ದಶಮಾಶ್ವಾಸಂ (ch ಚ || ಎನಗಿನಿಸಳ್ಳದೆನ್ನನುಜೆಯಂ ಪಿಡಿದುಯ್ದ ನವಂಗೆ ತಕ್ಕುದಂ || ಜನಿಯಿಸೆನೆಂದು ಗರ್ಜಿಸೆ ದಶಾನನನಾತನ ಕಾ೦ತ ನಿನ್ನ ಮ || ಯುನನನುರಕ್ತನಾಕೆಗನುರೂಪನಿದಾವುದು ಪೊಲ್ಲಗೆಯ ನೀ || ಮುನಿಸವಿವೇಕವೆಂದು ನುಡಿದಳ್ ಮಯ ನಂದನೆ ತತ್ವಶಾಸ್ಯನಂ 1 ೧೬೮ || ಅದಲ್ಲದೆಯುಂ ನಿನಗೆ ವಿಧೇಯನಲ್ಲದ ಚಂದ್ರೋದರನಂ ಕೊಂದು ನಿಷ್ಕಂಟಕಂ ಮಾಡಿದನಾತನಂ ಮುಳಿದು ನೀಂ ಕೊಂದು ನಿನ್ನನುಜಾತೆಗೆ ವೈಧವ್ಯ ದೀಕ್ಷೆಯಂ ಕುಡುವುದು ಚದುರಲ್ಲೆಂದು ಕಲುಷಮಂ ಕಳೆದಳಿ, ಚಂದ್ರೋದರನ ಪತ್ನಿಯು ಮಂತರ್ವತ್ನಿಯುಮಪ್ಪನುರಾಧೆ ಪರಿಜನಂಬೆರಸು ಪೋಗಿ ನವಮಾಸಂ ತೀವೆ ಕೂಸುವೆವೀತಂ ಗರ್ಭದೊಳಿರೆ ಪಗೆವರಿ೦ ಸೇದೆವಟ್ಟೆನೆಂದಾತಂಗೆ ವಿರಾಧಿತನೆಂದು ಹೆಸರನಿಡುವುದುಮಾತನನುಕ್ರಮದಿಂ ಬಳೆದು ನಗೆಯ೦ ಸಾಧಿಸುವುಪಾಯಮಂ ಬಗೆಯುತ್ತಿರ್ಸಿನಮಿತ್ತಲ್ ಉ || ಮಾನಧನಂ ವಿವೇಕನಿಧಿ ವಾಲಿ ಜಿನಾಗಮ ಕೋವಿದಂ ಹೆ೦ ! ಗಾನತನಾಗೆ ದರ್ಶನವಿಶುದ್ಧಿಗೆ ದೂಷಣಮಕ್ಕು ಮ೦ತಜ೦ | ಜೈನಪದಕ್ಕೆ ಜೈನಮುನಿಗಲ್ಲದೆ ಕೈ ಮುಗಿಯೆಂ ದಲೆಂದು ಧ | ರ್ಮಾನುಗನಹ್ರ ಮತ್ತ ಚರಿತ ಪ್ರಿಯನಾದವಿದೇನುದಾತ್ತನೋ ಅನಂತವೀರನುಂ ಚರಮದೇಹ ಧಾರಿಯುಮವಕ್ರ ವಿಕ್ರಮನುಮಪ್ಪ ವಾಲಿ ನಿಯಮಸ್ಸನಾಗಿ ಸುಖದಿನಿರ್ಪುದುಮೊಂದು ದಿವಸಮಾತನನುಜೆಯಂ ಶ್ರೀಪ್ರಭೆಯಂ ಬೇಡಿ ದಶಮುಖಂ ಮುಖ್ಯ ಪುರುಷರ ಕಯ್ಯೋಳೋಲೆಯನಟ್ಟುವುದುಮದಂ ತಿಳಿದು ವಾಲಿ ಮಂತ್ರಶಾಲೆಯ ಸುಗ್ರೀವಂಬೆರಸು ಪೊಕ್ಕು ಮಂತ್ರಿಮಂಡಲಮು ಮನಾಹ್ಯ ಪರಿಜನಮುಮಂ ಬರಿಸಿ ಕ೦ ! ತಗದೆನಗುನ್ಮಾರ್ಗಿಗೆ ಕೂ ಸುಗುಡಲ್ ದಶಕ೦ಧರಂ ಮದಾಂಧಂ ಧರ್ಮಾ || ನುಗನಲ್ಲನನುಜೆಯಂ ಕುಡೆ ತೆಗಲಹದೊಳ್ ಪರದೊಳಗೆ ಪಾತಕಮಕ್ಕುಂ || ೧೭೦ || ಕುಡೆ ಕೂಸನುದ್ದ ತಂಗಾ೦ ಪೊಡೆವಡುವನಿತಕ್ಕು ಮಾದೊಡೆನ್ನ ಚರಿತ್ರಂ || ಕಿಡುಗುಂ ವ್ರತಮಂ ಕೈಕೊಂ ಡೆಡೆಯೊಳ್ ಬಿಟ್ಟವನೆ ಭಿನ್ನ ಭಾಜನಮಲ್ಲೇ ೪ ೧೭೧ ||
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೯೧
ಗೋಚರ