ಶ್ರೀ ಮದಾನಂದರಾಮಯಣ, = = =- - - -- -- -- --- ಹವಾಯಿತು. ಆಗ ಜನಕರಾಜನು ಕಾಮ-ಲಕ್ಷಣರಂತ ಪ್ರಕಾಶಮಾನರಾದ ಈ ಬಾಲಕರು .ಯಾರೆಂದು ವಿಶ್ವಾಮಿತ್ರರನ್ನು ಕೇಳಿದನು. ಈ ಮಾತುಗಳನ್ನು ಕೇಳಿ ವಿಶ್ವಾಮಿತ್ರರು ಜನಕನಹರ:ಲದೇ, ಇವರಿಬ್ಬರು ಬಾಲಕರು ಕೈಕೇಯಿ ಯ ಮಕ್ಕಳು, ಅವರಿಗೆ ಭರತ- ಶ್ರುತಿಂದು ಹೆಸರು. ಇವರು ವಿದ್ಯೆಯಲ್ಲಿ ಮತ್ತು ವಿನಯದಲ್ಲಿ ರಾಮ-ಲಕ್ಷಣ. ಸಮಾನರು, ಎಂದು ಹೇಳಿದರು. ಆಗ ವಿದೇಹಾಧಿಪನು ಸ್ವಾಮಿ, ಬಹು ಸಂತೋಷವಾಯಿತು. ನನ್ನ ಮಗಳಾದ ಅಯೋಸಿಜಳಾದ ಸೀತೆಯನ್ನ೦ತು ರಾಮನಿಗೆ, ಊರ್ಮಿಳೆಯನ್ನು ಲಕ್ಷ್ಮಣನಿಗೆ ಕೊ ಡುವದು ನಿಶ್ಚಯವಾಗಿದೆಯಷ್ಟೆ. ನನ್ನ ತಮ್ಮ ಕುಶಧ್ವಜನ ಮಕ್ಕಳಾದ ಮಾಂಡ ವಿ, ಶ್ರುತಕೀರ್ತಿಯರೆಂಬವರನ್ನು ದಶರಥಸ ಈ ಇಬ್ಬರು ಮಕ್ಕಳಿಗೆ ಕೊಡಬೇಕಂ ದು ಇಚ್ಛೆಯುಂಟಾಗಿರುವದು. ಹೇ ಮುನಿಶ್ರೇಷ್ಠತೆ, ತಾವು ಈ ನನ್ನ ಸಂಕಲ್ಪ ವನ್ನು ನೆರವೇರಿಸುವಂತೆ ದಶರಥಮಹಾರಾಜುಗೆ ತಿಳಿಸಬೇಕು' ಎಂದು ಪ್ರ ರ್ಥನೆ ಮಾಡಿದನು. ಈ ಮಾತುಗಳನ್ನೆಲ್ಲ ದಶರಥನು ಕೇಳುತ್ತಿದ್ದನ, ಜನಕದ ಹಾರಾಜನ ಪ್ರಾರ್ಥನೆಯನ್ನು ವಿಶ್ವಾಮಿತ್ರರ ಮಃಖದಿಂದ ಕೇಳಿ, ಆ ನಲು ಜನ ಕನೈಯರನ್ನೂ, ತನ್ನ ಮಕ್ಕಳಿಗೆ ವಿವಾಹಮಾಡಿಕೊಳ್ಳಲು ಒಡಂಬಟ್ಟನು. ಮುಂದೆ ದಶರಥಮಹಾರಾಜನು ಜನಕನ ಪುರೋಹಿತರಾದ ಶತಾನಂದರನ್ನು ಕುರಿತು * ಸ್ವಾಮಿ, ಜಾನಕಿಯು ಅಯೋನಿಸಂಭವಳೆಂದು ಹೇಳಿದಿರಲ್ಲ, ಆ ವಿಚಾರ ವನ್ನು ನನಗೆ ತಿಳಿಸಬೇಕು,” ಎಂದು ಪ್ರಶ್ನೆ ಮಾಡಿದನು. ಆಗ ಅಹಲ್ಯಾಪುತ್ರರಾದ ಶತಾನಂದರು ದಶರಥನನ್ನು ಕುರಿತು-ಮಹಾ ರಾಜನೇ, ಕೇಳು, ಪೂರ್ವದಲ್ಲಿ ಪದ್ಮಾಕ್ಷನೆಂಬ ಶ್ರೇಷ್ಠನಾದ ಭೂಪತಿಯು ಇದ್ದನು. ಆತನು ಒಂದಾನೊಂದು ದಿವಸ ಮನಸ್ಸಿನಲ್ಲಿ ..ಸವ' ಪ್ರಸc ಜನರೂ ಲಕ್ಷ್ಮಿಯನ್ನು ಹೊಂದಬೇಕೆಂದು ಬಹಳ ಪ್ರಯಾಸಪಡುವರು. ಅಂಥ ಲಕ್ಷೆಯನ್ನು ಘೋರವಾದ ತಪಸ್ಸಿನಿಂದ ಸಂತೋಷಗೊಳಿಸಿ, ನನ್ನ ಮಗಳನ್ನಾಗಿ ಪಣಂಡಿಡರೆ, ಆ ಲೋಕಮಾತೆಯು ನನ್ನ ತೊಡೆಯ ಮೇಲೆ ಯಾವಾಗಲೂ ಭಾಲಲೀಲೆಗಳನ್ನಾಡುತ್ತಿರುವಳು.” ಎಂದು ಯೋಚಿಸಿ, ಕ್ರೂರವಾದ ತಪಸ್ಸನ್ನು ನಡೆಸಿದನು. ಅದರಿಂದ ಭಕ್ತವತ್ಸಲಳಿದ ಲಕ್ಷ್ಮಿಯು ಪ್ರಸನ್ನಳಾಗಿ, ಎಲೆ ರಾಜನೇ ನನ್ನನ್ನು ಕುರಿತು ನೀನು ಯಾಕೆ ಇಷ್ಟು ಕಠಿಣವಾದ ತಪಸ್ಸು ಮಾಡಿದೆ? ನಿನಗೆ ಬೇಕಾದ ಫಲವಾವುದು, ” ಎಂದು ಪ್ರಶ್ನೆ ಮಾಡಲು, ರಾಜನು, ಮಹಾ ದೇನೆ , ನೀನು ಮಳಾಗಬೇಕು ಎಂದು ಪ್ರಾರ್ಥಿಸಿದನು. ಆಗ 'ಕ್ಷಿ,
ಪುಟ:ಶ್ರೀ ಮದಾನಂದ ರಾಮಾಯಣ.djvu/೩೦
ಗೋಚರ