ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

98 ಮಹಾಭಾರತ ಸಭಾವರ್ಪ] ಅನೇಕರಾಜರ ಜಯ ಮತ್ತು ಧನಸಂಗ್ರಹ ಆಳು ನಡೆದುದು ತೆಂಕಣವನೀ ಫಾಲರೀತನ ಬಿಸಿಗೀತನ ಧಾಲೆಗೀತನ ದೆಸೆಗೆ ದೆಸೆಗೆಟ್ಟುದು ದಿಗಂತದಲಿ | ಶೂರಸೇನನ ಸದೆದು ನೆನೆ ಭಂ ಡಾರವೆಲ್ಲವ ಕೊಂಡು ತೆಂಕಣ ವೀರಮರ ಗೆಲಿದು ಸರ್ವಸ್ಯಾಪಹಾರದಲಿ | ಧೂರಿಬಲನದ ದಂತವಕ್ಕನ ವಾರಣಾತ್ಮರಥಂಗಳನು ಕೊಂ ಡಾರುಭಟೆಯಲಿ ಮುಂದೆ ನಡೆದನು ತೆಂಕಮುಖವಾಗಿ ॥ ೨ ಖಳ ನಿಶಾಚರ 1 ಕೋಟಿಗಳನರೆ ಘಳಿಗೆಯೊಳಗಾಕ್ರಮಿಸಿದನು ಮಂ ಡಳಿಕರೂರುಗಳ ಬಿಟ್ಟೋಡಿದರು ಕೊಳ್ಳೆಗರ ಕಾಲ್ಗುಳಿಗೆ | ಹೊಳತಡಿಯ ಗಿರಿದುರ್ಗವಿಪಿನ ಸ್ಥಳದ ಧರಣಿಪರಿದಿರುವಂದ ಗ್ರಳಯ ಗಜರಥಹಯಸಹಿತ ತೆತ್ತರು ಸುವಸ್ತುಗಳ || ೩ ಬಂದು ಕುಂತೀಭೋಜ ಮೊಮ್ಮನ ಮಂದಿರದ ಸುಕ್ಷೇಮವಿಭವವ ನಂದು ಕೇಳಿಯೆ ಕೊಟ್ಟನನುಪಮಾರವಸ್ತುಗಳ | ಮುಂದೆ ಚರ್ಮತಿಯ ಜಂಭಕ ನಂದನನನಪ್ಪಳಿಸಿ ಗಜಹಯ ವೃಂದವನು ಕೊಂಡೊಲಿದು ಬಿಟ್ಟನವಂತಿದೇಶದಲಿ || ೪ ......... - - - - - - - - - - - - - - - - 1 ನಿಸಾದರ 2 ಬಳಿಕ ನನ್ನೆ ಯರಾಂಪರೇ ಚತುರಂಗಪದಹತಿಗೆ, ಚ.