ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೩೪ ಅಧ್ಯಾ. ೨.] ದಶಮಸ್ಕಂಧವು. ಭಗವಂತನು ತನಗೆ ಆಜ್ಞಾಪಿಸಿದ್ದ ಕ್ರಮದಲ್ಲಿಯೇ ದೇವಕಿಯಲ್ಲಿದ್ದ ಗರ್ಭ ಪಿಂಡವನ್ನು ಸೆಳೆತಂದು,ರೋಹಿಣಿಯ ಉದರದಲ್ಲಿರಿಸಿದಳು. ಪೂರ್ಣಗರ್ಭಿಣಿ ಯಾಗಿ ದೇವಕಿಗೆ ಇದ್ದಕ್ಕಿದ್ದಹಾಗೆ ಗರ್ಭವು ಬತ್ತಿ ಹೋಗಿರುವುದ ನ್ನು ನೋಡಿ, ಪುರವಾಸಿಗಳೆಲ್ಲರೂ ದೇವಕಿಗೆ ಗರ್ಭಸ್ರಾವವಾಯಿತೆಂದೇ ಸಿಶ್ನ ಯಿಸಿಬಿಟ್ಟರು. ಎಲ್ಲೆಲ್ಲಿಯೂ ಈ ಪ್ರವಾದವೇ ಹರಡಿಕೊಂಡಿತು. ಕಂಸ ನಿಗೂ ಅದರಲ್ಲಿ ನಂಬಿಕೆಯು ಹುಟ್ಟಿತು. ಇಷ್ಟರಪ್ಲಿಯೇ ವಿಶ್ವಾತ್ಮಕನಾದ ಭಗವಂತನು, ಹಿಂದೆ ತಾನು ದೇವತೆಗಳಿಗೆ ಅಭಯವನ್ನು ಕೊಟ್ಟಿದಂತೆ, ತನ್ನ ಪೂರ್ಣಾಂಶದಿಂದ ವ ಸುದೇವನ ಹೃದಯದಲ್ಲಿ ಪ್ರವೇಶಿಸಿದನು ಹೀಗೆ ಪರಮಪುರುಷನ ತೇಜಸ್ಸು ತನ್ನಲ್ಲಿ ಸೇರಿದ್ದಾಗ, ವಸುದೇವನು, ಸೂ‌ನಂತೆ ಆಪೂವಾದ ಒಂದು ಕಾಂತಿವಿಶೇಷದಿಂದ ಪ್ರಕತಿಸುತ್ತ,ಕಂಸಾಬದುಷ್ಟ ಕ್ಷತ್ರಿಯರಿಗೆ ಆಗಲೇ ಭಯವನ್ನು ಹುಟ್ಟಿಸುವಂತಿದ್ದನು. ಸ್ವಲ್ಪ ಕಾಲದಲ್ಲಿಯೇ ಆ ವಸುದೇವ ನಲ್ಲಿದ್ದ ಶ್ರೀವಿಷ್ಟು ತೇಜಸ್ಸು ದೇವಕಿಯ ಗರ್ಭದಲ್ಲಿ ಪ್ರವೇಶಿಸಿತು. ಸಮ ಸ್ವಲೋಕಕ್ಕೂ ಮಂಗಳಪ್ರದನಾಗಿಯೂ, ಆಮೋಘುವಾದ ಸಂಕಲ್ಪ ಜ್ಞಾನವುಳ್ಳವನಾಗಿಯೂ, ಸಮಸ್ತಚೇತನಾಚೇತನಶರೀರಕನಾಗಿಯೂ ಇರುವ ಭಗವಂತನು ಗರ್ಭದಲ್ಲಿ ಪ್ರವೇಶಿಸಿದಾಗ, ಅವಳು ಚಂದ್ರಕಳೆ ಯೊಡಗೂಡಿದ ಪೂರೈಹಿಕ್ಕಿನಂತೆ ಪ್ರಕಾಶಿಸುತಿದ್ದಳು. ಸಮಸ್ತಲೋಕಗ ಳೆಗೂ ನಿವಾಸಭೂತನಾದ ಪರಮಪುರುಷನನ್ನೆ ತನ್ನ ಗರ್ಭದಲ್ಲಿ ಧರಿಸಿದ ಆ ದೇವಕೀದೇವಿಯು, ಕಂಸನ ಸೆರೆಯಲ್ಲಿ ಸಿಕ್ಕಿಬಿದ್ದಿದ್ದುದರಿಂದ, ಉರಿ ಯಡಗಿದ ಅಗ್ನಿ ಯಂತೆಯೂ, ನೀಚರಲ್ಲಿರುವ ಉಪನಿಷದ್ವಾಕ್ಯದಂತೆಯೂ, ಕಾಣುತಿದ್ದಳು. ಹೀಗಿದ್ದರೂ ಆ ದೇವಕಿಯು ಸಮಸ ದಿಕ್ಕುಗಳ ಬೆಳಗುವಂತಿರುವ ಆಪೂತ್ವವಾದ ಒಂದು ದಿವ್ಯ ತೇಜಸ್ಸಿನಿಂದ, ತನ್ನ ಆರ ಮನೆಯೆಲ್ಲವನ್ನೂ ಪ್ರಕಾಶಗೊಳಿಸುತ್ತಿರುವುದನ್ನು ಕಂಡು, ಕಂಸನ ಮನಸ್ಸಿಗೆ ಆಗಲೇ ಭಯವು ಹುಟ್ಟಿತು. ಆ ಭಯದಿಂದ ಕಂಸನು ತನ್ನಲ್ಲಿ ತಾನು « ಆಹಾ ! ಹಿಂದೆ ಯಾವಾಗಲೂ ನಾನು ಈಕೆಯಲ್ಲಿ ಈ ವಿಧವಾದ ಕಾಂತಿವಿಶೇಷವನ್ನು ನೋಡಿರಲಿಲ್ಲ. ಆದುದರಿಂದ ನನಗೆ ಮೃತ್ಯುವಾದ