ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸಂ ೪೨೫ || ೭ || ದರಿವೆರಸು ನೂರ್ವರಂ ನೃಪ ತರುಣಿಯರಂ ದೇವ ಮದುವೆನಿಂದನುಪೇಂದ್ರಂ ಎಂದು ಬಿನ್ನವಿಸೆ ಕಂ| ಸೀತೆಯನೊಪ್ಪಿಸುವುದು ರಘು ಜಾತನೊಳೊಡರಿಪುದು ಸಂಧಿಯಂ ಸಂಗ್ರಾಮಂ ಪೋ ತಕ್ಕುದಲು ನಮಗವ ರೇತೆಜದೊಳಮಧಿಕರವರನಾರ್ ಗೆಲ್ಲ ಪರೋ || ೭೭ || ಎತ್ತಾ ನುಂ ಗೆಲ್ಗೊಡಮಾ ಸತ್ತಂ ಪಿಡಿವೆತ್ತ ಕುಂಭಕರ್ಣಾದಿಗಳೊಳ್ | "ಮತ್ತೇನೊಡರಿಸುವ‌ ದನು ಜೋತ್ತಂಸ ಬ೨೨ಕ್ಕೆ ಗೆಲ್ಗೊಡಂ ಫಲವುಂಟೇ | ೭೮ || ಎನೆ ಘನಾಘನ ನಿನದಮನಾಲಿಸಿದ ಪಂಚಾನನದಂತೆ ದಶಾನನಂ ಕನಲ್ಲುಕಂ|| ಇಂದ್ರನುಮಂ ಗೆಲ್ಲೆನ್ನನು ಸೇ೦ದ್ರಂ ಗೆಲ್ಪ ಪನೆ ಗೆಲ್ಗೊಡಂ ಜೀವನಮಾ || ಚಂದ್ರಾರ್ಕಮೆ ವಿಶದ ಯಶ ಶೃಂದ್ರಿಕೆಗೆ ಕಳಂಕವಾಗದಂತಿರೆ ನೆಗತ್ವಂ 1 ೭೯ || ಅದ೨೦ ನಿಮ್ಮ ಮಂತಣಕ್ಕವಸರವು ಸಿರದಿರಿಮೆಂದು ಮಂತ್ರಿಗಳಂ ಜಡಿಯೆ ರಾವಣನ ಕಬ್ಬಾಯಕ್ಕೆ ಮಯಂ ವಿಸ್ಮಯಂಬಟ್ಟು ದೇವ ನಮ್ಮ ಸೆರೆ ಗಪಾಯವಾಗದಂತು ಕಾದಿ ಗೆಲ್ವುದೆನೆ. ಕಂ || ಮಯನೆಂದುದನೆಗೊಂಡಂ ನಯ ನಿಪುಣರ್ ಪೇಡಂ ದುರಾಗ್ರಹದಿಂ ಸಂ || ಧಿಯ ಮಾತಂ ಕೈಕೊಳ್ಳನೆ | ಭಯಮಜಿಯಂ ಕದನ ಮದ ವಶಂ ದಶವದನಂ || ೮೦ || ಅ೦ತಾತನ ನುಡಿಗೊಡಂಬಟ್ಟನಂತರಂ ರಾಮಲಕ್ಷ್ಮಣರ ಪುಣ್ಯ ಪ್ರಭಾವಕ್ಕೆ ವಿಸ್ಮಯಂಬಟ್ಟು ಸಿಂಹ ಗರುಡ ವಾಹನಂಗಳಂ ಪಡೆದು ಸುಗ್ರೀವ ಪ್ರಭಾಮಂಡಲ ಮರುನ್ನಂದನಾದಿಗಳೆ ಪನ್ನಗಶರ ಪ್ರಹಾರದಿಂ ಸಮನಿಸಿದಾಸನ ಮೃತ್ಯುವನಪ ಹರಿಸಿ 1. ಮತ್ತೆನ್ನ ದೊಡರಿಸರ ದನು. ಘ, ಚ,