೪೧೨ ರಾಮಚಂದ್ರಚರಿತಪುರಾಣಂ ಶ ಕಂ || ಇತ್ತ ಮಗು ಮಗುಚಿತಂ ದತ್ತಲ್ ರಾಮಾನುಜನ್ಮನಿಂದಗಿಯೊಳ್ ಕಾ || ದುತ್ತುಮಿರೆ ರಾಘವಂ ಸುಭ ಟೋತ್ತಮನೊಳ್ ಕುಂಭಕರ್ಣನೊಳ್ ಬಿಲ್ಲೋಯಂ || ೧೮ || ಆ ಸಮಯದೊಳಸಮಯ ವಿಲಯ ಸಮಯ ಸಮುತ್ಪಾದನ ಸಮರ್ಥನಪ್ಪ ಕೃತಾಂತನಂತೆ ಹನುಮಂತಂ ಕುಂಭಕರ್ಣನೊಳ್ ಕಿಂಧಂ ಕೇತುವಿನೊಳ್ ಪ್ರಭಾಮಂಡಲಂ ಮೇಘವಾಹನನೊಳ್ ವಿರಾಧಿತಂ ಮಯನೊಳೂರ್ಜಿತಂ ದೃಢ ರಥನೊಳ್ ಪೆರುಮಕೆಯ ಕಪಿಧ್ವಜ ಬಲನಾಯಕರನೇಕರ್ ರಾಕ್ಷಸ ಬಲದ ನಾಯಕರೊಳ್ ಬಿಲ್ಗೊಯ್ದು ಬಹು ಕಬಂಧ ನರ್ತನ ಪ್ರಬಂಧಮಗುರ್ವುಮದ್ಭುತ ಮುಮಾಗೆ ಮಹಾಯುದ್ದಂಗೆಯ್ಯುತ್ತು ಮಿರ್ಸಿನವಿತ್ತಲ್ ಕಂ !! ಇಂದಗಿ ಸಾಧಾರಣ ಶರ ಸಂದೋಹದಿನೆಚ್ಚು ಕಾದಲಣಮಾಜದೆ ಶ | ತುಂದಮನೊಳ್ ಲಕ್ಷ್ಮಣನೊಳ ತಂದಂ ದಿವ್ಯಾಸ್ತ್ರಗರ್ಭ ಶರಧಿಗೆ ಕೈಯ೦ || ೧೯ || ಅ೦ತು ದಿವ್ಯ ಬಾಣವಂ ಬಾಣಾಸನದೊಳ್ ಕೂಡಿಕೊಂಡು ಪೇ೦ದ್ರನನಿಂದ್ರ ಜಿತ್ಸುಮಾರನಿಸುವುದುಮ | ಗಗನಾಭೋಗದೊಳಿರ್ದು ನೋಟ್ಸ್ ಸುರ ಸಂದೋಹಂ ಮಹೋತ್ಸಾಹದಿ೦ | ಪೊಗನ್ನಂ ತಮದಂಬನರ್ಕಶರದಿಂದಾಶೀವಿದೋಗ್ರಾಸ್ತಮಂ || ಖಗರಾಜಾಸ್ತ್ರ ನಿಪಾತದಿಂ ಕಿಡಿಸಿ ದಿವ್ಯಾಸ್ತ೦ಗಳಿ೦ ಗೆಲ್ಪ ನಿ೦ || ದಗಿಯಂ ಸಂಹೃತಿ ಕಾಲ ಸಾಂಧ್ಯ ಜಲದಾರಕ್ಷಣ೦ ಲಕ್ಷಣಂ || ೨೦ | ಕಂ || ತ್ರಿದಶೇಂದ್ರ ವಿಜಯಿಯಂ ದಶ ವದನನನಾಹವದೊಳಿಕ್ಕಲಿರ್ದ ಮಹಾ ನೀ || ರ್ಯದ ಕಣಿಗೆ ಲಕ್ಷಣಂಗಾ ವುದು ಗಹನ ಗೆಲ್ಕು ದುಲಿದ ರಣಬಾಲಕರಂ 11 ೨೧ || ಅಂತು ಗೆಲ್ಲಿಂದಗಿಯಂ ವಿರಥಂಮಾಡಿ ನೆಲಕ್ಕಿಕ್ಕಿ ನಾಗಪಾಶದೊಳ್ ಕಟ್ಟಿ. ವಿರಾಧಿತನ ಕೈಯೊಳ್ ಬೀಡಿ೦ಗೆ ಕಲಿಸುವುದುಮಿತ್ತಲ್ ಕ೦ !! ಪೆಅರಳವೆ ರಾಮನೊಳ್ ತ ಜಿಯಲಿವಂ ರಾವಣಂಗೆ ಶೌರದೊಳಂ ನೇ |
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೦೨
ಗೋಚರ