ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೨೭ 8 ಅಧ್ಯಾ. ೧.] ದಶಮಸ್ಕಂಧವು. ತೆಯೇ ಜೀವನೂಕೂಡ, ತನಗೆ ಸಹಜವಾಗಿ ಯಾವವಿಕಾರವೂ ಇಲ್ಲದ ಒಂದೇ ವಿಧವಾದ ಜ್ಞಾನಸ್ವರೂಪವುಳ್ಳವನಾಗಿದ್ದರೂ, ಶಬ್ದಾದಿ ವಿಷಯಗ ಇಲ್ಲಿ ತನಗಿರುವ ಆಸೆಗೆ ತಕ್ಕಂತೆ, ಪ್ರಕೃತಿಪರಿಣಾಮರೂಪವಾದ ಶರೀರದ ಲ್ಲಿ ಪ್ರವೇಶಿಸಿದಾಗ, ತಾನು ಮನುಷ್ಯನೆಂದೂ, ತಾನು ದೇವನೆಂದೂ ಭೇದ ಬುದ್ದಿಯನ್ನಾ ರೂಪಿಸಿಕೊಳ್ಳುವನು. ಜೀವನಿಗೆ ಎಂದಿದ್ದರೂ ಮರಣವಿಲ್ಲ. ವಸ್ತುಸ್ಥಿತಿಯು ಹೀಗಿರುವುದರಿಂದ, ತತ್ವಜ್ಞನಾದ ಪುರುಷನು, ತನಗೆ ನಿಜ ವಾದ ಕ್ಷೇಮವನ್ನು ಕೋರುವುದಾದರೆ, ಬೇರೆ ಯಾರಿಗೂ ಹಚಿಂತೆ ಯನ್ನು ಮಾಡಬಾರದು. ಮರಣಭಯದಿಂದ ಮತ್ತೊಬ್ಬರಿಗೆ ದ್ರೋಹವ ನ್ನೆಣಿಸುವವನು, ತನಗೆ ತಾನೇ ದ್ರೋಹವನ್ನೆಣಿಸಿ, ತನ್ನ ಮುಂದಿನ ಕ್ಷೇ ಮವನ್ನು ಕೆಡಿಸಿಕೊಂಡಂತಾಗುವುದೇ ಹೊರತು ಬೇರೆಯಲ್ಲ. ದ್ರೋಹ ಬುದ್ದಿಯುಳ್ಳವರಿಗೇ ಇತರರಿಂದ ಭಯವೇ ಹೊರತು, ಆ ಬುದ್ಧಿಯಿಲ್ಲದವ ನಿಗೆ ಯಾರಿಂದಲೂ ಭಯವಿಲ್ಲ. ಈ ತತ್ವವಿಚಾರವೂ ಹಾಗಿರಲಿ! ನೀನು ಲೋಕಮಯ್ಯಾದೆಯನ್ನಾ ದರೂ ಯೋಚಿಸಬೇಡವೆ? ಈಕೆಯು ನಿನಗೆ ಸಾ ಕ್ಷಾತ್ತಾಗಿ ಒಡಹುಟ್ಟಿದ ತಂಗಿ ! ನಿನಗೆ ಮಗಳಂತಿರುವಳು ! ಅಬಲೆಯಾದ ಹೆಂಗಸು ! ಇನ್ನೂ ಚಿಕ್ಕ ಹುಡುಗಿ : ದೈನ್ಯದಿಂದ ತತ್ತಳಿಸುವಳು ! ಮಂ ಗಳಸ್ವರೂಪಿಣಿಯಾದ ಇಂತಹ ಕನೈಯನ್ನು ಕೊಲ್ಲುವುದಕ್ಕೆ ಕೈಯೆತ್ತುವೆ ಯಲ್ಲಾ ! ಕುಮಾರಾ! ಇದು ನಿನಗೆ ಥರವಲ್ಲ ! ನೀನು ದೀನವಲನಲ್ಲ ವೆ ? ಬಿಟ್ಟುಬಿಡು! ” ಎಂದು ವಸುದೇವನು ನಾನಾವಿಧವಾದ ಸಾಮ ವಾಕ್ಯಗಳಿಂದ ಕಂಸನನ್ನು ನಿವಾರಿಸುತ್ತಿದ್ದನು. ಎಷ್ಟು ಹೇಳಿದರೇನು ? ಅ ಕಂಸನು ಮನುಷ್ಯರನ್ನು ನುಂಗತಕ್ಕ ರಾಕ್ಷಸರಂತೆ ಕೂರಸ್ವಭಾವವುಳ್ಳ ವನಾದುದರಿಂದ, ಎತ್ತಿದ ಕತ್ತಿಯನ್ನು ಕೆಳಕ್ಕಿಳಿಸದೆ, ಒಂದೇ ಹಟದಿಂದ ನಿಂತಿದ್ದನು. ಆಗ ವಸುದೇವನು ಕಂಸನ ಮೂರ್ಖಸ್ವಭಾವವನ್ನೂ, ಕಾ ರವನ್ನೂ ಯಾವವಿಥದಿಂದಲೂ ಬಿಡಿಸಲಾರದೆ, ಪ್ರಕೃತದಲ್ಲಿ ಹೇಗಾದ ರೂ ಮಾಡಿ ಆ ಗಂಡವನ್ನು ತಪ್ಪಿಸಿಕೊಳ್ಳಬೇಕೆಂದು ನಿಶ್ಚಯಿಸಿ, ತನ್ನಲ್ಲಿ ತಾನು ಹೀಗೆಂದು ಆಲೋಚಿಸುವನು. ಲೋಕದಲ್ಲಿ ಬುದ್ಧಿವಂತನಾದ ವನು ಎಂತಹ ಮಕಾವಿಪತ್ತು ಬಂದರೂ, ಧೈಯ್ಯಗೆಡದೆ, ತನ್ನಿಂದ ಸಾಧ್ಯವಾ