೩೨ ಮೈರಾವಣನ ಕಾಳಗ ವರರತುನಸೋಪಾನದಿಂದಲಿ | ಮೆರೆವ ಸರಸಿಯ ಕಮಲದಿಂ ಮಧು | ಕರನು ಚಿಗಿದುದು ನೋಡೆ ಹನುಮಗೆ ದಾರಿದೋರ್ದಂತೆ || ಮೆರೆವ ಚಿಲಿಚಿಮಿನಿಚಯದಿಂದಾ | ತರಳಖಗಸಂತಾನದುಲುಹಿಂ | ಸರಸಿ ಮೆರೆದಿರೆ ಕಂಡನಗ್ಗದ ವೀರ ಹನುಮಂತ ||೬೯|| ಹಾದುವು ಹಂಸೆಗಳು ಲತೆಗಳ | ನೇದುವು ಚಕ್ರಾಂಕ ಶಿರಗಳ | ನೂ ಮುಳುಗುತ ತಡಿಗೆ ಸಾರ್ದುವ ಹಂಸಪಕ್ಷಿಗಳು || ಚೀಟ ದುದು ಕೊಳರ್ವಕ್ಕೆ ಮರಗಳ | ನೇಸಿ ಕೊಂಡುವು ಗೂಗೆ ಶುಕಷಿಕ | ಬೀಜದುದು ಪರಿಮಳವ ಮಾರುತ ತನಯನಿದಿರಿನಲಿ ||೭೦|| ಕಂಡನಾಕೊಳದೊಳಗೆ ಹೇಮದ | ಪುಂಡರೀಕವನಡರಿ ಹೊಕ್ಕನು || ಗಂಡುಗಲಿ ಹನುಮಂತ ದನನೇಕಯೋಜನವ || ಪುಂಡರೀಕಾಕ್ಷನನು ನೆನೆಯುತೆ | ಕಂಡನಾಕೆಳೆಗಿದ್ದ ಸರಸಿಯ | ದಂಡೆಯೊಳು ಬರೆ ಮತ್ತ್ವಕಪಿ ಪೊಮಡುವ ಸಮಯದಲಿ || ಉಬ್ಬರಿಸಿ ಒಹ ಸರಸಿಮಧ್ಯದೊ | ಇಬ್ಬರಿಸಿ ಬರೆ ಮತೃವಾನರ | ಗಬ್ಬವೊಡೆದುದು ಬಡಬನಳುಕಿದ ಕಮಠ ತಲ್ಲಣಿಸೆ || ಗರ್ಭ ಬರಿದುದು ಮಲ ಶರಧಿ | ತಬ್ಬಿದಳು ವಾಸುಕಿಯ ಯೋಗಿಣಿ | ಬೊಬ್ಬಿಡುತೆ ನಡೆತಂದನಲ್ಲಿಗೆ ಮತೃಕಪಿರಾಯ ||೭೨|| ವಾರಿಜದ ನಾಳದೊಳು ಧೀರರ | ದಾರು ಬಂದವರೆನುತೆ ಹನುಮನ | ನಾರುಬಟೆಯಲಿ ತೂಗಿ ನುಂಗಿದ ಮತೃವಾನರನು || ||
ಪುಟ:ಮಹಿರಾವಣನ ಕಾಳಗ.djvu/೫೦
ಗೋಚರ