ಕಾಲಕ್ರಮವಾಗಿ ಸೀತೆಗೆ ಗರ್ಭಚಿಹ್ನೆಗಳು ತೋರಿಬಂದು ಜಿನಪೂಜೋತ್ಸವ ವನ್ನು ಮಾಡುವ ಬಯಕೆಯು ಹುಟ್ಟಿ ಪ್ರತಿದಿನವೂ ಪೂಜೆಗೈಯುತ್ತಿರುವಲ್ಲಿ ಒಂದು ದಿನ ಆ ಸತಿಗೆ ಬಲಗಣ್ಣ ದುರಿತು. ಈ ದುಶಕುನಕ್ಕೆ ಆಕೆ ಭಯಪಟ್ಟು ಗೃಹಮ ಹರನನ್ನು ಕರೆಯಿಸಿ ಯಾರು ಏನು ಬೇಡಿದರೂ ಅವರಿಗೆ ಅದನ್ನು ಕೊಡುವುದೆಂದು ಅಪ್ಪಣೆಕೊಟ್ಟು ತಾನು ಪ್ರತಿದಿನವೂ ಜಿನಪೂಜೆಯನ್ನು ಮಾಡುತ್ತಿದ್ದಳು.
ಹೀಗಿರುವಲ್ಲಿ, ಒಂದು ದಿನ ಹಳ್ಳಿಯ ಜನರು ಬಂದು ಭಯದಿಂದ, ಮಾತ ನಾಡದೆ ಸುಮ್ಮನಿರಲು ರಾಮಸ್ವಾಮಿಯು ಅ೦ಜಬೇಡಿರೆಂದು ಅವರಿಗೆ ಹೇಳಿ, ಬಂದ ಕಾರವೇನೆಂದು ಕೇಳಿದನು. ಅದಕ್ಕೆ ಪ್ರಜೆಗಳನುಮತಿಯಿಂದ ವಿಜಯ ನೆಂಬ ಮಹತ್ತರನು “ ಮಹಾಸ್ವಾಮಿ ! ದುರಾತ್ಮನಾದ ರಾವಣನು ಬಲು ಚೆಲುವೆಯಾದ ಸೀತಾದೇವಿಯನ್ನು ಮೋಹಿಸಿ ಹಿಡಿದುಕೊಂಡು ಹೋಗಲು ಆಕೆಯು ಇದುವರೆಗೂ ಖಳನ ಮನೆಯಲ್ಲಿದ್ದಳು ; ತಾವು ವಿಚಾರಮಾಡದೆ ಆಕೆಯನ್ನೊಡ ಗೂಡಿ ಮುನ್ನಿನಂತಿರುವುದು ಧರ್ಮವೇ ? ಭೂಮಿಗಧಿಪರಾದ ತಾವು ಈ ರೀತಿ ಯಾಗಿ ಮಾಡಿದರೆ ಧರ್ಮವನ್ನು ಪರಿಪಾಲಿಸುವರಾರು ? ” ಎಂದು ಹೇಳಲು ರಾಮನು ಜನವಾರ್ತೆಯಂತೆ ತಾನು ಆಲೋಚನೆಮಾಡದೆ ಅನ್ಯಾಯವನ್ನು ಮಾಡಿದೆನೆಂದು ಪಶ್ಚಾತ್ತಾಪಪಟ್ಟು ಸೀತೆಯನ್ನು ಪರಿತ್ಯಾಗಮಾಡಲು ನಿಶ್ಚಯಿಸಿ ದನು. ಆಗ ಲಕ್ಷ್ಮಣನನ್ನು ಬರಿಸಿ ಕಟ್ಟಿಕಾಂತದಲ್ಲಿ ಈ ವೃತ್ತಾಂತವನ್ನು ಆತನಿಗೆ ತಿಳಿಸಲು ಆತನು ಕಡು ಮುಳಿದು ತಾವು ಅವಿವೇಕಿಗಳಂತೆ ಈರೀತಿ ಯಾಗಿ ನುಡಿವುದು ಅನುಚಿತವೆಂದೂ ಪತಿವ್ರತಾ ಶಿರೋಮಣಿಯಾದ ಸೀತಾದೇವಿ ಯಲ್ಲಿ ಅವಗುಣವನ್ನು ತಮ್ಮಂತಹ ಯೋಗ್ಯರು ಕಲ್ಪಿಸಬಾರದೆಂದೂ ಹೇಳಲು ರಾಮಸ್ವಾಮಿಯು, ಪುರುದೇವ ಮೊದಲಾದ ಇಕ್ಷಾಕುವಂಶದ ರಾಜರಲ್ಲಿ ಇದುವರೆಗೂ ದುಶ್ಚರಿತ್ರವಿಲ್ಲವೆಂದೂ ಅದು ಈಗ ಸಂಭವಿಸಿದರೆ ತನ್ನ ಪೌರುಷಕ್ಕೆ ಕುಂದು ಬರುವುದೆಂದೂ ಉತ್ತರವಿತ್ತು ತನಗಡ್ಡಿ ಯಾಗಿ ಬರಬೇಡವೆಂದು ಲಕ್ಷ್ಮಣನಿಗೆ ಹೇಳಿದನು. ಇದಕ್ಕೆ ಲಕ್ಷ್ಮಣನು ಸೀತಾದೇವಿಯು ದುಶ್ಚರಿತ್ರಳಾದಲ್ಲಿ ಭೂತಲವೆಲ್ಲವೂ ಕೂಡಲೆ ನಾಶವಾಗುವುದೆಂದೂ ಆಕೆಯನ್ನು ದೇವತೆಗಳು ಅರ್ಚಿಸಿ ಹೂಮಳೆಗರೆದುದೇ ಆಕೆಯ ಸುಶೀಲತೆಯನ್ನು ಪ್ರಕಟಗೊಳಿಸುವುದೆಂದೂ ಅ೦ತಹ ಪತಿವ್ರತಾ ಶಿರೋಮಣಿಯ ವಿಷಯವಾಗಿ ಕೆಟ್ಟ ಮಾತನ್ನು ಹರಡಿದ ಒಕ್ಕಲಿಗರ ನಾಲಗೆಯನ್ನು ಕಿತ್ತಿಕ್ಕುವೆನೆಂದೂ ರೋಷಾವಿಷ್ಟನಾಗಿ ನುಡಿಯಲು ರಾಮ ಸ್ವಾಮಿಯು ಆತನ ಕೈಯನ್ನು ಹಿಡಿದು ತನ್ನ ಮೇಲೆ ಆಣೆಯನ್ನಿಟ್ಟುಕೊಂಡು ಲಕ್ಷ್ಮಣನನ್ನು ಮರುಮಾತಾಡದಂತೆ ಮಾಡಿದನು.
ಆಗ ರಾಮಸ್ವಾಮಿಯು ಕೃತಾಂತವಕ್ತ್ರನನ್ನು ಕರೆದು ಅಯೋಧ್ಯಾ ನಗರದ ಸಮ್ಮೇದಪರ್ವತದ ಸಮೀಪದಲ್ಲಿರುವ ಜಿನಾಲಯಗಳನ್ನು ವಂದಿಸಬೇಕೆಂಬ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೮೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
66
ಪ೦ಪರಾಮಾಯಣದ ಕಥೆ