೩೦) ರಾಮಚಂದ್ರ ಚರಿತಪುರಾಣ6 ಕ೦ ! ಅದಅ೦ದಾತಂಗಾನೀ ಯದೆ ಕೂಸಂ ಕಾಳೆಗಕ್ಕೆ ಮೆಯ್ದರೆ ಪಲ ಕಾ || ಲದ ರಾಕ್ಷಸ ವಾನರ ವಂ ಶದ ನಗ್ನೆನ್ನಿಂದಮ೨೨ ದುದೆಂಬುದು ಲೋಕಂ || ೧೭೨ | ಅರಸುತನಂಗೆಯ್ಯ ಬಿಪಿಂ ಧುರದೊಳ್ ಮಾಲಾಂತರೆಲ್ಲರಂ ಮ ಪುದುಂ || ದೊರೆಕೊಳ್ಳುಂ ಪಾತಕಮಾ ಸಿರಿಯುಂ ಚಿರಮಲ್ಲು ನೀರ ಬೊಬ್ಬುಳಿಕೆಯವೋಲ್ || ೧೭೩ || ಅದ ಅ೦ ಪಾಪಕ್ಕ೦ ಪಟಗಮೆಡೆಗುಡದ ತಪವನಪ್ಪುಕೆಯೊಡೆನ್ನ ಕುಲಮುಂ ಚಲಮುಂ ವ್ರತನುಂ ಕಿಡದೆ ನಡೆಗುಮೆಂದು ತತ್ಸಂದು ಸುಗ್ರೀವಂಗೆ ರಾಜ್ಯಮಂ ಕೊಟ್ಟು ಪರಿಜನಕ್ಕೆ ನಿಶ್ಚಲ್ಯನಾಗಿ 'ಸದ್ದರ್ಶನಗಗನಚ೦ದ್ರರೆಂಬ ಚಾರಣರ ಪಕ್ಕ ದೊಳ್ ತೋಜಿದು ತಪಂಬಟ್ಟು ಘೋರ ವೀರ ತಪದಿಂ ಖದ್ಧಿ ಪ್ರಾಪ್ತನಾದಂ ಕಂ | ಸುಗ್ರೀವನುಮಿತ್ತಲ್ ಖಚ ರಾಗ್ರಣಿ ತನ್ನನುಜೆಯಂ ನಯೋಪಾಯಂ ಪಾ || ಣಿಗ್ರಹಣ ಸಹಿತಮಿತ್ತು ದ ಶಗ್ರೀವಂಗಾತ್ಮಪದವಿಯೊಳ್ ಸುಖನಿರ್ದ೦ || ೧೬೪ || ಅಂತು ದಶವದನಂ ಶ್ರೀ ಪ್ರಭೆಯಂ ಮದುವೆಸಿಂದು ಮತ್ತೊರ್ಮೆ ನಿತ್ಯಾ ಲೋಕಪುರಮನಾಳ್ವ ನಿತ್ಯಾಲೋಕನೆಂಬ ವಿದ್ಯಾಧರಂಗಂ ಶ್ರೀದೇವಿಗಂ ಪುಟ್ಟದ ರತ್ನಾವಳಿಯಂ ಮದುವೆನಿಂದು ಮಗುಟ್ಟು ಬರ್ಸ ಸಮಯದೊಳ್ ಕೈಲಾಸನಗ ನಿತಂಬಸ್ಥಲದೊಳಿರ್ದ ಮಹಾಮುನಿಯ ಮೇಲೆ ವಿಮಾನಂ ನಡೆಯದೆ ನಿಲ್ಲುದುಂ ವಿಸ್ಮಿತ ಮನನಿದೇನೆಂದು ನಿಂದವಲೋಕಿಸೀವಿದ್ಯೆಯಿಂ ವಾಲಿದೇವನಪ್ಪುದನ ದಿನ್ನು ಮೆನ್ನ ಮೇಲಣ ಮುನಿಸನುಲಿಯದೆ ವಿಮಾನಮಂ ಸ್ತಂಭಿಸಿದೊಡೇನಾದುದೀ ನಗಂಬೆರಸೀಗ ಕಿಚ್ಚು ಯು ಸಮುದ್ರದೊಳಿಕ್ಕುವೆನೆಂದು ಪುಷ್ಪಕವಿಮಾನದಿನವನೀ ತಲಕ್ಕವತರಿಸಿ ಘನಾಪಘನಮುಮಂ ಬಹುಬಾಹುಗಳುಮಂ ವಿ ಕುರ್ವಿಸಿ ರಸಾತಲ ಕ್ಕಿಳಿದು ಧನದಾಚಲದಧಸ್ಥಲಮನೆಯ್ದೆ - ಉ | ಸಾಸಿರವಿದ್ಯೆಗಳ್ವರಸು ತೋಳ ತೆರ್ಕೆಗಳಿಂದಳುರ್ಕೆವೆ | ತಾ ಸುರವೈರಿ ಬೆಳ್ಳುಗಿಲನೆತ್ತುವ ಘೋರ ಸಮಾರನಂತೆ ಕೈ ! ಲಾಸಮನೆ ಕಾವ ಬಗೆಯಿಂ ಬಹು ರತ್ನಮಯಂಗಳಂ ಜಿನಾ || ವಾಸವನಂದು ವಾಲಿಮುನಿಪುಂಗವನುಂಗುಟದಿ೦ದಮೊದಂ || ೧೭೫ || 1. ಗಗನಚರಣdಂಬ. ಚ.
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೯೨
ಗೋಚರ