ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೨೫ ಅಧ್ಯಾ. ೧.] ದಶಮಸ್ಕಂಧವು. ಚೆನ್ನಾಗಿ ಊರಿದಮೇಲಲ್ಲವೇ ಹಿಂದಿನ ಕಾಲನ್ನೆತ್ತುವನು? ಹಾಗೆಯೇ ಪಲ್ಲಕ್ಕಿಯ ಹುಳು (ಹುಲ್ಲಟ್ಟೆ) ವೆಂಬ ಜಂತುವೂಕೂಡ, ಸಂಚರಿಸುವಾಗ ತನಗೆ ಮುಂದೆ ಆಶ್ರಯವು ಸಿಕ್ಕಿದಮೇಲೆ, ಅದರಲ್ಲಿ ತನ್ನ ಮುಖಭಾಗವ ನ್ಯೂ ರಿಯೇ, ಹಿಂದಿನ ಪುಟ್ಟ ಭಾಗವನ್ನೆತ್ತುವುದು. ಇದರಂತೆಯೇ ಕರಗತಿ ಯಲ್ಲಿರುವ ಜೀವನೂ, ಹಿಂದಿನ ದೇಹವನ್ನು ಬಿಡುವಾಗ, ಮುಂದೆ ತನ್ನ ಕಲ್ಮಾನುಸಾರವಾದ ಹೊಸದೇಹವನ್ನು ಹಿಡಿದಮೇಲೆಯೇ ಪೂವ್ವದೇಹವನ್ನು ಬಿಡುವನು. ಆದರೆ ಮೇಲಿನ ಎರಡು ದೃಷ್ಟಾಂತಳಲ್ಲಿಯೂ ದೇಹಕ್ಕೆ ನಾಶವಿಲ್ಲ. ಆಯಾದೇಹದೊಡನೆಯೇ ಮುಂದಿನ ಆಶ್ರಯವು ಹಿಡಿಯಲ್ಪಡುವುದು. ಅದು ದರಿಂದ ಅದರಲ್ಲಿ ದೇಹನಾಶವಾಗುವುದೆಂಬ ಭಯಕ್ಕಾಗಲಿ, ದುಃಖಕ್ಕಾಗಲಿ ಅವಕಾಶವಿಲ್ಲ ಮರಣದಲ್ಲಿಯಾದರೋ ಜೀವನು ಮೊದಲಿನ ದೇಹವನ್ನು ಬಿಟ್ಟು ಹೋಗುವುದನ್ನು ಮಾತ್ರ ನಾವು ಕಾಣುವೆವೇ ಹೊರತು, ಮುಂದೆ ಅವನಿಗೆ ದೇಹಾಂತರವುಂಟಾಗುವುದೂ ನಮಗೆ ಕಾಣವುದಿಲ್ಲ. ಆದುದ ರಿಂದ ಇದರಲ್ಲಿ ದೇಹವು ನಷ್ಟವಾಗುವುದೆಂಬ ಭಯಕ್ಕೂ ದುಃಖಕ್ಕೂ ಕಾರಣವುಂಟಲ್ಲವೆ ?” ಎಂದು ನೀನು ಹೇಳಬಹುದು ಅದೂ ಯುಕ್ತವಲ್ಲ, ಸಂಸಾರಿಯು ಒಂದು ಮನೆಯಿಂದ ಇನ್ನೊಂದು ಮನೆಗೆ ಒಕ್ಕಲುಹೋಗುವಾಗ, ಮೊದಲು ತನ್ನ ಉಪಕರಣಗಳನ್ನು ಹೊಸಮನೆಗೆ ಸಾಗಿಸಿ, ಆಮೇಲೆ ತಾನು ಅದರಲ್ಲಿ ನೆಲೆಗೊಳ್ಳುವಂತೆ, ಜೀವನೂಕೂಡ, ಮೊದಲು ತನ್ನ ದೇಹೋಪಕರಣಗಳಾದ ಪ್ರಾ ಣೇಂದ್ರಿಯಾದಿಗಳನ್ನು ದೇಹಾಂತರಕ್ಕೆ ಸಾಗಿಸುವುದರಿಂದಾಗಲಿ, ಅಥವಾ ತನ್ನ ಧರ ಭೂತ ವಾದ ಜ್ಞಾನದಮೂಲಕವಾಗಿ ಅದರಲ್ಲಿ ನೆಲಸುವುದರಿಂದಾಗಲಿ, ಅಲ್ಲಿ ಮೊದಲು ಸೇರುವನೆಂದು ಗ್ರಾಹ್ಯವು, ಮತ್ತು ಇಲ್ಲಿ ಪುರುಷನು ಒಂದು ಪಾದದಿಂದ ನಡೆಯುತ್ತ ಮತ್ತೊಂದು ಪಾದದಿಂದ ನಿಂತಲ್ಲಿ ನಿಂತಹಾಗೆಯೇ ಹೋಗುವುದನ್ನು ದೃಷ್ಟಾಂತವಾಗಿ ಹೇಳಿರುವುದರಿಂದ, ಮನುಷ್ಯನು ದೇಹಸಂಬಂಧದಿಂದ ಜೀವಿಸಿದ್ದರೂ, ಮೃತಪ್ರಾ ಯನಾಗಿಯೇ ಜೀವಿಸುತ್ತಿರುವನೆಂದು ಭಾವಾ, ಒಂದು ಕಾಲಿಂದ ನಿಂತಿರುವುದು ಜೀವಿಸಿರುವುದಕ್ಕೂ, ಮತ್ತೊಂದು ಕಾಲನ್ನೆತ್ತಿಡುವದು ಮರಣಾಭಿಮುಖ್ಯಕ ಸಮಾನ ವೆಂದು ಗ್ರಾಹ್ಯವು. ಇವೆರಡೂ ಸಮಾನಕಾಲದಲ್ಲಿಯೇ ನಡೆಯುವುದರಿಂದ, ಪ್ರಾಣಿಗೆ ಜೀವಿತಮರಣಗಳೆರಡೂ ಸಮಕಾಲದಲ್ಲಿಯೇ ಜರುಗುವುವೆಂದೂ ಗ್ರಾಹವು. ...... ಗ - ೬ . = .


..... ..