ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

C ಅಧ್ಯಾ, ೨.] ದಶಮಸ್ಕಂಧವು. ( ದೇವಕಿಯ ಎಂಟನೆಯ ಗರ್ಭದಲ್ಲಿ ಭಗವಂತನು ನಿ) ಜಾಂಶದಿಂದ ಪ್ರವೇಶಿಸಿದುದು, ಗರ್ಭಸ್ಥನಾದ 5 (ಷ್ಣುವನ್ನು ಬ್ರಹ್ಮಾದಿದೇವತೆಗಳು ಸ್ತುತಿಸಿದುದು.) , ಓ ರಾಜೇಂದ್ರಾ! ಹೀಗೆ ಕಂಸನು ನಿರಂಕುಶವಾದ ಬಲದಿಂದ ರಾ ಜ್ಯವನ್ನು ನಡೆಸುತ್ತಿರುವಾಗ, ಅವನಿಗೆ ತಕ್ಕಂತೆ ರಾಕ್ಷಸಾಂಶದಿಂದ ಹು ಟಿದ ಪ್ರಲಂಬ, ಬಕ, ಚಾಣೂರ, ತೃಣಾವರ್ತ, ಗರ್ದಭ, ಮುಷಿಕ, ಅರಿಷ್ಟ, ದ್ವಿವಿದ, ಕೇತಿ, ಧೇನುಕ, ಮೊದಲಾದವರೂ, ಪೂತನೆಯೆಂಬವ ಭೂ, ಬಾಣ, ನರಕ, ಮೊದಲಾದ ಆಸುರಪ್ರಕೃತಿಯುಳ್ಳ ರಾಜರೂ, ಆ ಕಂಸನಿಗೆ ಸಹಾಯಕರಾಗಿ, ಅವನನ್ನ ನುವರ್ತಿಸುತಿದ್ದರು. ಮಹಾಬಲಾಡ್ಯ ನಾದ ಜರಾಸಂಧನೂ ಕಂಸನಿಗೆ ಬೆಂಬಲವಾಗಿದ್ದನು. ಇವರೆಲ್ಲರೊಡನೆ ಕಂಸನು ಉನ್ಮಾರ್ಗಪ್ರವರ್ತಕನಾಗಿ, ಆಗಾಗ ಯಾದವರೊಡನೆ ಕಲಹವನ್ನು ತೆಗೆದು, ಅವರನ್ನು ನಾನಾವಿಧದಿಂದ ಹಿಂಸಿಸುತ್ತಿದ್ದನು. ಇವ ನ ಬಾಧೆಯನ್ನು ತಡೆಯಲಾರದೆ ಅನೇಕಯಾದವರು ದೇಶವನ್ನು ಬಿಟ್ಟು, ಕು ರು, ಪಾಂಚಾಲ, ಕೇಕಯ, ಸಾಲ್ಯ, ವಿದರ್ಭ, ನಿಷಧ, ಮಗಧ, ಕೋಸಲ, ಮೊದಲಾದ ಬೇರೆಬೇರೆ ದೇಶಗಳಿಗೆ ಓಡಿಹೋಗಿ, ಅಲ್ಲಲ್ಲಿಯೇ ನೆಲೆಯಾಗಿ ನಿಂ ತರು. ಕೆಲವರು ಬೇರೆ ಮಾರ್ಗವನ್ನು ಕಾಣದೆ, ಆ ಕಂಸನಲ್ಲಿಯೇ ಶರಣಾಗ ತರಾಗಿ ಅವನನ್ನ ನುವರ್ತಿಸಿ ಸೇವಿಸುತಿದ್ದರು. ಇಷ್ಟರಲ್ಲಿ ದೇವಕಿಗೆ ಏಳಗೆ ನೆಯಗರ್ಭವು ಬೆಳೆಯಲಾರಂಭಿಸಿತು, ಓ ರಾಜೇಂದ್ರಾ ! ಈ ಏಳನೆಯ ಗರ್ಭವೂ ಆ ಭಗವಂತನ ಅಂಶವೆಂದೇ ತಿಳಿ ! ಈ ಅಂಶವನ್ನೆ (ಆದಿಶೇಷ ನೆಂದು ಕರೆಯುವರು. ಈ ಗರ್ಭವು ಬೆಳೆಯುತ್ತ ಬಂದಹಾಗೆಲ್ಲಾ, ದೇವಕಿಗೆ ಮನಸ್ಸಿನಲ್ಲಿ ಪ್ರತ್ಯೋತ್ಸವವಾಗುವುದೆಂಬ ಹರ್ಷವೂ, ಕಂಸನಿಂದ ಅದಕ್ಕುಂ ಟಾಗುವ ಭಯವನ್ನು ಕುರಿತು ದುಃಖವೂ ಹೆಚ್ಚುತ್ತ ಬಂದಿತು. ಇಷ್ಟರಲ್ಲಿ ವಿಶ್ವಾತ್ಮಕನಾದ ಶ್ರೀಹರಿಯು, ಯಾದವರಿಗೆ ಕಂಸನಿಂದುಂಟಾದ ಭಯ ವನ್ನು ನೀಗಿಸುವುದಕ್ಕಾಗಿ ತನ್ನ ಯೋಗಮಾಯೆಯನ್ನು ನೋಡಿ ಹೀ ಗೆಂದು ನಿಯಮಿಸುವನು. (ಎಲೆ ಭದ್ರೆ! ಈಗಲೇ ನೀನು ಗೋಪಾಲಕ ರಿಂದಲೂ, ಗೋಸಮೂಹಗಳಿಂದಲೂ, ಅಲಂಕೃತವಾದ ಗೋಕುಲಕ್ಕೆ