ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ ಚಂದ್ರಕಾಂತದ ಖೇಡಕುಳಗಳ | ಚಂದವಹ ನವಿಲುಯ್ಯಲೆಯ ಘನ | ಮಂದಿರದ ಸಾಲೆಸೆದಿಹವು ನವರತ್ನ ರಚನೆಯಲಿ || ಬಂಧುರದ ಹೇಮದ ಕವಾಟಗ | ಳಿಂದ ಮೆಹದಿಹ ಪೌಳಿಗಳ ಗುಡಿ | ಗೊಂದಣದೊಳೆಸೆದಿರ್ಪವುಪ್ಪರಿಗೆಗಳಸಂಖ್ಯಾತ ||೨೩|| ರಸದ ಬಾವಿಯ ಗೇಹ ಗೇಹ | ಳೆಸೆವ ಚಿಂತಾಮಣಿಗಳಿರುತಿರೆ | ಮಿಸುಪ ಪರುಸದ ಕಣಿಗಳೆಲ್ಲಾ ವೀಧಿವೀಧಿಯೊಳು || ಕುಶಲಕೆಲಸದ ನೀಲಶಿಲೆಗಳ | ಪಸರಿಸಿದ ನೆಲಗಟ್ಟು ರಂಜಿಸೆ | ಹೊಸಪರಿಯ ಪುರುವೆನುತ ದಶಶಿರ ಹೊಗಳುತೈತಂದ ||೨೪|| ನಿಗಮಶಾಸ್ತ್ರ ಪುರಾಣದರ್ಥಾ | ದಿಗಳ ಶಬ್ದ ವ್ಯಾಕರಣಕಾ | ವ್ಯಗಳ ಮೀಮಾಂಸಾದಿ ತರ್ಕಪುರಾಣ ಪಠನೆಗಳ | ಮಿಗೆ ಸುಪಂಚಮಯಜ್ಞ ಜಪ || ಮಗಳ ಹುತವಹ ಶ್ರಾದ್ಧ ಕರ್ಮಾ | ದಿಗಳ ಕಳಕಳವೆಸೆಯೆ ರಾಕ್ಷ ಸಬುಧರ ಕೇರಿಯಲಿ ||೨೫|| ವರಧನುರ್ವಿದ್ಯೆಗಳ ಶಾಸ್ತ್ರದ | ಪರಿವಿಡಿಯ ಸಂಧಾನಲಕ್ಷ್ಮಣ || ಹಿರಿಯ ಗರುಡಿಯ ಮನೆಯ ಬತ್ತೀಸಾಯುಧಶ್ರಮದ || ಪರುಠವಣೆಯಿಂ ದಾರುಬಂಧನ || ಕರಿತುರಗದೇಜಾಟದಬ್ಬರ | ವುರವಣಿವ ಕ್ಷತ್ರಿಯರ ವಿಧಿಯ ನೋಡುತೈತಂದ ||೨೬|| ಕೃಷಿಯು ವ್ಯವಹಾರಗಳು ಮೊದಲಾ | ಗೆಸೆವಲಾಭದ ಗಣನೆ ಲೆಕ್ಕದ | ಕುಶಲಗಳು ಕೊಡಬಲ್ಲ ಕ್ರಯ ವಿಕ್ರಯದ ಮುಂಗಡವ ||