ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೨೬ ಶ್ರೀಮದ್ಭಾಗವತವು [ಅಧ್ಯಾ. ೧, ಮನುಷ್ಯನು ಕನಸನ್ನು ಕಾಣುವಾಗ, ತನ್ನ ನಿಜವಾದ ದೇಹವು ಸ ಹಾಗೆ ಹಾಸಿಗೆಯಮೇಲೆ ಬಿದ್ದಿರುವಾಗಲೇ, ಕನಸಿನಲ್ಲಿ ತನಗೆ ಯಾವು ದೋ ಒಂದು ಹೊಸದೇಹವುಂಟಾದಂತೆ ಕಾಣುವನು. ಅದರಲ್ಲಿದ್ದಂತೆಯೇ ತನ್ನ ಮನಸ್ಸಿನ ಭಾವನೆಗೆ ತಕ್ಕಂತೆ ಪ್ರಪಂಚದಲ್ಲಿ ತಾನು ಕಂಡುಕೇಳಿದ ಮನೋರಥಗಳನ್ನೂ ಅನುಭವಿಸುವನು. ಒಮ್ಮೆ ಸಿಂಹಾಸನದಮೇಲೆ ಕುಳಿತಹಾಗೆ ಕಂಡು ಸಂತೋಷದಿಂದ ಹಿಗ್ಗು ವನು. ಮತ್ತೊಮ್ಮೆ ದೇಶ ಭ್ರಷ್ಟನಾಗಿ ಹೋಗುವಂತೆ ಕಾಣುವನು. ಮತ್ತೊಮ್ಮೆ ತಲೆಯನ್ನು ಕಡಿ ಸಿಕೊಳ್ಳುವಂತೆ ಕಂಡು ದುಃಖದಿಂದಲೂ ಭಯದಿಂದಲೂ ತಪಿಸುವನು. ಆಗ ಅವನಿಗೆ ಹಾಸಿಗೆಯ ಮೇಲೆ ಬಿದ್ದಿರುವ ತನ್ನ ದೇಹದ ಸ್ಮರಣೆಯೂ ಇ ರಲಾರದು. ಆ ದೇಹವು ಹೊಯಿತೆಂಬ ದುಃಖವೂ ತೋರದು. ಮಲಗುವು ದಕ್ಕೆ ಮೊದಲು, ಮುಂದೆ ಕನಸಿನಲ್ಲಿ ತನಗೆ ಯಾವ ದೇಹವುಂಟಾಗುವುದೆಂ ದೂ ತಿಳಿಯಲಾರದು. ಮಲಗುವುದಕ್ಕೆ ಹೋಗುವಾಗ ಅವನಿಗೆ ತನ್ನ ದೇ ಹವು ನಷ್ಟವಾಗುವುದೆಂಬ ಭಯವೂ ಹುಟ್ಟಲಾರದಲ್ಲವೆ? ಇದರಂತೆಯೇ ಮನುಷ್ಯನು ದೇಹಾಂತರಪ್ರಾಪ್ತಿಯನ್ನು ಕುರಿತು ಭಯಪಡಲೂ ಬಾರ ದು, ದುಟುಸಲೂ ಬಾರದು. ಮತ್ತು ಮನುಷ್ಯನು ತನ್ನ ಭಾವನಾನು ಸಾರವಾಗಿ ಸ್ವಲ್ಪ ವನ್ನು ಕಾಣುವಂತೆ, ಪೂರಕ ವಾಸನಾನುಗುಣವಾದ ವಿಕಾರಗಳಿಂದ, ಜೀವನು ಪ್ರಕೃತಿಪರಿಣಾಮರೂಪಗಳಾದ* ಶಬ್ದಾದಿವಿಷಯ ಗಳಲ್ಲಿ ಯಾವುದನ್ನು ಮನಸ್ಸಿನಲ್ಲಿ ಹೆಚ್ಚಾಗಿ ಸ್ಮರಿಸುತ್ತಿರುವನೋ, ಅದಕ್ಕೆ ತಕ್ಕ ದೇಹದಲ್ಲಿಯೇ ಪ್ರವೇಶಿಸಿ, ಅದರೊಡನೆ ಹುಟ್ಟುವನು. ಜೀವನಿಗೆ ಇದೇ ಉತ್ಪತಿಯೆನಿಸಿಕೊಳ್ಳುವುದು. ಮತ್ತು ಆಕಾಶದಲ್ಲಿ ಒಂದೇ ರೂಪ ದಿಂದ ಪ್ರಕಾಶಿಸುತ್ತಿರುವ ಸೂರೆಚಂದ್ರಾದಿತೇಜಸ್ಸುಗಳು, ನೀರಿನಲ್ಲಿ ಯಾಗಲಿ, ಕನ್ನಡಿಯಲ್ಲಿಯಾಗಲಿ, ಪ್ರತಿಫಲಿಸುವಾಗ, ವಾಯುವೇಗದಿಂ ದಾದ ಆ ಆಶ್ರಯವಸ್ತುಗಳ ಚಲನೆಗೆ ತಕ್ಕಂತೆ, ದೊಡ್ಡದಾಗಿಯೂ, ಜಿ ಕೈದಾಗಿಯೂ, ಇನ್ನೂ ನಾನಾವಿಧವಾಗಿಯೂ ಕಾಣುವುವಲ್ಲವೆ ? ಅದರಂ

  • ಇಲ್ಲಿ ಯಂಯಂವಾಪಿ ಸ್ಮರ್ರ ಭಾವಂ ತ್ಯಜತ್ಯನ್ತೇ ಕಳೇಬರಂ ತಂತಮೇವೆ ತಿಕಯ ಸದಾ ತದ್ಭಾವ ಭಾವಿತಃ,ಎಂಬ ಗೀತಾವಾಕ್ಯವು ಅನುಸಂಧಿಸಲ್ಪಡುವುದು.

- - - -