ಸರಕಾಂಡ, ns ಸಮಾರಂಭವನ್ನು ಪೂರ್ಣಮಾಡಿಸಿ, ಅನಂತರ ತಮ್ಮ ನಗರಗಳಿಗೆ ಪ್ರಯಾಣವಾ ಡಬೇಕು. ಈ ನನ್ನ ವಿಜ್ಞಾಪನೆಯನ್ನು ತಾವು ಉದಾಸ ಮಾಡಬಾರದು, ಮತ್ತು ಸ್ವಯಂವರದಲ್ಲಿ ನಮಗೆ ಅಪಚಯವಾಯಿತಂದು ಜಿನ್ನರಾಗಬಾರದು, ಜಯಣಸಜ ಯಗಳು ಯಾರಿಗೂ ಸ್ವತಂತ್ರವಲ್ಲ,” ಎಂದು ಪ್ರಾರ್ಥನೆ ಮಾಡಿದನು. ಆಗ ಸ ಮರಾಜರೂ ಜನಕರಾಜನ ಈ ಮಾತುಗಳನ್ನು ಕೇಳಿ, ತಮ್ಮ ಮನಸ್ಸಿನಲ್ಲಿ , ಈಗ ರಾಮಚಂದ್ರನೊಡನೆ ಯುದ್ಧ ಮಾಡಿದರೆ, ನಮಗೆ ಯಾರಿಗೂ ಜಯವಾಗಲಾ ಅದು ಪ್ರಾಣಹಾನಿಯದರೂ ಆಗಬಹುದು. ಆದಕಾರಣ, ಜನಕಭೂಪತಿಯ ವಿನಂತಿಯಂತ ವಿವಾಹಕಾಲದಲ್ಲಿ ಇಲ್ಲಿಯೇ ಇರಲು ಅಂಗೀಕರಿಸಿ, ಮುಂದೆ ಯೋ ಚನಮಾಡಿ ಕೆಲಸ ನಡಿಸತಕ್ಕದ್ದು' ಎಂದು ಯೋಚಿಸಿ, ವಿವಾಹಮನೋತ್ಸವಕ್ಕೆ ತಾವೆಲ್ಲರೂ ನಿಲ್ಲುವಂತ ನಂಬಿಗೆಯನ್ನಿತ್ತರು. ಆಗಿನ ಸಭೆಯು ಮುಗಿದನಂತರ ಸಮಸ್ಯರೂ ತಮ್ಮ ತಮ್ಮ ಬಿಡಾರಗಳಿಗೆ ತೆರಳಿದರು. ಯಾವ ದಿವಸ ಶ್ರೀ ರಾಮನು ಶಿವಧನುರ್ಭ೦ಗ ಮಾಡಿದನೋ, ಅದೇ ದಿವಸ ವೇ ವಿಶ್ವಾಮಿತ್ರರ ಅಪ್ಪಣೆಯಂತ ದಶರಥಮಹಾರಾಜನಿಗೆ ಈ ಮಂಗಳವಾರ್ತೆಯ ನ್ನು ತಿಳಿಸಿ, ವಿವಾಹ ಮುಹೂರ್ತಕ್ಕೆ ಸಪರಿವಾರಕ್ಕಾಗಿ ದಯಮಾಡಿಸಲು ಪತ್ರ ಬ ರೆದು ಜನಕಮಹಾರಾಜನು ತನ್ನ ಮಂತ್ರಿಗಳನ್ನು ಅಯೋಧ್ಯೆಗೆ ಕಳುಹಿಸಿದನು. ಆ ಮಂತ್ರಿಗಳು ರಾಜನ ಅಪ್ಪಣೆಯಂತ ಅಯೋಧ್ಯೆಗೆ ಹೋಗಿ ಸಮಸ್ತ ವ್ಯತ್ಯಾಸ * ವನ್ನೂ ತಿಳಿಸಿದರು. ಇಂಥಾ ಮಗನ ಪರಾಕ್ರಮನ್ನು ಕೇಳಿದ ದಶರಥನ ಆನಂದ ಕೈ ಸ್ಥಳವಿಲ್ಲದಂತಾಯಿತು. ಕುಲಗುರುಗಳಾದ ವಸಿಷ್ಠರ ಆಜ್ಞೆಯಂತೆ ಮರುದಿವಸ ಅಲ್ಲಿಂದ ಹೊರಡಲು ನಿಶ್ಚಯ ಮಾಡಿದನು. ಅನಂತರ ಆ ದಿವಸ ಅರುಣೋದಯ ಕೈ ಸರಿಯಾಗಿ ಪಟ್ಟದ ಮಹಿಷಿಯರು, ಮಕ್ಕಳು, ಸ್ನೇಹಿತರು, ಬಂಧುಗಳು, ಚ ತುರಂಗಸೇನೆಗಳು ಇವುಗಳಿಂದ ಕೂಡಿದವನಾಗಿ ದಶರಥನು ವಿದೇಹನಗರಕ್ಕೆ ಕ್ರ ಯಾಣ ಬೆಳೆಸಿದನು. ದಶರಥಮಹಾರಾಜನು ಪರಿವಾರಸಹಿತ ನಗರದ ಸಮೀಪ ಬಂದಿರುವನೆಂಬ ವರ್ತಮಾನವನ್ನು ಕೇಳಿ ಜನಕಮಹಾರಾಜನು ಬಹು ಸಂತೋಷ ದಿಂದ ರಾಜಮರ್ಯಾದೆಯಂತೆ ಇದಿರುಗೊಂಡು ಕರೆಯಲು ಪರಿವಾರ ಸಮೇತ ನಾಗಿ ಹೊರಟನು. ಜನಕಮಹಾರಾಜನ ಜೊತೆಗೆ, ರಾಮ, ಲಕ್ಷಣ, ವಿಶ . . ಮಿತ್ರ ಅವರೂ ಹೊರಟರು, , ದಶರಥಮಹಾರಾಜನನ್ನು ಕಂಡೊಡನೆ ವಿದೇಹಭೂಪತಿಯು ನಮಸ್ಕರಿಸಿ, ಕುಶಲಪ್ರಶ್ನೆಗನ್ನು ಮಾಡಿದನು. ಭರತ-ಶತ್ರುಷ್ಟರನ್ನು ನೋಡಿ ಆತನಿಗೆ ಆಶ್ಚ
ಪುಟ:ಶ್ರೀ ಮದಾನಂದ ರಾಮಾಯಣ.djvu/೨೯
ಗೋಚರ