ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬14 ೧೭nd ' ಶ್ರೀಮದ್ಭಾಗವತವು [ಅಧ್ಯಾ, ೨ ವಿಷ್ಣುವು ಇವಳ ಗರ್ಭದಲ್ಲಿ ಪ್ರವೇಶಿಸಿರುವನೆಂಬುದರಲ್ಲಿ ಸಂದೇಹವಿಲ್ಲ. ಹಾಗಿಲ್ಲದ ಪಕ್ಷದಲ್ಲಿ, ಇವಳಿಗೆ ಈ ವಿಧವಾದ ಅಪೂರೈಕಾಂತಿಯೆಲ್ಲಿಯದು?ದೇ ವತೆಗಳ ಕಾರಾರವಾಗಿ ಯತ್ನಿಸಿರುವ ವಿಷ್ಣುವೇ ಅವನು. ಅವನಿಂದ, ನನ್ನ ವೀಳ್ಯಕ್ಕೆ ಹಾನಿ ಬಾರದಂತೆ, ಈಗಲೇ ತಕ್ಕ ಉಪಾಯವನ್ನು ಮಾಡುವುದು ಮೇಲು! ಇದಕ್ಕೇನು ಮಾಡಲಿ ! ಈಗ ಈಕೆಯನ್ನೆ ಕೊಂಡುಬಿಡಲೆ! ಅದು ಯುಕ್ತವಾಗಿ ತೋರಲಿಲ್ಲ! ಈಕೆಯಾದರೋ ಅಬಲೆಯಾದ ಹೆಂಗಸು! ಇದರಮೇಲೆ ನನಗೆ ಸಾಕ್ಷಾತ್ತಾಗಿ ಒಡಹುಟ್ಟಿದ ತಂಗಿ ! ಇದರಮೇಲೆ ಗರ್ಭಿಣಿ ! ಇಂತಹ ಸ್ಥಿತಿಯಲ್ಲಿ ನಾನು ಇವಳನ್ನು ಕೊಂದರೆ, ಇದರಿಂದಲೇ ನನ್ನ ಯಶಸ್ಸಿಗೂ, ನನ್ನ ಐಶ್ವರಕ್ಕೂ, ನನ್ನ ಆಯುಸ್ಸಿಗೂ ನಾನೇ ಹಾನಿ ಯನ್ನು ತಂದುಕೊಂಡಂತಾಗುವುದು. ಗರ್ಭಿಣಿಯಾದ ಹೆಂಗಸನ್ನು ಕೊಲ್ಲತಕ್ಕವನು ಬದುಕಿದ್ದರೂ ಮೃತಪ್ರಾಯನೆನಿಸಿಕೊಳ್ಳುವನು. ಮ ತ್ಯು ದೇಹಾಭಿಮಾನದಿಂದ ಇಂತಹ ಕ್ರೂರಕಾರವನ್ನು ನಡೆಸತಕ್ಕವರು ಇಹಲೋಕದಲ್ಲಿ ಎಲ್ಲೆಲ್ಲಿಯೂ ನಿಂದಿಸಲ್ಪಡುವುದಲ್ಲದೆ, ಆ ದೇಹವು ಬಿ ಹೈುಹೋದಮೇಲೆ ಪರಲೋಕದಲ್ಲಿಯೂ ಅವರ ಆತ್ಮವು ಅಂಧತಮ ಸ್ಪೆಂಬ ನರಕದಲ್ಲಿ ಬಿದ್ದು ನರಳುವುದು. ಇದಕ್ಕೇನು ಮಾಡಲಿ”ಎಂದು ಯೋ ಚಿಸುತ್ತ, ಕೊನೆಗೆ ಗರ್ಭವತಿಯಾದ ತನ್ನ ತಂಗಿಯನ್ನು ಕೊಲ್ಲುವುದಕ್ಕೆ ಮನಸ್ಸು ಬಾರದೆ ಹಿಂತಿರುಗಿಬಿಟ್ಟನು. ತನಗೆ ಜನ್ಮ ದ್ವೇಷಿಯಾದ ಆ ಶಿಶು ವಿನ ಜನನಕಾಲವನ್ನೇ ನಿರೀಕ್ಷಿಸುತ್ತ, ಆ ಶಿಶುವಿನಮೇಲೆ ಹಗೆತೀರಿಸಿ ಕೊಳ್ಳಬೇಕೆಂದು ಎಚ್ಚರಿಕೆಯಿಂದ ಕಾದಿದ್ದನು. ಆ ಕಂಸನು ಎಚ್ಚರಗೊಂ ಇರುವಾಗಲೂ, ಮಲಗಿದಾಗಲೂ, ಸುಮ್ಮನೆ ನಿಂತಾಗಲೂ, ನಡೆಯು ವಾಗಲೂ, ಆಹಾರವನ್ನು ತೆಗೆದುಕೊಳ್ಳುವಾಗಲೂ, ಜಲಪಾನವನ್ನು ಮಾಡುವಾಗಲೂ, ಬದ್ಧದ್ವೇಷದಿಂದ ಆ ಶ್ರೀಹರಿಯನ್ನೇ ನೆನೆಸುತ್ತಿದ್ದನು. ಈ ವೈರಾನುಬಂಧದಿಂದ ಅವನಿಗೆ ಜಗತ್ತೆಲ್ಲವೂ ವಿಷ್ಣುಮಯವಾಗಿಯೇ ತೋ ರುತಿದ್ದಿತು. ಇಷ್ಟರಲ್ಲಿ ಇತ್ತಲಾಗಿ ದೇವಕಿಯ ಗರ್ಭದಲ್ಲಿ ಶ್ರೀಹರಿಯ ಶಿಶುರೂಪದಿಂದ ಬೆಳೆಯುತ್ತಿರುವುದನ್ನು ತಿಳಿದು, ಬ್ರಹ್ಮ ರುದ್ರಾದಿದೇವ ತೆಗಳೆಲ್ಲರೂ, ಮಹರ್ಷಿಗಳೊಡನೆಯೂ, ತಮ್ಮ ತಮ್ಮ ಅನುಚರರೊಡನೆಯೂ