ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಶ್ರೀಮದ್ಭಾಗವತವು [ಅಧ್ಯಾ ೧, ಡನೆಯೇ ಹಿಂಬಾಲಿಸಿಬರುವುದು. ಭೂಮಿಯಲ್ಲಿ ಹುಟ್ಟಿದಮೇಲೆ ಯಾವ ಪ್ರಾ ಣಿಗಾದರೂ, ಈಗಲೋ, ನಾಳೆಯೋ, ಕೊನೆಗೆ ನೂರು ವರ್ಷಗಳಮೇಲೆ ಯೋ ಮೃತ್ಯುವೆಂಬುದು ಸಿದ್ದವು. ಅದನ್ನು ತಪ್ಪಿಸಿಕೊಳ್ಳಬೇಕೆಂ ದರೆ ಯಾರಿಂದ ಸಾಧ್ಯವು? ಆದರೆ «ನೂರಾರುವರ್ಷಗಳು ಸುಖವಾಗಿ ಬದುಕಿದಮೇಲೆ, ಜರೆಯಿಂದ ಜೀರ್ಣವಾದ ಈ ದೇಹವು ಹೋದರೂ ಹೋಗಲಿ! ಈ ನಡುವೆ ಅದಕ್ಕೆ ಬರಬಹುದಾದ ಭಯವನ್ನು ತಪ್ಪಿಸಬೇ ಕಲ್ಲವೆ ?” ಎಂದು ಹೇಳುವೆಯಾ ? ಅದೂ ಯುಕ್ತವಲ್ಲ ! ಲೋಕ ದಲ್ಲಿ ಪ್ರಾಣಿಗಳು ಮರಣಕ್ಕಾಗಿ ಭಯಪಡಬೇಕಾದುದೇ ಇಲ್ಲ. ಹಿಂದಿನ ದೇಹವನ್ನು ಬಿಡುವುದೇ ಮರಣವೆನಿಸುವುದಲ್ಲದೆ, ಜೀವನಿಗೆ ಎಂದಿದ್ದರೂ ಸಾವಿಲ್ಲ. ಒಂದು ದೇಹವು ನಷ್ಟವಾಗುವ ಸಂದರ್ಭವು ಬಂದೊಡನೆ, ಆ ದೇ ಹದೊಳಗಿನ ಜೀವನು, ತನ್ನ ಪೂರೈಕರಾನುಸಾರವಾಗಿ ಬೇರೊಂದು ದೇಹ ವನ್ನು ಹಿಡಿದಮೇಲೆಯೇ ಹಿಂದಿನ ದೇಹವನ್ನು ಬಿಡುವನು. ಆದುದರಿಂದ ಒಂದು ದೇಹವು ಹೋದರೂ, ಆ ಜೀವಕ್ಕೆ ಮುಂದೆ ಬೇರೊಂದು ದೇಹವು ಸ್ವತಸ್ಸಿದ್ದವಾಗಿ ಲಭಿಸುವುದು ! ಇದರಲ್ಲಿದ್ದರೇನು ? ಅದರಲ್ಲಿದ್ದರೇನು ? ಮುಂದೆ ಇದಕ್ಕಿಂತಲೂ ಉತ್ತಮವಾದ ದೇಹವನ್ನೇ ಹೊಂದಿದರೂ ಹೋಂ ದಬಹುದಲ್ಲವೆ! ಹೇಗಿದ್ದರೂ ಪ್ರಾಣಿಗಳು!ಮುಂದೆ ಬರಬಹುದಾದ ಮರಣವ ನ್ನು ತಪ್ಪಿಸಿಕೊಳ್ಳಲಾರವು ! ಹಾಗೆ ಸಾಯುವುದರೊಳಗಾಗಿ, ಸತ್ಕರಗ ಳನ್ನು ನಡೆಸಿ, ಮುಂದೆ.ಇದಕ್ಕಿಂತಲೂ ಉತ್ತಮವಾದ ಜನ್ಮವನ್ನು ಪಡೆಯು ವುದಕ್ಕೆ ಯತ್ನಿ ಸುವವನಲ್ಲವೇ ಬುದ್ದಿಶಾಲಿಯು! ಇದೊಂದನ್ನೂ ಯೋಚಿ ಸದೆ ಸೀನು, ಈಗ ನಿನ್ನ ತಂಗಿಯನ್ನು ಕೊಲ್ಲುವುದರಿಂದ, ಮುಂದೆ ಪರಮನೀಚ ಜನ್ಮವನ್ನು ಹೊಂದುವುದಕ್ಕೆ ಯತ್ನಿ ಸುವುದಕ್ಕಿಂತಲೂ! ಮುಂದೆ ಉತ ಮಜನ್ಮವನ್ನು ಹೊಂದುವುದಕ್ಕೆ ತಕ್ಕಂತೆ ಸತ್ಕಾರಗಳನ್ನು ನಡೆಸಬೇಡವೆ?ಮ ರಣವೆಂಬುದು ದೇಹಾಂತರಸಂಬಂಧವಲ್ಲದೆ ಬೇರೆಯಲ್ಲ. ಅದನ್ನು ತಪ್ಪಿಸಿಕೊ ಳ್ಳುವುದು ಯಾರಿಂದಲೂ ಸಾಧ್ಯವಲ್ಲ. ಆದುದರಿಂದ ಅದಕ್ಕಾಗಿ ಹೆದರ ಬಾರದು, * ಮನುಷ್ಯನು ನಡೆಯುವಾಗ, ಮುಂದಿನ ಹಜ್ಜೆಯನ್ನು ನೆಲದಲ್ಲಿ

  • ಇಲ್ಲಿ ಜೀವನು ಮೊದಲಿನ ದೇಹದಲ್ಲಿದ್ದಂತೆಯೇ ಮತ್ತೊಂದು ದೇಹವನ್ನು ಹಿಡಿಯವನೆಂದು ಶಂಕಿಸಬಾರದು. ಜೀವನು ಅಣುವಾದುದರಿಂದ ಅದು ಸಾಧ್ಯವಲ್ಲ.

- - - -