೧೩೨ ಶ್ರೀಮದ್ಭಾಗವತವು *[ಅಧ್ಯಾ. ೧. ಜೋಕೆ! ” ಎಂದು ಹೇಳಿ ಹೊರಟುಹೋದನು. ಕರ್ಣಶೂಲಪ್ಪಾಯವಾ ದ ಈ ವಾಕ್ಯಗಳು ಕಿವಿಗೆ ಬಿದ್ದೊಡನೆ, ಕಂಸನಿಗೆ ಮೊದಲು ಸ್ವಲ್ಪಮಟ್ಟಿ, ಗೆ ಶಾಂತವಾಗಿದ್ದ ಕೋಪಾಗ್ನಿ ಯು ತಿರುಗಿ ಉರಿಯತೊಡಗಿತು. ಆ ಕ್ಷಣ ಣವೇ ಕಂಸನು ದೇವಕೀವಸುದೇವರಿಬ್ಬರನ್ನೂ ಹಿಡಿದು ತರಿಸಿ, ಅವರ ಕೈಕಾಲುಗಳಿಗೆ ಸಂಕೋಲೆಯನ್ನು ಬಿಗಿದು ಸೆರೆಯಲ್ಲಿರಿಸಿದನು. ತನ್ನನ್ನು ಕೊಲ್ಲತಕ್ಕ ಶಿಶುವು, ಯಾವಾಗ, ಯಾವರೂಪದಿಂದ ಹುಟ್ಟುವ ನೋ ಎಂಬ ಭಯದಿಂದಲೂ ಅವನಲ್ಲಿ ತನಗೆ ಜನ್ಮಸಿದ್ಧವಾದ ದ್ವೇಷ ದಿಂದಲೂ ಕುದಿಯತ್ತ, ಆ ದೇವಕಿಯ ಗರ್ಭದಲ್ಲಿ ಹುಟ್ಟಿದ ಒಂದೊಂ ದು ಶಿಶುವನ್ನೂ ಆಗಾಗಲೇ ಕೊಲ್ಲುತ್ತಬಂದನು. ಈ ವಿಧವಾಗಿ ಆ ದೇವ ಕಿಯಲ್ಲಿ ಮೊದಲು ಹುಟ್ಟಿದ ಆರುಮಕ್ಕಳೂ ಕಂಸನಿಂದ ಸಂಕೃತವಾದು ವು. ಓ ಪರೀಕ್ಷಿದ್ರಾಜನೇ ! ಭೂಮಿಯಲ್ಲಿ ದುಷ್ಟರಾಜರು, ಸ್ವಲ್ಪ ಯೋಜನಾರ್ಧವಾಗಿ, ಹೆತ್ತ ತಾಯ್ತಂದೆಗಳನ್ನಾಗಲಿ, ಒಡಹುಟ್ಟಿದ ಆ ಣ್ಣತಮ್ಮಂದಿರನ್ನಾಗಲಿ, ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನಾಗಲಿ, ಇಷ್ಟ ಮಿತ್ರರನ್ನಾಗಲಿ, ಎಳಮಕ್ಕಳನ್ನಾಗಲಿ, ಕೊಲ್ಲುವುದಕ್ಕೆ ಹಿಂಜರಿಯುವು ದಿಲ್ಲ! ಇನ್ನು ಕೇವಲರಾಕ್ಷಸಾಂಶದಿಂದಲೇ ಹುಟ್ಟಿದ ಈ ಕಂಸನ ಕಾ ರವನ್ನು ಕೇಳಬೇಕೆ? ಆ ಕಂಸನು, ತಾನು ಪೂರೈಜನ್ಮದಲ್ಲಿ ಕಾಲನೇಮಿ ಯೆಂಬ ರಾಕ್ಷಸನಾಗಿದ್ದು, ವಿಷ್ಣುವಿನಿಂದ ಹತನಾದುದನ್ನೂ, ಈ ಜನ್ಮ ದಲ್ಲಿಯೂ ಆ ವಿಷ್ಣುವೇ ಯಾದವಕುಲದಲ್ಲಿ ತನಗೆ ಮೃತ್ಯುವಾಗಿ ಹುಟ್ಟು ವನೆಂಬುದನ್ನೂ, ನಾರದನ ಮುಖದಿಂದ ಕೇಳಿದಮೇಲೆ, ಅವನಿಗೆ ಯಾದ ವಕುಲದಲ್ಲಿ ಪೂರೈವೈರವು ಬೆಳೆದುಹೋಯಿತು. ಯಾದವರಿಗೂ, ಭೋಜರಿಗೂ ಅಂಧಕರಿಗೂ ಮುಖ್ಯಾಧಿಪತಿಯೆನಿಸಿಕೊಂಡಿದ್ದ ತನ್ನ ತಂ ದೆಯಾದ ಉಗ್ರಸೇನದಲ್ಲಿಯೇ ಅವನಿಗೆ ನಂಬಿಕೆಯು ತಪ್ಪಿಹೋಯಿತು, ಒಡನೆಯೇ ಆತನು ತನ್ನ ತಂದೆಯನ್ನೂ ನಿಗ್ರಹಿಸಿ,ಶೂರಸೇನದೇಶವೆಲ್ಲವನ್ನೂ ತನ್ನ ಕೈವಶಮಾಡಿಕೊಂಡು, ತಾನೇ ರಾಜ್ಯವನ್ನು ಪಾಲಿಸುತ್ತಿದ್ದನು. ಇದು ಮೊದಲನೆಯ ಅಧ್ಯಾಯವು.
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೨
ಗೋಚರ