ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೨೮ ಶ್ರೀಮದ್ಭಾಗವತವು [ಅಧ್ಯಾ, ೧. ದಷ್ಟು ಬುದ್ಧಿಚಾತುರವನ್ನೂ, ದೇಹಶಕ್ತಿಯನ್ನೂ ಉಪಯೋಗಿಸಿ, ತಾತ್ಸಾ ಲಿಕವಾದ ಅಪಮೃತ್ಯುವನ್ನು ತಪ್ಪಿಸಿಕೊಳ್ಳುವುದಕ್ಕೆ ಯತ್ನಿಸಬೇಕು. ಅದ ಕ್ಕೂ ಕೈಮೀರಿಹೋದರೆ ಆಗ ಅವನ ತಪ್ಪೇನೂ ಇರುವುದಿಲ್ಲ. ಅದಕ್ಕಾಗಿ ಈಗ ನಾನು, ಯಾವುದಾದರೂ ಉಪಾಯದಿಂದ ಇವಳ ವಿಪತ್ತನ್ನು ತಪ್ಪಿಸ ದೆತೀರದು! ಇವಳ ಗರ್ಭದಲ್ಲಿ ಹುಟ್ಟಿದಮಕ್ಕಳಿಂದ ತನಗೆ ಮರಣವಾಗುವುದೆಂ ದಲ್ಲವೇ ಇವನು ಭಯಪಡುವನು!ಆದುದರಿಂದ ಇವಳಿಗೆ ಹುಟ್ಟುವ ಮಕ್ಕಳೆಲ್ಲರ ನ್ಯೂ ಒಪ್ಪಿಸಿಬಿಡುವೆನೆಂದು ಹೇಳಿ,ಜೀನೆಯಾದ ಈ ಬಾಲೆಯನ್ನು ಕೊಲೆಯಿಂದ ತಪ್ಪಿಸುವೆನು. “ಬೀಸುವ ದೊಣ್ಣೆಗೆ ತಲೆಯನ್ನು ತಪ್ಪಿಸಿಕೊಂಡರೆ, ಸಾವಿರವ ರ್ಷದ ಆಯುಸ್ಸೆಂದು” ಹೇಳುವ ಸಾಮತಿಯಂತೆ, ಈಗಿನ ಗಂಡವನ್ನು ತಪ್ಪಿಸಿ ಕೊಂಡರೆ ಮುಂದಿನ ಸಂಗತಿಯನ್ನು ನೋಡಿಕೊಳ್ಳಬಹುದು. ಆದರೆ « ಹೆತ್ತ ಮಕ್ಕಳನ್ನು ಕೈಯಾರೆ ತಂದು ಕಟುಕನ ಕೈಗೆ ಕೊಡಬಹುದೆ?”ಎಂದರೆ ಈಗ ನಾನು ಅದನ್ನು ಬಾಯಿಂದ ಹೇಳಿದಮಾತ್ರಕ್ಕೆ ದೋಷವೇನೂ ತೋರ ಲಿಲ್ಲ. ಮೊದಲು ನನಗೆ ಮಕ್ಕಳಾಗವುವೆಂಬ ನಿಶ್ಚಯವೇನು?ಒಂದುವೇಳೆ ಮಕ್ಕ ಳಾದರೂ, ಅವು ಹುಟ್ಟುವವರೆಗೂ ಈ ದುರಾತ್ಮನು ಬದುಕಿರುವನೆಂಬ ಶಿಶ್ನ ಯವೇನು? ನನಗೆ ಮಕ್ಕಳೇ ಆಗದಿದ್ದರೂ ಇರಬಹುದು. ಅದಕ್ಕೆ ಮೊದಲೇ ಈತನು ಸತ್ತರೂ ಸಾಯಬಹುದು. ಇವೆರಡೂ ನಡೆದಾಗಲಲ್ಲವೇ ನಾ ನು ಆ ಮಕ್ಕಳನ್ನು ಇವನ ಕೈಗೆ ಒಪ್ಪಿಸಬೇಕು ! ಇವೆರಡೂ ನಿಶ್ಚಯವಿಲ್ಲ. ಈಗ ನಾನು ಪ್ರತಿಜ್ಞೆ ಮಾಡಿ ಕೊಟ್ಟ ಮಾತ್ರಕ್ಕೆ ಅದರಿಂದ ದೋಷವೇನೂ ತೋರಲಿಲ್ಲ! ಇಷ್ಟೆಅಲ್ಲದೆ ಇವೆಲ್ಲವೂ ಬೇರಿವಿಧವಾಗಿ ತಿರುಗಿ, ನನ್ನ ಮಕ್ಕಳೇ ಈ ಕಂಸನಿಗೆ ಮೃತ್ಯುವಾದರೂ ಆಗಬಹುದು. ಆದರೆ” ಅಶರೀರವಾಣಿಯು ಈಶ್ವರವಾಕ್ಷವೇ ಆಗಿರುವಾಗ, ಅದು ಬೇರೆವಿಧವಾಗಿ ಮಾರುವುದಂಟೆ ? ಎಂದರೆ, ಏಕಾಗಬಾರದು? ಈಶ್ವರೇಜ್ಜೆಯನ್ನು ಯಾರು ಬಲ್ಲರು ? ಅವನ ಸಂಕಲ್ಪವನ್ನು ಬದಲಾಯಿಸುವುದಕ್ಕೆ ಬೇರೊಬ್ಬರಿಗೆ ಸಾಧ್ಯವಿಲ್ಲದಿದ್ದರೂ, ಆತನು ಸತ್ವಸ್ವತಂತ್ರನಾದುದರಿಂದ, ತನ್ನ ಸಂಕಲ್ಪವನ್ನು ತಾನೇ ಬೇರೆ ವಿಧವಾಗಿ ತಿರುಗಿಸಬಹುದು! ಆಲ್ಪಾಯುಸ್ಸಿನಿಂದ ಹುಟ್ಟಿದ ಮಾರ್ಕಂಡೇ ಯ ಸತ್ಯವಂತರೇ ಮೊದಲಾದವರು, ಚಿರಜೀವಿಗಳಾಗಿ ಬದುಕಿ ಬರಲಿಲ್ಲವೆ?