ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೨೯ ಅಧ್ಯಾ. ೧) ದಶಮಸ್ಕಂಧನು. ತಮಗೆ ಎಂದಿಗೂ, ಯಾವ ವಿಧದಿಂದಲೂ ಸಾವಿಲ್ಲವೆಂಬ ನಿಶ್ಚಯದಿಂ ದಿದ್ದ ರಾವಣ, ಹಿರಣ್ಯಕಶಿಪು ಮುಂತಾದವರು, ಮಧ್ಯಕಾಲದಲ್ಲಿಯೇ ಮೃತಿ ಹೊಂದಲಿಲ್ಲವೆ ? ಅದರಂತೆಯೇ ಭಗವತ್ಸಂಕಲ್ಪವು ಅನುಕೂಲವಾದರೆ ಮೇಲೆಬಿದ್ದ ಮೃತ್ಯುವೂ ಹಿಂತಿರುಗಿ ಹೋಗಬಹುದು!ಅದು ಪ್ರತಿಕೂಲವಾ ದರೆ ಹಿಂತಿರುಗಿಹೋದ ಮೃತ್ಯುವೂ ಮೇಲೆ ಬಿಳಬಹುದು. ಅಥವಾ ದೈ ವಸಂಕಲ್ಪದಂತೆಯೇ ಎಲ್ಲವೂ ನಡೆಯುತ್ತಬರುವುದಾದರೆ ನಾನುಪ್ರತಿಜ್ಞೆ ಮಾಡಿದರೂ ಒಂದೇ ! ಬಿಟ್ಟರೂ ಒಂದೇ ! ಏಕೆಂದರೆ, ಅವರವರ ಕರಾನುಸಾರವಾಗಿ ಅವರವರಿಗೆ ಮೃತ್ಯುವುಂಟಾಗಬೇಕೇ ಹೊರತು, ನನ್ನ ಪ್ರತಿಜ್ಞೆಯು ಅವರ ಮರಣಕ್ಕೆ ಕಾರಣವಾಗಲಾರದು. ನಮ್ಮಂತವರ ಪ್ರತಿಜ್ಞೆಯಿಂದ ದೈವಸಂಕಲ್ಪವು ವ್ಯತ್ಯಸ್ತವಾಗುವದೆ ? ಎಂದಿಗೂ ಇಲ್ಲ! ಅಥವಾ ಈಗ ನನ್ನ ಬಾಯಿಂದ ಹೊರಡತಕ್ಕ ಮಾತು, ದೈವಸಂಕಲ್ಪಾನು ಸಾರವಾಗಿಯೇ ಇದ್ದರೂ ಇರಬಹುದು ವನದಲ್ಲಿ ಕಾಡುಗಿಚ್ಚು ಹತ್ತಿಕೊ ಳ್ಳುವುದಕ್ಕೂ, ನಂದಿಹೋಗುವುದಕ್ಕೂ ಅದೃಷ್ಟವುಹೊರತು ಬೇರೆ ಕಾರಣವು ಹೇಗೆ ತೋರುವುದಿಲ್ಲವೋ, ಹಾಗೆಯೇ ಪ್ರಾಣಿಗಳಿಗೆ ಶರೀರದೊ ಡನೆ ಸಂಯೋಗವಿಯೋಗಗಳಿಗೆ ಅವರವರ ಕಮ್ಮ ವುಹೊತು ಬೇರೆ ಕಾರ ಣವುಂಟೆಂದು ಊಹಿಸುವುದಕ್ಕೂ ಅವಕಾಶವಿಲ್ಲ” ಎಂದಿವು ಮೊದಲಾಗಿ ವಸು ದೇವನು ತನ್ನ ಬುಯು ಪ್ರಸರಿಸುವವರೆಗೂ ತನ್ನಲ್ಲಿ ತಾನೇ ವಿಮರ್ಶಿಸಿ, ಕೊನೆಗೆ ಪಾಪಿಯಾದ ಆ ಕಂಸನ ಮನಸ್ಸಿಗೆ ಹಿತವಾಗುವಂತೆ ತನ್ನ ಅಭಿ ಪ್ರಾಯವನ್ನು ತಿಳಿಸಲಾರಂಭಿಸಿದನು ಆಗ ವಸುದೇವನು ತನ್ನ ಮನಸ್ಸಿ ನಲ್ಲಿ ಅಪಾರವಾದ ದುಃಖವಿದ್ದರೂ,ಅದನ್ನು ಹೊರಕ್ಕೆ ಕಾಣಿಸದೆ, ಪ್ರಯತ್ನ ಪೂರೈಕವಾಗಿ ಮುಖದಲ್ಲಿ ಉಲ್ಲಾಸವನ್ನು ತೋರಿಸುತ್ತ, ದುರಾತ್ಮನಾದ ಆ ಕಂಸನನ್ನು ಬಹಳವಾಗಿ ಗೌರವಿಸಿ, ಮಂದಹಾಸದೊಡನೆ ಅವನನ್ನು ಕುರಿತು ಹೀಗೆಂದು ಹೇಳುವನು ««ಓ ಸೌಮ್ಯಾ! ಓ ಕಂಸರಾಜೇಂದ್ರಾ ! ಇದುವರೆಗೆ ನಾನು ಯೋ ಚಿಸಿ ನೋಡಿದುದರಲ್ಲಿ, ಈಗ ನೀನು ನಿನ್ನ ಕ್ಷೇಮಕ್ಕಾಗಿ ಯತ್ನಿ ಸುವುದೇನೋ ನನಗೂ ಯುಕ್ತವಾಗಿಯೇ ತೋರಿರುವುದು. ಆದರೆ, ನೀನು ಈ ವಿಚಾರದಲ್ಲಿ 109 B