ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪ೦ಪರಾಮಾಯಣದ ಕಥೆ
63

ತ್ತೆಂಟು ಸಾವಿರ ವಿದ್ಯಾಧರಿಯರೊಡನೆ ಶಶಿಕಾಂತಾರ್ಯಿಕಾ ಸಮಕ್ಷದಲ್ಲಿ ದೀಕ್ಷೆಗೊ೦ಡಳು. ರಾಮಲಕ್ಷ್ಮಣರು ಭಟ್ಟಾರಕರಿಗೆ ಪುನರ್ನಮಸ್ಕಾರಮಾಡಿ ಸುಗ್ರೀ ವಾಂಗದ ಪ್ರಭಾಮಂಡಲ ಮರುತ್ತುತ ವಿರಾಧಿತ ಪ್ರಮುಖ ವಿದ್ಯಾಧರರೊಡನೆ ಕೂಡಿ ತ್ರಿಜಗದ್ರೂಷಣ ಗಜಾರೂಢರಾಗಿ ಸಮಸ್ತ ಮರ್ಯಾದೆಗಳೊಡನೆ ಲಂಕಾ ಪುರವನ್ನು ಸೇರಿ ನಂದನವನದಲ್ಲಿದ್ದ ಸೀತಾದೇವಿಯನ್ನು ನೋಡುವ ಕುತೂ ಹಲದಿಂದ ಅಲ್ಲಿಗೆ ಬಂದರು. ರಾಮಸ್ವಾಮಿಯು ಬಾಡಿದ ಕಮಲ ಲತೆಯಂತಿದ್ದ ಸೀತಾದೇವಿಯನ್ನು ಕಂಡು ಪಟ್ಟದಾನೆಯಿ೦ದಿಳಿದು ಬರುತ್ತಿರುವಲ್ಲಿ ಆಕೆಯು ವಲ್ಲಭನನ್ನು ನೋಡುವ ಸಂಭವದಿ೦ದು೦ಟಾದ ಆಕ೦ಪನದಿಂದ ಪತಿಯನ್ನು ಎದುರುಗೊಂಡು ಕೈಗಳನ್ನು ಮುಗಿದು ಆತನ ಪಾದಗಳಿಗೆರಗಿದಳು. ಆ ಸಮಯದಲ್ಲಿ ಆಕೆಯ ಪತಿವ್ರತಾಗುಣ ಸಮೃದ್ಧಿಗೆ ದೇವತೆಗಳು ಆಕೆಯನ್ನು ಸ್ತುತಿಸಿ ಪೂಮಳೆಗರೆದು ದಿವ್ಯಭೂಷಣಗಳಿಂದರ್ಚಿಸಿದುದನ್ನು ಖಚರಾಧಿನಾಯಕರು ನೋಡಿ ಬೆರಗಾಗಿ ಜಾನಕಿಗೆ ಕೈಗಳನ್ನು ಮುಗಿದರು; ರಾಮಚಂದ್ರನಿಗೆ ಆನಂದ ಪುಲಕವುಂಟಾಯಿತು. ಅನಂತರ ಲಕ್ಷ್ಮೀಧರನು ನಮಸ್ಕರಿಸಲು, ಸೀತಾದೇವಿಯು ಆತನನ್ನು ಹರಸಿ ತನ್ನ ನಿಮಿತ್ತವಾಗಿ ಅಷ್ಟು ತೊಂದರೆ ಪಟ್ಟಿದ್ದಕ್ಕೆ ಶೋಕಿಸು ತಿರುವಲ್ಲಿ ರಾಮಲಕ್ಷ್ಮಣರು ಆಕೆಯನ್ನು ಸಂತಯಿಸಿದರು. ತರುವಾಯ ಸೀತೆಯು ಪ್ರಭಾಮಂಡಲನನ್ನು ಕಂಡು ನಮಸ್ಕರಿಸಲು ಆತನು ಅತಿ ಪ್ರೀತಿಯಿಂದ ಆಕೆಯನ್ನು ಹರಸಿ ಸುಗ್ರೀವ ನಲ ನೀಲಾ೦ಗದ ಮರುತ್ತುತ ಜಾ೦ಬವಾದಿಗಳನ್ನು ಒಬ್ಬೊಬ್ಬ ರನ್ನಾಗಿ ಹೆಸರು ಹೇಳಿ ಆಕೆಗೆ ತೋರಿಸಿ ಆಕೆಯನ್ನು ಸಂತೋಷಪಡಿಸಿದನು.
ತದನಂತರ, ರಾಘವನು ಜಾನಕಿಯನ್ನು ಪಟ್ಟದಾನೆಯ ಮೇಲೆ ಕುಳಿರಿಸಿಕೊಂಡು, ಲಕ್ಷ್ಮಣನೊಡನೆ ಸಕಲ ಪರಿವಾರವೂ ಸುತ್ತಿ ಬರಲು ರಾವಣನ ಅರಮನೆಯನ್ನು ಹೊಕ್ಕು ಅಲ್ಲಿಯ ಶಾನ್ತಿಜಿನಭವನವನ್ನು ಬಲಗೊಂಡು ಜಿನ ಸತಿಯನ್ನು ಸ್ತುತಿಸಿ ದಿವ್ಯಾರ್ಚನೆಗಳಿಂದರ್ಚಿಸಿದನು. ಆಗ ಸಹಸ್ರಾಂತಃಪುರ ಪ್ರಧಾನೆಯಾದ ವಿದಗ್ಧೆಯೆಂಬ ವಿಭೀಷಣನ ಮಹಾದೇವಿಯು ಆತನಪ್ಪಣೆಯ ಮೇರೆಗೆ ಬಂದು ರಾಮಲಕ್ಷ್ಮಣರಿಗೂ ಸೀತಾದೇವಿಗೂ ನಮಸ್ಕರಿಸಿ ತನ್ನರಮನೆಗೆ ದಯಮಾಡಿ ಬರಬೇಕೆಂದು ಕೇಳಿಕೊಳ್ಳುತ್ತಿರುವಲ್ಲಿ ವಿಭೀಷಣನು ಬಂದು ರಾಮಚ೦ದ್ರನನ್ನು ಲಕ್ಷ್ಮಣ ಸೀತಾದೇವಿಯರೊಡನೆ ಮಹಾ ವೈಭವದಿಂದ ತನ್ನ ಅರಮನೆಗೆ ಬಿಜಯ ಮಾಡಿಸಿ ಸಿಂಹಾಸನದ ಮೇಲೆ ಕುಳ್ಳಿರಿಸಿ ಅಘ್ರ್ಯಾಪಾದ್ಯವನ್ನು ಕೊಟ್ಟು ಅತ್ಯುತ್ಸವದಿ೦ದ ಔತಣವಾಡಿ ದಿವ್ಯ ಮಣಿಭೂಷಣ ದಿವ್ಯಾನುಲೇಪನ ದಿವ್ಯಾಂಬರಗಳಿಂದೋಲಗಿಸಿ ತನ್ನ ವಿನಯವನ್ನು ಪ್ರಕಟಿಸಿದನು. ಹೀಗೆ ನಿರಂ ತರೋತ್ಸವದಿಂದ ಕೆಲವು ದಿನಗಳು ಕಳೆದ ಮೇಲೆ ವಿಭೀಷಣ ಸುಗ್ರೀವಾದಿಗಳು ರಾಮಲಕ್ಷ್ಮಣರಿಗೆ ಶುಭಮುಹೂರ್ತದಲ್ಲಿ ರಾಜ್ಯಾಭಿಷೇಕ ಮಾಡಿದರು. ಆಗ