್ಷಸ ಸಂಕುಲವ ನೆಲೆ ನೋಡುತೈತಂದ |೪೧|| ಬೆರಲುಗಳ ಸಮಿಧೆಗಳ ಕಂಡದ || ಚರು ಕಪಾಲದ ಪಾತ್ರದೊಳು ಬಿಸಿ | ನೆರೆಯ ರಾಜ್ಯದಲ್ಲಿ ನರ ದರ್ಭೆಯ ಪವಿತ್ರದಲಿ || ಬಯೆಲುವಿನಿಂದಾಗಲಗ್ನಿಯ || ನುರುಬಿ ಹೋಮವ ಬೇಳೆ ಕಡೆಯಲಿ | ಶಿರವ ಪೂರ್ಣಾಹುತಿಗೆ ಕೊಡುವರ ನೋಡುತೈತಂದ ||೪೨|| ಸಿಡಿದಲೆಯ ಕೊಟ್ಟಿರಿದ ತಲೆ ಬೊ | ಬೃಡಲು ಕರದಲಿ ಪಿಡಿದ ಮುಂಡವು || ನಡೆದು ಮೈಯಿಕ್ಕುತ್ತ ರಿಂಗಣಗುಣಿದು ನಲಿವವರ || ಕಡಿದು ರುಂಡವ ಮುಂಡದಗ್ರದಿ | ಬಿಡದೆ ಸುರಿವರುಣಾಂಬುಧಾರೆಯ | ಹಿಡಿದು ನಿಜಕರಗಳಲಿ ತರ್ಪಣವೀವರನು ಕಂಡ |೪೩|| ಮಸೆದಲಗಿನಿಂದಿಳಿದು ರಕುತವ || ಒಸಿಯುತಭಿಷೇಕವನ್ನು ಮಾಡುವ } ಬಸಿ ಒಗಿಯುತೆ ಕರುಳಿನಿಂ ದೇವತೆಯನರ್ಚಿಸುವ || ನಸುನಗುತ ಕೈಗಳನು ತುಂಡಿಸಿ | ಬಸಿವ ಮುಂಡದಿ ದಂಡವನು ವೀರ || ಚಿಸುವ ದನುಜೇಶ್ವರರ ನೆರವಿಯ ನೋಡುತೈತಂದ ೪೪[. ನಿಚ್ಚಟದ ಹರಕೆಗಳ ಕಾಣುತ | ಮೆಚ್ಚಿ ದೇವತೆಯವರ ಹರಣವ | ಬೆಚ್ಚದ ವರವಿತ್ತು ಮೆಚ್ಚಳ ತಡಹಲವರದ್ದು ||