ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಅಧ್ಯಾ, ೨. ೧೭೪ ಶ್ರೀಮದ್ಭಾಗವತವು ಹೋಗು! ವಸುದೇವನ ಪತ್ನಿ ಯಾದ ರೋಹಿಣಿಯು ಈಗ ನಂದಗೋ ಕುಲದಲ್ಲಿರುವಳು. ಇವಳಂತೆಯೇ ವಸುದೇವನ ಇನ್ನೂ ಕೆಲವುಮಂದಿ ಪ ತ್ರಿಯರೂ, ಕಂಸನ ಭಯಕ್ಕಾಗಿ ಅಲ್ಲಲ್ಲಿನ ಬೆಟ್ಟದ ಗವಿಗಳಲ್ಲಿ ಅಡಗಿಕೊಂಡಿ ರುವರು. ಈಗ ನನ್ನ ಅಂಶಭೂತನಾದ ಆದಿಶೇಷನು, ಕಂಸನ ಸೆರೆಯಲ್ಲಿ ಸಿಕ್ಕಿಬಿದ್ದಿರುವ ದೇವಕಿಯ ಗರ್ಭದಲ್ಲಿ ಬೆಳೆಯುತ್ತಿರುವನು. ಆಶಿಶುವು ಪ್ರಸ ವವಾಗುವುದಕ್ಕೆ ಮೊದಲೇ ಸೀನು ಆ ಗರ್ಭಪಿಂಡವನ್ನು ಸಾಗಿಸಿ, ನಂದ ಗೋಕುಲದಲ್ಲಿರುವ ರೋಹಿಣಿಯ ಗರ್ಭದಲ್ಲಿಡು! ಆಮೇಲೆ ನಾನೇ ನನ್ನ ಪೂರ್ಣೇಶದಿಂದ ಆ ದೇವಕಿಯ ಗರ್ಭದಲ್ಲಿ ಪ್ರವೇಶಿಸಿ, ಅವಳಿಗೆ ಮ ಗನಾಗಿ ಹುಟ್ಟುವೆನು. ಇಷ್ಟರೊಳಗಾಗಿ ನೀನೂ ನಂದಗೋಪನ ಹೆಂಡತಿ ಯಾದ ಯಶೋದೆಯ ಗರ್ಭದಲ್ಲಿ ಸೇರಿ, ನನ್ನ ಜನನಕಾಲಕ್ಕೆ ಸರಿಯಾಗಿ ಅವಳ ಗರ್ಭದಿಂದ ಹೆಣ್ಣು ಮಗುವಾಗಿ ಜನಿಸಬೇಕು ! ನೀನು ಆ ರೂಪದಿಂದ ಹುಟ್ಟಿದಮೇಲೆ, ಲೋಕಕ್ಕೆ ಸಾಭೀಷ್ಟಪ್ರದೆಯೆನಿಸಿಕೊಂ ಡು, ವರದರಾದ ಇತರಶಕ್ತಿ ದೇವತೆಗಳಿಗೆಲ್ಲಾ ಆಧೇಶ್ವರಿಯೆನಿಸಿಕೊಳ್ಳು ವೆ ಮನುಷ್ಯರು ನಾನಾಬಗೆಯ ಉಪಹಾರಗಳಿಂದಲೂ, ಬಲಿದ್ರವ್ಯಗಳಿಂದ ಲೂ ನಿನ್ನನ್ನು ಪೂಜಿಸುವರು. ಮತ್ತು ನಿನಗೆ ನಾನಾವಿಧಗಳಾದ ನಾಮಧೇಯಗಳನ್ನೂ , ಸ್ಥಾನಗಳನ್ನೂ ಕಲ್ಪಿಸುವರು. ಅದರಿಂದ ನಿನಗೆ, ದುರ್ಗಿ, ಕಾಳಿ, ಭದ್ರಕಾಳಿ, ವಿಜಯೆ, ವೈಷ್ಣವಿ, ಕುಮುದೆ, ಚೆಂಡಿ, ಕೃ ಹೈ, ಮಾಧವಿ, ಕನ್ಯಕೆ, ಮಾಯೆ, ನಾರಾಯಣಿ, ಈಶಾನೆ, ಶಾರದೆ, ಅo ಬಿಕೆ, ಮೊದಲಾದ ನಾಮಗಳು ಏರ್ಪ್ಪಡುವುವು. ಮತ್ತು ನೀನು ದೇವಕಿಯ ಗರ್ಭದಲ್ಲಿ ಬಳೆಯುತಿದ್ದ ಶಿಶುವನ್ನು ಎಳೆತಂದುರೋಹಿಣಿಯ ಗರ್ಭದಲ್ಲಿಡುವು ದರಿಂದ, ಆ ಶಿಶುವಿಗೆ ಸಂಕರ್ಷಣನೆಂಬ ಹೆಸರು ಪ್ರಸಿದ್ಧವಾಗುವುದು. ಮ ತ್ತು ಆ ಶಿಶುವು ಲೋಕವನ್ನು ರಂಜಿಸತಕ್ಕೆ ತನ್ನ ಅಭಿರಾಮಗುಣಗಳಿಂದ ರಾಮನೆಂದೂ, ಬಲಾತಿಶಯದಿಂದ ಬಲಭದ್ರನೆಂದೂ ಜನರಿಂದ ಕರೆ ಯಲ್ಪಡುವನು. ಇನ್ನು ನೀನು ಹೊರಡು” ಎಂದನು. ಈ ಭಗವದಾ ಜ್ಞೆಯನ್ನು ಕೇಳಿ ಯೋಗಮಾಯೆಯು ಹಾಗೆಯೇ ಆಗ” ವೆಂದು ಹೇಳಿ, ಭಗವಂತನಿಗೆ ಪ್ರದಕ್ಷಿಣನಮಸ್ಕಾರಗಳನ್ನು ಮಾಡಿ, ಭೂಲೋಕಕ್ಕೆ ಬಂದು,