೨೩ ಮೈರಾವಣನ ಕಾಳಗ ಹನ್ನೆರಡು ವರುಷಕ್ಕೆ ಪಟ್ಟವ | ನನ್ನ ತದ ಭಾಳದೊಳು ತಳೆಯುವ | ನಿನ್ನಿ ದುವೆ ರಾವಣನು ಹೇಳಿದ ಮಂತ್ರ ತಪ್ಪುವುದೇ || ಎನ್ನ ಕೊಂದಿವನೊಡೆಯನಹನಂ | ದುನ್ನ ತರ ದಾನವರ ಕರೆಸಿದು | ಹೊನ್ನ ಸಂಕಲೆಗಳನ್ನು ತೊಡಿಸುವುದೆಂದು ನೇಮಿಸಿದ ||೬|| ರಕ್ಕಸರು ಪಿಡಿದೊಯ್ತು ಮನೆಯೊಳ | ಗಿಕ್ಕಿದರು ಸಂಕಲೆಯನತ್ತಲು | ಮಕ್ಕಳಾಟಿಕೆಯಾದುದೆಂದರು ಪ್ರರದ ಜನ ಮಲಗಿ | ಚಿಕ್ಕವರು ಮೊದಲಾಗಿ ಶೋಕದೊ || ಕುಕ್ಕಿದರು ಜನ ಬಯ್ಯುತಿರಲಾ | ಮಿಕ್ಕೆಲದ ದಾನವರ ಕಳುಹಿದ ಹರೆದುದೋಲಗವು |೭|| ರಾವಣನು ತಾನೊಬ್ಬನೆಂದೇ || ಭಾವದಲಿ ನಂಬಿಹನು ಚಿಂತೆಯ | ಠಾವಿದಾತಗೆ ತಕ್ಕ ಕಾರ್ಯಕ್ಕೊದಗ ಬೇಕೆನುತ || ಓವಿ ಶೃಂಗಾರವನು ಮಾಡಿದ | ತೀವಿ ಫಣಿಯುಡುಗೆಯನ್ನು ಬಿಗಿದನು || ತಾವರೆಯ ಸಖನಂತೆ ಹೊಳೆಯುತ ಕೈದುಗಳ ಕೊಂಡ ||೮|| ಬಂದು ಕಂಕಣದೇವಿಯರ ಪದ | ಇಂದು ನಮಿಸಿದು ಹಗೆಗಳನು ಹಿಡಿ | ತಂದು ದಿಗುಬಲಿಗುಡುವೆ ನಿನಗೆಂದೆನುತೆ ಕೈವಿಡಿದು || ಹಿಂದೆ ಕಾವಲ ಬಲಿದು ಭರದಲಿ | ಒಂದು ಲಂಕಾಪುರವ ಹೊಕ್ಕನು | ಮುಂದುಗೆಟ್ಟಿ ಹ ರಾವಣನ ವೋಲಗಕೆ ನಡೆತಂದ ||೯|| ತೆಗೆದು ತಕ್ಕೆ ಸುತ್ತೆ ಮಣಿಗ || ದುಗೆಯೋಳಗೆ ಕುಳ್ಳಿರಿಸಿದನು ಕುಶ | ಲಗಳ ಬೆಸಗೊಂಡಸಮ ಮೈರಾವಣನ ಸತ್ಕರಿಸಿ || ತ
ಪುಟ:ಮಹಿರಾವಣನ ಕಾಳಗ.djvu/೩೬
ಗೋಚರ