ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪ ಫ್ಲಾ ಶ್ಚಾ ಸಂ

ಕಂ|| ಶ್ರೀರಾಮಂ ವಿಶದ ಯಶ
ಶ್ರೀ ರಾಮಾ ರಮಣನರ್ಥಿಜನತಾ ಸುರಭೋ ||
ಜಾರಾಮಂ ಧರ್ಮೋದ್ಯಮ
ಭೌರೇಯನುದಾತ್ತ ಚಿತ್ತನಭಿನವಪಂಪಂ || ೧ ||


ಅಂತು ರಾಮಲಕ್ಷ್ಮಣರೊಳುದಿತೋದಿತವಾದಗಣ್ಯ ಪುಣ್ಯ ಪ್ರಭಾವಮಂ
ಕಂಡು-

ಮ || ಸಿರಿಯುಂ ಮೈಮೆಯುಮಾದುವಗ್ರಜರೊಳಾಯ್ತಿನೊಳೆಂಬೇವದಿಂ |
ಭರತಂ ಲೋಭರತಂ ವಿಷಾದಭರ ತಂದ್ರೀಭೂತ ಚಿತ್ತಂ ತಪೋ ||
ಭರ ತೃಷ್ಣಾಪರನಪ್ಪುದಂ ತಿಳಿದು ತದ್ವತ್ತಾಂತಮಂ ಕೈಕೆ ಮೋ |
ಹರಸಂ ಕೈಮಿಗೆ ಕಾದಲಂಗೆ ಪತಿಗಂದಿಂತೆಂದಳೇಕಾ೦ತದೊಳ್ || ೨ ||

ಕಂ || ಭರತನ ವದನಾಂಭೋಜ೦
ಕೊರಗಿದುದು ಮನಸ್ಸರೋಜದೊಡನೆತ್ತಾನುಂ ||
ಪರಿಣಯನೋತ್ಸವ ಚಿಂತಾ
ಭರವಾತನ ಬಗೆಗೆ ಬಂದುದಾಗಲೆವೇಲ್ಕಂ|| ೩ ||


ಕನಕಂಗಂ ಸುಪ್ರಭೆಗಂ
ಜನಿಯಿಸಿದ ವಿಶಾಲನೇತ್ರೆ ಕನಕಪ್ರಭಯಂ ||
ಜನನಾಥ ಮದುವೆಮಾಡಾ
ತನನಿರದೆ ತೊಡರ್ಚು ಮೋಹಪಾಶದ ತೊಡರೊಲ್ || ೪ ||

ಎನ ಮನದಕೊಂಡು ಜನಕನುಮಂ ಕನಕನುಮಂ ಬರಿಸಿ-

ಕಂ || ಅನುಬಂಧ ಪರಂಪರೆಯಂ
ಜನಿಯಿಸಲೆಮಗು ಯಾದುದೀ ವುದು ನಿಜನಂ ||
ದನೆಯನನುರೂಪೆಯಂ ಮ
ತನಯಂಗೆನೆ ದಶರಥಂಗೆ ಕನಕಂ ನುಡಿದಂ ||೫ ||


1. ಭರನಪ್ಪುದ೦ .ಕ.ಖ.ಚ.