ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦೪

ರಾಮಚಂದ್ರಚರಿತಪುರಾಣಂ

ಕಂ || ಮುಳಿಸೆ೦ಬ ವಿಷದ ಬಳ್ಳಿಯ
ತಳಿರೆನೆ ಪೊಳೆವಧರ ಮಣಿಯ ಮೇಲೆ ಮುಗುಳ್ ||
ಜ್ಜಳಿದಂತೆ ಮುಗುಳ್ಳಗೆ ಪ
ಜ್ಜಳಿಸುವಿನಂ ಚಕ್ರಿ ನೋಡಿ ದೂತನ ಮೊಗವಂ || ೧೭ ||

ಭರತನುದ್ಯೋಗಮೇನೆಂಬುದುಮಾತನತಿವೀರ ವಲ್ಲಭನಟ್ಟಿದ ದೂತಂ ವಿನೀತಾ
ಪುರಮಂ ಪೊಕ್ಕು ಭರತನಂ ಕಂಡು ನಿಮ್ಮನೆಮ್ಮರಸಂ ತನಗಾಳಾಗಿ ಸುಖಮಿರ್ಪು
ದೆಂದು ಬೆಸಸಿಯಟ್ಟಿದನಿದು ನಿಮಗುಲುವ ಕಜ್ಜಮದೆಂತೆನೆ-

ಚ || ಬಗೆಯದೆ ಕಾಳೆಗಕ್ಕೆ ಬಗೆದ ರ್ಪೊಡೆ ನಿಮ್ಮಳವಲ್ಲ ವಂಕದಾ |
ನೆಗೆ ತುರಗಕ್ಕೆ ತೇರ್ಗೆ ಪವಣಿಲ್ಲ ಪದಾತಿಗೆ ಮೇಜರೆಯಿಲ್ಲದ೦ ||
ಬಗೆದುದಿರ್ಪ ಗಾಂಪನುಟಿದಾಳ್ವೆಸಗೆಯ್ಯುದು ಬಾ ಬಟ್ಟೆಯಂ |
ಬಗೆವುದು ಕೀಜಿ ಮಾಡುವವರಾರತಿವೀರನ ಬಾಹುವೀರಮಂ || ೧೮ ||

ಎಂದು ಗದ ಗರ್ಜಿಸಿದ ದೂತನ ಮಾತಿಂಗೆ ಶತ್ರುಘ್ನಂ ಮುಳಿದು-

ಚ || ಕನಸಿನೊಳ ಪ್ರೊಡಂ ಭಯದ ಲೋಭದ ಮಾತು ಮನು ಪ್ರಸೂತರೊಳ್ |
ಜನಿಯಿಸದ ವೀರನತಿವೀರ ವೆಸರ್ ತನಗೇವು ದಾಹವ ||
ಕೆನಗಿದಿರಾಗಿ ನಿಲ್ವನಿತು ದೋರ್ಬಲಮುಳ್ಕೊಡೆ ತಂದು ಕಾದಿಸಾ |
ತನನೆಲೆ ದೂತ ಬಿಲ್ವಡಿಯಲೀವೆನೆ ಪುಡಿವಂತು ಮಾಡುವೆ೦ || ೧೯ ||

ಎಂದೊದಜ ದೂತನಂ ಪರಿಭವಿಸಿ ಕಳೆವುದು೦-
ಕಂ || ಭರತನೊಳತಿವೀರ ಸಂ
ಗರಕ್ಕೆ ಮೇಲೆತ್ತಿ ಬಂದನೆ೦ಬಸವಾದಂ |
ಪರದಂದು ರಘುಕುಲಕ್ಕದೆ
ಪರಾಭವಂ ಪರಿಭವಕ್ಕೆ ಕೋಡೆರಡೊಳವೇ || ೨೦ ||

ಎಂದು ಮನದೊಳ್ ನಿಶ್ಚಯಿಸಿ ಭರತ ಶತ್ರುಘ್ನಂಬೆರಸು ಚತುರಂಗಬಲ
ಸಮೇತನಾಗಿ ನಂದ್ಯಾವರ್ತಪುರಕ್ಕೆತ್ತುವುದುಮಾಸಮಯದೊಳ್ ಮಿಥಿಲೆಯನಾಳ್ವ
ಕನಕನುಗುಜ್ಜೆಣಿಯನಾಳ್ವ ಸಿ೦ಹೋದರನುಮಸಂಖ್ಯಾತಬಲಂಬೆರಸು ತನ್ನೊಳ್
ಬಂದು ಕೂಡಿದರಿತ್ತ ಪರಿಭವಂಬಿತ್ತು ಬಂದ ಚರನ ವಚನಯನತಿವೀರಂ ಕೇಳು ಘನ
ಗರ್ಜನೆಯಂ ಕೇಳ ಸಿಂಹದಂತೆ ಮುಳಿದು ಭರತ೦ಗಿದಿರೆ ನಡೆಯಿಡರಿಸಿದ
ನೆಂಬವಾರ್ತೆಯಂ ವಾಯುಗತಿವೆಸರ ದೂತನಆಪೆ ಪೃಥ್ವಿಧರಂ ದೂತನಂ ಮನ್ನಿಸಿ
ಕುಪಿ ರಾಘ ವನ ಮೊಗಮಂ ನೋಡಿ ಕಾಳೆಗಮನಾಂ ಪೋಗಿ ಮಾಣಿಸುವೆ